More

    ದಂಪತಿ ಮಧ್ಯೆ ಪ್ರೀತಿ ಇದ್ದರೂ ದಾಂಪತ್ಯ ದ್ರೋಹ; ವಿವಾಹೇತರ ಸಂಬಂಧದ ಬಗ್ಗೆ ಇಲ್ಲ ಪಶ್ಚಾತ್ತಾಪ: ಏನಿದು ಅಧ್ಯಯನ?

    ನವದೆಹಲಿ: ಇಲ್ಲಿ ಪರಸ್ಪರ ಪ್ರೀತಿ ಇದೆ, ಆದರೂ ಇಬ್ಬರ ಮಧ್ಯೆ ದಾಂಪತ್ಯ ದ್ರೋಹವೂ ಇದೆ. ಅದಾಗ್ಯೂ ವಿವಾಹೇತರ ಸಂಬಂಧದ ಬಗ್ಗೆ ಪಶ್ಚಾತ್ತಾಪ ಇಲ್ಲ ಎಂಬುದನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ. ವಿವಾಹಿತರು ಹಾಗೂ ರಿಲೇಷನ್​ಷಿಪ್​ನಲ್ಲಿ ಇರುವವರನ್ನು ಒಳಗೊಂಡ ಅಧ್ಯಯನದಲ್ಲಿ ಇಂಥದ್ದೊಂದು ಅಂಶ ಕಂಡುಬಂದಿದೆ.

    ಆರ್ಕೈವ್ಸ್ ಆಫ್ ಸೆಕ್ಷುವಲ್ ಬಿಹೇವಿಯರ್ ಎಂಬ ಜರ್ನಲ್​ನಲ್ಲಿ ಈ ಅಧ್ಯಯನದ ವಿವರ ಪ್ರಕಟಗೊಂಡಿದೆ. ಸಾಮಾನ್ಯವಾಗಿ ವಿವಾಹಿತರ ಪೈಕಿ ಶೇ.20-25 ಹಾಗೂ ರಿಲೇಷನ್​ಸಿಪ್​ನಲ್ಲಿರುವ ಯುವಪೀಳಿಗೆ ಪೈಕಿ ಶೇ. 33-50 ಮಂದಿ ತಮ್ಮ ಸಂಗಾತಿಗೆ ಮೋಸ ಮಾಡಿ ಇನ್ನೊಂದು ಸಂಬಂಧ ಹೊಂದಿರುತ್ತಾರೆ ಎಂಬುದನ್ನು ಈ ಅಧ್ಯಯನ ಹೇಳಿದೆ.

    ಯುಎಸ್​ ಮೂಲದ ಜಾನ್ಸ್​ ಹಾಪ್​ಕಿನ್ಸ್​ ಯುನಿವರ್ಸಿಟಿಯು ವಿವಾಹೇತರ ಸಂಬಂಧಕ್ಕೆಂದೇ ಇರುವ ಆಷ್​ಲೇ ಮ್ಯಾಡಿಷನ್​ ವೆಬ್​ಸೈಟ್​ ಮೂಲಕ ಜನರನ್ನು ಸಂಪರ್ಕಿಸಿ ಈ ಅಧ್ಯಯನ ನಡೆಸಿದೆ. ಸಾಮಾನ್ಯವಾಗಿ ವಿವಾಹೇತರ ಸಂಬಂಧ ಹೊಂದಿದ್ದವರಲ್ಲಿ ಒಂದು ಪಶ್ಚಾತ್ತಾಪ ಇರುತ್ತದೆ. ಆದರೆ ನಾವು ಕೈಗೊಂಡ ಸಮೀಕ್ಷೆಯಲ್ಲಿ ಭಾಗಿಯಾದವರಲ್ಲಿ ಅಂಥ ಪಶ್ಚಾತ್ತಾಪವಿಲ್ಲ ಎಂಬುದಾಗಿ ಅಧ್ಯಯನದ ಮುಖ್ಯಸ್ಥ ಡಾ.ಡೈಲನ್​ ಸೆಲ್ಟರ್​ಮನ್​ ತಿಳಿಸಿದ್ದಾರೆ.

