More

  ಯಾವ ಸಮಯದಲ್ಲಿ ವ್ಯಾಯಾಮ ಒಳ್ಳೆಯದು?; ಈ ಅವಧಿಯೇ ಸೂಕ್ತವಂತೆ!

  ಬೆಂಗಳೂರು: ದೈನಂದಿನ ಜೀವನದಲ್ಲಿ ವ್ಯಾಯಾಮದ ಪಾತ್ರ ಬಹುದೊಡ್ಡದು. ಆರೋಗ್ಯಕರ ಜೀವನಕ್ಕೆ ಸರಿಯಾದ ಆಹಾರ, ಸೂಕ್ತ ವ್ಯಾಯಾಮ ಅತಿಮುಖ್ಯ. ಹೀಗಾಗಿ ಬಹುತೇಕ ಎಲ್ಲರೂ ಬೆಳಗ್ಗೆ ಇಲ್ಲವೇ ಸಂಜೆ ಒಂದಷ್ಟು ವ್ಯಾಯಾಮ ಮಾಡುವುದು ಸರ್ವೇಸಾಮಾನ್ಯ.

  ಕೆಲವರಿಗೆ ಬೆಳಗ್ಗೆ ವ್ಯಾಯಾಮ ಮಾಡುವುದು ಹಿತ ಎನಿಸಿದರೆ, ಇನ್ನು ಕೆಲವರಿಗೆ ಸಂಜೆ ವ್ಯಾಯಾಮ ಮಾಡುವುದು ಒಳ್ಳೆಯದು ಅನಿಸಬಹುದು. ಅದಾಗ್ಯೂ ಅವರವರ ಅನುಕೂಲಕ್ಕೆ ತಕ್ಕಂತೆ ಎಲ್ಲರೂ ವ್ಯಾಯಾಮದಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದರೆ ವ್ಯಾಯಾಮ ಮಾಡಲು ಸರಿಯಾದ ಸಮಯ ಯಾವುದು ಎನ್ನುವ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ.

  ಇದನ್ನೂ ಓದಿ: ದಂಪತಿ ಮಧ್ಯೆ ಪ್ರೀತಿ ಇದ್ದರೂ ದಾಂಪತ್ಯ ದ್ರೋಹ; ವಿವಾಹೇತರ ಸಂಬಂಧದ ಬಗ್ಗೆ ಇಲ್ಲ ಪಶ್ಚಾತ್ತಾಪ: ಏನಿದು ಅಧ್ಯಯನ?

  ಆರೋಗ್ಯ ಪರಿಣತ ಕೆಲವರ ಪ್ರಕಾರ ವ್ಯಾಯಾಮಕ್ಕೆ ಸರಿಯಾದ ಸಮಯ ಎಂದರೆ ಮಧ್ಯಾಹ್ನ 2ರಿಂದ ಸಂಜೆಯ 6ರ ಒಳಗಿನ ಅವಧಿ. ಕೇಳಲಿಕ್ಕೆ ಇದು ಸ್ವಲ್ಪ ವಿಚಿತ್ರ ಅನಿಸಿದರೂ ಈ ಸಮಯದಲ್ಲಿ ವ್ಯಾಯಾಮ ಮಾಡುವುದು ಸೂಕ್ತ ಹಾಗೂ ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ.

  ಇದನ್ನೂ ಓದಿ: ಕಾಡಾನೆ ತುಳಿತಕ್ಕೆ ಮಹಿಳೆ ಬಲಿ; ಯಾರಿಗೂ ಗೊತ್ತಾಗದಂತೆ ಶವ ಕೊಂಡೊಯ್ಯಲು ಅಧಿಕಾರಿಗಳ ತಾಕೀತು?

  ಈ ಸಮಯದಲ್ಲಿ ಜಿಮ್​ಗೆ ವರ್ಕೌಟ್​ ಮಾಡಲು ಹೋದರೆ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡುಬರಲಿದೆ. ಈ ಅವಧಿಯಲ್ಲಿ ದೇಹದ ಕ್ಷಮತೆ ಹೆಚ್ಚಾಗಿರುತ್ತದೆ. ಅಲ್ಲದೆ ದೇಹದ ತಾಪಮಾನ ಈ ವೇಳೆ ಗರಿಷ್ಠ ಇರುವುದರಿಂದ ಸ್ನಾಯುವಿನ ಶಕ್ತಿ ಹಾಗೂ ಕಿಣ್ವದ ಚಟುವಟಿಕೆಗಳೂ ಅಧಿಕವಾಗಿರುತ್ತವೆ. ದೇಹದ ಪ್ರತಿಸ್ಪಂದನೆ ಕೂಡ ಇದೇ ಸಮಯದಲ್ಲಿ ಹೆಚ್ಚಿರುತ್ತದೆ. ಮಾತ್ರವಲ್ಲ ಹೃದಯಬಡಿತ ಮತ್ತು ರಕ್ತದೊತ್ತಡ ಈ ಸಮಯದಲ್ಲಿ ಕಡಿಮೆ ಇರುವುದರಿಂದ ಅಪಾಯದ ಸಾಧ್ಯತೆ ಕಡಿಮೆ. ಜತೆಗೆ 2-6ರ ವೇಳೆಯ ವ್ಯಾಯಾಮ ನಿದ್ರೆಯ ಗುಣಮಟ್ಟವನ್ನೂ ಹೆಚ್ಚಿಸುತ್ತದೆ ಎನ್ನಲಾಗಿದೆ.

  ಶಿಕ್ಷಣ ಕ್ಷೇತ್ರದ ಪ್ರಗತಿಗೆ ಸರ್ಕಾರ ಆದ್ಯತೆ; ವಿಜಯವಾಣಿ-ದಿಗ್ವಿಜಯ ನ್ಯೂಸ್ ‘ಎಜುಕೇಷನ್ ಎಕ್ಸ್‌ಪೋ’ನಲ್ಲಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ

  ಬಸ್​​ನಲ್ಲಿ ಪತ್ನಿಗೆ ಟಿಕೆಟ್ ಪಡೆಯಲು ಒಪ್ಪದ ಪತಿ; ಉಚಿತ ಪ್ರಯಾಣ ಗ್ಯಾರಂಟಿ ಸೃಷ್ಟಿಸಿದ ಅಧ್ವಾನ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts