ಪೂಜೆಯಿಂದಾಗಿ ಪ್ರಾಣಾಪಾಯದಿಂದ ಪಾರಾದ ಉದ್ಯಮಿ!; ಆಗಿದ್ದೇನು?​

Jeep Thar
Published on

ವಿಜಯಪುರ: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮೇಲೆ ದಾಳಿ ನಡೆದಿದ್ದು, ಲಾಂಗ್ ಹಾಗೂ ಹಾಕಿ ಸ್ಟಿಕ್​ನಿಂದ ಅವರ ವಾಹನದ ಗಾಜನ್ನು ಪುಡಿಗೈಯಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಹೊರವಲಯದಲ್ಲಿ ಈ ದಾಳಿ ನಡೆದಿದೆ. ಗಂಗುಸಿಂಗ್ ರಜಪೂತ ದಾಳಿಗೊಳಗಾದ ರಿಯಲ್​ ಎಸ್ಟೇಟ್​ ಉದ್ಯಮಿ. ಇವರ ಮಹಿಂದ್ರ ಥಾರ್ ವಾಹನ ಜಖಂಗೊಂಡಿದೆ.

ಪಲ್ಸರ್ ಬೈಕ್​ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಬಸವನ ಬಾಗೇವಾಡಿ ಪಟ್ಟಣದ ಹೊರವಲಯದ ಆಂಜನೇಯ ದೇವಸ್ಥಾನ ಬಳಿ ಕಾರ್ ನಿಲ್ಲಿಸಿ ಪೂಜೆ ಸಲ್ಲಿಸುವಾಗ ಜೀಪ್ ಮೇಲೆ ದಾಳಿ ನಡೆದಿತ್ತು.

ಜೀಪ್​​ನಲ್ಲಿ ಉದ್ಯಮಿ ಗಂಗುಸಿಂಗ್ ಇದ್ದಾನೆ ಎಂದು ಭಾವಿಸಿ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಆದರೆ ಆತ ಅದರಲ್ಲಿ ಇಲ್ಲದ ಕಾರಣ ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸವನ ಬಾಗೇವಾಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net