    ಇದನ್ನೂ ಓದಿ: ಪೂಜೆಯಿಂದಾಗಿ ಪ್ರಾಣಾಪಾಯದಿಂದ ಪಾರಾದ ಉದ್ಯಮಿ!; ಆಗಿದ್ದೇನು?​

    ವಿವಾಹೇತರ ಸಂಬಂಧಲ್ಲಿರುವವರು ತೃಪ್ತಿಯ ಭಾವನೆ ಅನುಭವಿಸುತ್ತಾರೆ, ಸೀಮಿತ ಪಶ್ಚಾತ್ತಾಪ ಪ್ರದರ್ಶಿಸುತ್ತಾರೆ ಮತ್ತು ಸಂಗಾತಿಗೆ ಮಾಡುವ ಮೋಸ ತಮ್ಮ ವೈವಾಹಿಕ ಜೀವನಕ್ಕೆ ಹಾನಿ ಮಾಡುವುದಿಲ್ಲ ಎಂದು ನಂಬುತ್ತಾರೆ ಎಂದು ಈ ಅಧ್ಯಯನ ಹೇಳಿದೆ.

    ಸುಮಾರು 2 ಸಾವಿರ ಜನರನ್ನು ವಿವಾಹೇತರ ಸಂಬಂಧಕ್ಕೂ ಮೊದಲು ಮತ್ತು ನಂತರ ಸಂಪರ್ಕಿಸಿ ಈ ಅಧ್ಯಯನ ನಡೆಸಲಾಗಿದೆ. ಅಂಥವರ ಬಳಿ ಅವರ ವೈವಾಹಿಕ ಜೀವನದ ಸ್ಥಿತಿ, ವಿವಾಹೇತರ ಸಂಬಂಧಕ್ಕೆ ಕಾರಣ ಹಾಗೂ ಸಾಮಾನ್ಯ ಜೀವನದ ಕುರಿತು ಪ್ರಶ್ನಿಸಲಾಗಿದೆ. ಹೀಗೆ ವಿವಾಹೇತರ ಸಂಬಂಧ ಇರುವಂಥ ದಂಪತಿಯ ಮಧ್ಯೆ ಹೆಚ್ಚಿನ ಪ್ರೀತಿಯೂ ಇರುವುದು ಕಂಡುಬಂದಿದೆ ಎಂದು ಸಮೀಕ್ಷೆ ಹೇಳಿದೆ.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಅಲ್ಲದೆ ಸಂಬಂಧದಲ್ಲಿನ ಸಾಮಾನ್ಯ ಸಮಸ್ಯೆಗಳಾದ ಪ್ರೀತಿಯ ಕೊರತೆ, ಸಿಟ್ಟು ಮುಂತಾದವು ಇಂಥವರಲ್ಲಿ ತುಂಬಾ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿದೆ. ಆದರೆ ಲೈಂಗಿಕ ಸುಖದ ಕೊರತೆಯೇ ಇವರ ವಿವಾಹೇತರ ಸಂಬಂಧಕ್ಕೆ ಕಾರಣ. ಹೆಚ್ಚಿನ ಲೈಂಗಿಕ ತೃಪ್ತಿ ಹಾಗೂ ಭಾವನಾತ್ಮಕ ಸಂತೃಪ್ತಿಗಾಗಿ ವಿವಾಹೇತರ ಸಂಬಂಧವನ್ನು ಹೊಂದಲಾಗುತ್ತಿದೆ ಎಂದು ಡಾ.ಸೆಲ್ಟರ್​ಮನ್​ ಹೇಳಿದ್ದಾರೆ.

    ನಾವು ಭಾವಿಸಿದ್ದಕ್ಕೆ ಹೋಲಿಸಿದರೆ ದಾಂಪತ್ಯ ದ್ರೋಹದ ಕುರಿತು ಹೆಚ್ಚು ಸಂಕೀರ್ಣವಾದ ಚಿತ್ರವನ್ನು ಈ ಸಮೀಕ್ಷೆ ತೋರಿಸಿದೆ. ದಾಂಪತ್ಯ ದ್ರೋಹ ಯಾವಾಗಲೂ ಗಾಢ ಸಂಬಂಧದ ಸಮಸ್ಯೆಗಳ ಪರಿಣಾಮವಲ್ಲ ಎಂದು ಈ ಸಮೀಕ್ಷೆಗಳಲ್ಲಿನ ಅಂಶಗಳು ಸೂಚಿಸಿವೆ.

    ಇದನ್ನೂ ಓದಿ: ಹಾಲಿನ ಮತ್ತೊಂದು ಬ್ರ್ಯಾಂಡ್​ಗೂ ಅಮುಲ್ ಆತಂಕ; ಎಲ್ಲಿ, ಯಾವುದು?

    ಮೋಸ ಮಾಡಲು ಜನರಿಗೆ ವಿವಿಧ ಪ್ರೇರಣೆಗಳಿವೆ. ಕೆಲವೊಮ್ಮೆ ಅವರು ತಮ್ಮ ಸಂಬಂಧಗಳು ತುಂಬಾ ಉತ್ತಮವಾಗಿದ್ದರೂ ಮೋಸ ಮಾಡುತ್ತಾರೆ. ದಾಂಪತ್ಯ ದ್ರೋಹಕ್ಕೆ ಸಂಬಂಧದ ಗುಣಮಟ್ಟದಲ್ಲಿ ಲೋಪ ಅಥವಾ ಕಡಿಮೆ ಜೀವನತೃಪ್ತಿ ಕಾರಣ ಎಂಬುದಕ್ಕೆ ಇಲ್ಲಿ ದೃಢವಾದ ಪುರಾವೆಗಳು ಕಾಣಿಸುವುದಿಲ್ಲ. ಜನರು ತಮ್ಮ ಸಂಗಾತಿ ತನ್ನ ಜೀವನದ ಮುಂದಿನ 50 ವರ್ಷಗಳವರೆಗೆ ಒಬ್ಬ ವ್ಯಕ್ತಿ ಜತೆ ಲೈಂಗಿಕ ಕ್ರಿಯೆ ನಡೆಸುವುದರಿಂದ ಸಂಪೂರ್ಣವಾಗಿ ತೃಪ್ತರಾಗುತ್ತಾರೆ ಎಂದು ಭಾವಿಸುತ್ತಾರೆ. ಆದರೆ ಬಹಳಷ್ಟು ಜನರ ಬದುಕಲ್ಲಿ ಅದು ಸುಳ್ಳಾಗಿರುತ್ತದೆ ಎಂದು ಈ ಸಮೀಕ್ಷೆಯಿಂದ ತಿಳಿದಿದ್ದಾಗಿ ಡಾ.ಸೆಲ್ಟರ್​​ಮನ್ ಹೇಳಿದ್ದಾರೆ. –ಏಜೆನ್ಸೀಸ್

    ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದ ಕೊಂಬೆ; ಮುರಿದೇ ಹೋಯ್ತು ಸವಾರನ ಕಾಲು, ತಲೆಗೆ ಗಂಭೀರ ಗಾಯ!

    22 ವರ್ಷ ತನ್ನೊಳಗಿದ್ದ ಹೃದಯವನ್ನು 16 ವರ್ಷಗಳ ಬಳಿಕ ಮ್ಯೂಸಿಯಮ್​ನಲ್ಲಿ ಕಣ್ಣೆದುರೇ ಕಂಡಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts