More

    ನಿಮ್ಮ ದಾಖಲೆ ಬಳಸಿ ಬೇರೆಯವರು ಸಿಮ್ ಖರೀದಿಸಿದ್ದರೆ ತಿಳಿಯುವುದು ಹೇಗೆ?

    ಬೆಂಗಳೂರು: ಇದು ಸೈಬರ್ ಫ್ರಾಡ್ ಜಮಾನಾ. ದಿನವೂ ಒಂದಲ್ಲ ಒಂದು ಸೈಬರ್ ವಂಚನೆಯ ಪ್ರಕರಣಗಳನ್ನು ಕೇಳುತ್ತಿರುತ್ತೇವೆ. ವಂಚಕರು ಎಲ್ಲೋ ಕುಳಿತು ಮೆಸೇಜ್ ಮಾಡಿ ಇಲ್ಲವೇ ಕರೆ ಮಾಡಿ ತಮ್ಮ ಬಲೆಗೆ ಬೀಳಿಸಿಕೊಂಡು ಹಣ ದೋಚಿರುತ್ತಾರೆ. ವಂಚಕರು ಇಂಥ ಕೆಲಸಕ್ಕೆಲ್ಲ ಇನ್ನೊಬ್ಬರ ಹೆಸರಿನಲ್ಲಿ ಇಲ್ಲವೇ ನಕಲಿ ದಾಖಲೆ ಬಳಸಿ ಸಿಮ್ ಪಡೆದಿರುತ್ತಾರೆ. ಅದೇ ಕಾರಣಕ್ಕೆ ವಂಚಕರು ಸಿಕ್ಕಿಬೀಳುವ ಬದಲು ತಪ್ಪೇ ಮಾಡದವರು ತೊಂದರೆಗೆ ಸಿಲುಕುತ್ತಾರೆ.

    ಅದರಲ್ಲೂ ಕೆಲವೊಂದು ಕಡೆ ಸಾರ್ವಜನಿಕರು ಸಿಮ್ ಖರೀದಿಸಲು ನೀಡಿದ್ದ ದಾಖಲೆ ಅಥವಾ ಇನ್ಯಾವುದಕ್ಕೋ ನೀಡಿದ್ದ ದಾಖಲೆಯ ಪ್ರತಿಗಳನ್ನು ದುರ್ಬಳಕೆ ಮಾಡಿಕೊಂಡು ಕೆಲ ವಂಚಕರು ಸಿಮ್ ಖರೀದಿಸಿ ಅದನ್ನು ಸೈಬರ್ ವಂಚನೆಗೆ ಬಳಸಿದ್ದ ಪ್ರಕರಣಗಳೂ ನಡೆದಿವೆ. ಹಾಗಿದ್ದರೆ ನಮ್ಮ ಹೆಸರಿನಲ್ಲಿ ಬೇರೆ ಯಾರಾದರೂ ಸಿಮ್ ಖರೀದಿಸಿದ್ದರೆ ಪತ್ತೆ ಹಚ್ಚುವುದು ಹೇಗೆ ಎಂಬುದಕ್ಕೆ ಮಾಹಿತಿ ಇಲ್ಲಿದೆ.

    ಇದನ್ನೂ ಓದಿ: ದಂಪತಿ ಮಧ್ಯೆ ಪ್ರೀತಿ ಇದ್ದರೂ ದಾಂಪತ್ಯ ದ್ರೋಹ; ವಿವಾಹೇತರ ಸಂಬಂಧದ ಬಗ್ಗೆ ಇಲ್ಲ ಪಶ್ಚಾತ್ತಾಪ: ಏನಿದು ಅಧ್ಯಯನ?

    ಇದಕ್ಕೆಂದೇ ಭಾರತೀಯ ದೂರಸಂಪರ್ಕ ಇಲಾಖೆ ವ್ಯವಸ್ಥೆಯೊಂದನ್ನು ಮಾಡಿದೆ. ಟೆಲಿಕಾಂ ಅನಾಲಿಟಿಕ್ಸ್​ ಫಾರ್ ಫ್ರಾಡ್​ ಮ್ಯಾನೇಜ್​ಮೆಂಟ್​ ಆ್ಯಂಡ್ ಕನ್​ಸ್ಯೂಮರ್​ ಪ್ರೊಟೆಕ್ಷನ್ ​(ಟ್ಯಾಫ್​ಕಾಪ್-TAFCOP) ಮೂಲಕ ಅಕ್ರಮವಾಗಿ ಖರೀದಿಸಿದ್ದ ಇಲ್ಲವೇ ಸಾರ್ವಜನಿಕರ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ಪಡೆದ ಸಿಮ್​ಗಳ ಮಾಹಿತಿ ತಿಳಿದುಕೊಳ್ಳಬಹುದು.

    ಸಾರ್ವಜನಿಕರು ತಮ್ಮ ಹೆಸರಿನಲ್ಲಿ ಬೇರೆ ಯಾರಾದರೂ ಅಕ್ರಮವಾಗಿ ಸಿಮ್​ ಖರೀದಿಸಿದ್ದಾರೆಯೇ ಎಂಬುದನ್ನು ಕೇಂದ್ರ ಸರ್ಕಾರದ ಅಧಿಕೃತ ಜಾಲತಾಣ ( https://sancharsaathi.gov.in/ ) ಮೂಲಕ ತಿಳಿಯಬಹುದು. ಈ ಜಾಲತಾಣದ ಹೋಮ್​ ಪೇಜ್​ನಲ್ಲಿ Know your mobile connections TAFCOP ಎಂಬುದನ್ನು ಕ್ಲಿಕ್ ಮಾಡಿದರೆ ಹೊಸದೊಂದು ಪೇಜ್ ತೆರೆದುಕೊಳ್ಳುತ್ತದೆ.

    ಇದನ್ನೂ ಓದಿ: ಪ್ರವೀಣ್​ ನೆಟ್ಟಾರು ಪತ್ನಿಯ ಉದ್ಯೋಗ ವಿಚಾರ: ಸಿಎಂ ಅವರಿಂದ ಮಹತ್ವದ ನಿರ್ಣಯ

    ಅಲ್ಲಿ ಮೊಬೈಲ್​ಫೋನ್​ ನಂಬರ್, ಕ್ಯಾಪ್ಚಾ ನಮೂದಿಸಿದರೆ ಆ ಫೋನ್​ ನಂಬರ್​ಗೆ ಒಟಿಪಿ ಬರುತ್ತದೆ. ಒಟಿಪಿ ದಾಖಲಿಸಿ ಲಾಗಿನ್ ಆಗುತ್ತಿದ್ದಂತೆ ನಮ್ಮ ಆ ಸಿಮ್ ಖರೀದಿಗೆ ನೀಡಿದ್ದ ದಾಖಲೆಯಲ್ಲಿ ಎಷ್ಟು ಸಿಮ್ ಖರೀದಿ ಆಗಿದೆ ಎಂಬ ಮಾಹಿತಿ ಸಿಗುತ್ತದೆ. ಅಂದರೆ ಆ ದಾಖಲೆ ಮೂಲಕ ಸಿಮ್ ಪಡೆದಿರುವ ಎಲ್ಲ ಫೋನ್​ ನಂಬರ್​ಗಳು ಅಲ್ಲಿ ಕಾಣಿಸಿಕೊಳ್ಳುತ್ತವೆ. ಒಂದುವೇಳೆ ಅದರಲ್ಲಿ ನಮ್ಮದಲ್ಲದ ಸಿಮ್​ ಇರುವುದು ಗೊತ್ತಾದಲ್ಲಿ ಅಲ್ಲೇ Not My Number ಇಲ್ಲವೇ Not Required ಎಂಬುದನ್ನು ಕ್ಲಿಕ್ ಮಾಡುವ ಮೂಲಕ ಅಂಥ ಸಿಮ್​ಗಳನ್ನು ಬ್ಲಾಕ್ ಮಾಡಿಸಬಹುದು.

    ಅಕ್ರಮ ಸಿಮ್ ಪತ್ತೆಗೆ ಈ ಕೆಳಗಿನ ಲಿಂಕ್​ ಮೂಲಕ ನೇರವಾಗಿಯೂ ಪ್ರವೇಶ ಪಡೆಯಬಹುದು.
    https://tafcop.sancharsaathi.gov.in/telecomUser/

    ವೃದ್ಧೆಯ ಕೈಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್​ ಹಾಕಿ ಕೊಲೆಗೈದು ಚಿನ್ನಾಭರಣ ಒಯ್ದ ದುಷ್ಕರ್ಮಿಗಳು!

    ಯಾವ ಸಮಯದಲ್ಲಿ ವ್ಯಾಯಾಮ ಒಳ್ಳೆಯದು?; ಈ ಅವಧಿಯೇ ಸೂಕ್ತವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts