More

    ಬಸ್​​ನಲ್ಲಿ ಪತ್ನಿಗೆ ಟಿಕೆಟ್ ಪಡೆಯಲು ಒಪ್ಪದ ಪತಿ; ಉಚಿತ ಪ್ರಯಾಣ ಗ್ಯಾರಂಟಿ ಸೃಷ್ಟಿಸಿದ ಅಧ್ವಾನ

    ಕೊಪ್ಪಳ: ಚುನಾವಣಾಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳ ಪ್ರಯೋಜನ ಪಡೆಯಲು ಜನರು ಅದಾಗಲೇ ಉತ್ಸುಕರಾಗಿರುವುದರಿಂದ ಮತ್ತು ಗ್ಯಾರಂಟಿಗಳ ಕುರಿತು ಸರ್ಕಾರದಿಂದ ಇನ್ನೂ ಸ್ಪಷ್ಟ ಚಿತ್ರಣ ಹೊರಹೊಮ್ಮದ್ದರಿಂದ ನಾಡಿನಾದ್ಯಂತ ಅಧ್ವಾನಗಳು ನಡೆಯುತ್ತಿದ್ದು, ಕೆಲವೆಡೆ ಸಾರ್ವಜನಿಕರು ಮತ್ತು ಸರ್ಕಾರಿ ಅಧಿಕಾರಿ/ಸಿಬ್ಬಂದಿ ಮಧ್ಯೆ ಸಂಘರ್ಷಗಳೂ ನಡೆಯುತ್ತಿವೆ.

    ಪ್ರತಿ ಮನೆಗೆ 200 ಯುನಿಟ್ ವಿದ್ಯುತ್​ ಉಚಿತ ಎಂಬ ಘೋಷಣೆ ಹಿನ್ನೆಲೆಯಲ್ಲಿ ಜನರು ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಹೇಳುತ್ತಿರುವುದು ಒಂದೆಡೆಯಾದರೆ, ಬಿಲ್ ನೀಡಲು ಬಂದ ಸಿಬ್ಬಂದಿಗೆ ಬೈದು ಕಳಿಸುತ್ತಿರುವ ಘಟನೆಗಳೂ ನಡೆದಿವೆ. ಮಾತ್ರವಲ್ಲ, ಈ ಗ್ಯಾರಂಟಿಗಳ ಅವ್ಯವಸ್ಥೆ, ದುರ್ಬಳಕೆ ಕುರಿತಾಗಿಯೂ ಸಾಕಷ್ಟು ಮೀಮ್ಸ್​/ಟ್ರೋಲ್​ಗಳು ಕೂಡ ಕಂಡುಬರುತ್ತಿವೆ.

    ಇದನ್ನೂ ಓದಿ: ಮೋದಿ ಸರ್ಕಾರದ 9 ವರ್ಷಗಳ ಸಂಭ್ರಮ: ತಿಂಗಳಿಡೀ ದೇಶಾದ್ಯಂತ ನಡೆಯಲಿದೆ 50 ರ‌್ಯಾಲಿ

    ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಬಸ್​ನಲ್ಲಿ ತಾನು ಮಾತ್ರ ಟಿಕೆಟ್ ಪಡೆದು ಪತ್ನಿಗೆ ಟಿಕೆಟ್ ಪಡೆಯಲು ಒಪ್ಪದ ಪ್ರಕರಣವೂ ನಡೆದಿದೆ. ಕೊಪ್ಪಳದ ಗಂಗಾವತಿಯಿಂದ ಹುಲಿಗಿ ಗ್ರಾಮಕ್ಕೆ ಸಂಚರಿಸುವ ಸರ್ಕಾರಿ ಬಸ್​ನಲ್ಲಿ ಈ ಪ್ರಕರಣ ನಡೆದಿದೆ. ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ ಎಂದು ಕಾಂಗ್ರೆಸ್ ಘೋಷಿಸಿದ್ದು, ಸಿಎಂ ಸಿದ್ದರಾಮಯ್ಯ ಆದೇಶ ಕೂಡ ಹೊರಡಿಸಿದ್ದಾರೆ. ಹೀಗಾಗಿ ನಾನು ಪತ್ನಿಗೆ ಟಿಕೆಟ್ ಪಡೆಯುವುದಿಲ್ಲ ಎಂದು ಈ ವ್ಯಕ್ತಿ ಪಟ್ಟು ಹಿಡಿದ ಕಾರಣ, ಬಸ್ ಸಿಬ್ಬಂದಿ ಜತೆ ಸಂಘರ್ಷ ಉಂಟಾಗಿತ್ತು. ಇದೇ ವಿಚಾರವಾಗಿ ಪ್ರಯಾಣಿಕರು ಹಾಗೂ ಚಾಲಕ-ನಿರ್ವಾಹಕರ ನಡುವೆ ಕೆಲಹೊತ್ತು ಭಾರಿ ವಾಗ್ವಾದ ನಡೆದ ವಿಡಿಯೋ ಹರಿದಾಡಲಾರಂಭಿಸಿದೆ.

    ದಂಪತಿ ಮಧ್ಯೆ ಪ್ರೀತಿ ಇದ್ದರೂ ದಾಂಪತ್ಯ ದ್ರೋಹ; ವಿವಾಹೇತರ ಸಂಬಂಧದ ಬಗ್ಗೆ ಇಲ್ಲ ಪಶ್ಚಾತ್ತಾಪ: ಏನಿದು ಅಧ್ಯಯನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts