ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದ ಕೊಂಬೆ; ಮುರಿದೇ ಹೋಯ್ತು ಸವಾರನ ಕಾಲು, ತಲೆಗೆ ಗಂಭೀರ ಗಾಯ!

Injury
Published on

ಬೆಂಗಳೂರು: ಇದಕ್ಕೆ ಕಾರಣ ಗ್ರಹಚಾರವೋ, ಬಿಬಿಎಂಪಿಯೋ ಎಂದು ಸ್ಪಷ್ಟವಾಗಿ ಹೇಳುವುದು ಕಷ್ಟ. ಆದರೆ ಈ ಘಟನೆ ವ್ಯಕ್ತಿಯೊಬ್ಬ ಜೀವನ್ಮರಣ ಹೋರಾಟ ನಡೆಸುವಂತೆ ಮಾಡಿರುವುದಂತೂ ನಿಜ. ಬೆಂಗಳೂರಿನ ಜೆ.ಪಿ.ನಗರದಲ್ಲಿ ಈ ಪ ನಡೆದಿದೆ.

ದ್ವಿಚಕ್ರ ವಾಹನ ಸವಾರ ಶ್ರೀಧರ್ ಈ ಪ್ರಕರಣದಲ್ಲಿ ಗಾಯಗೊಂಡವರು. ಇವರು ಇಂದು ಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದಾಗ ಜೆ.ಪಿ.ನಗರ 21ನೇ ಮುಖ್ಯರಸ್ತೆಯಲ್ಲಿ ಮರದ ಕೊಂಬೆ ವಾಹನದ ಮೇಲೇ ಬಿದ್ದಿದೆ. ಪರಿಣಾಮವಾಗಿ ಶ್ರೀಧರ್ ಕಾಲು ಮುರಿದು ಹೋಗಿದ್ದು, ತಲೆಗೂ ಗಂಭೀರ ಗಾಯವಾಗಿದೆ. ಬೈಕ್ ಕೂಡ ಜಖಂಗೊಂಡಿದೆ.

ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಾಳುವಿನ ಸಂಬಂಧಿ ಬಿಬಿಎಂಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮರಗಳ ನಿರ್ವಹಣೆಯನ್ನು ಪಾಲಿಕೆ ಸರಿಯಾಗಿ ನಿಭಾಯಿಸದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ನೆರವಾಗುವಂತೆ ಸರ್ಕಾರದ ಗಮನ ಸೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net