More

    ‘ನಿನ್ನನ್ನು, ನಿನ್ನ ಮಕ್ಕಳನ್ನು ಜೀವಸಹಿತ ಬಿಡಲ್ಲ’ ಎಂದು ಕೆಎಎಸ್​ ಅಧಿಕಾರಿಗೆ ಕೊಲೆ ಬೆದರಿಕೆ: ಡಾ.ಸಂಜಯ್ ವಿರುದ್ಧ ಎಫ್​ಐಆರ್​

    ಬೆಂಗಳೂರು: ಹಣ ಕೊಡಲು ನಿರಾಕರಿಸಿದ್ದಕ್ಕೆ ಮಹಿಳಾ ಕೆಎಎಸ್ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದು ಜೀವ ಬೆದರಿಕೆ ಹಾಕಿದ ಆರೋಪದಡಿ ಸಹೋದರನ ವಿರುದ್ಧ ಕೆಎಎಸ್ ಅಧಿಕಾರಿ ದೂರು ನೀಡಿದ್ದಾರೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

    ಜಯನಗರ 5ನೇ ಬ್ಲಾಕ್ ನಿವಾಸಿ ಡಾ.ಮೈತ್ರಿ ಹಲ್ಲೆಗೊಳಗಾದವರು. ಇವರು ನೀಡಿದ ದೂರಿನ ಮೇರೆಗೆ ಜಯನಗರ ನಿವಾಸಿ ಹಾಗೂ ಡಾ.ಮೈತ್ರಿ ತಮ್ಮನಾದ ಡಾ.ಸಂಜಯ್ ಎಂಬಾತನ ವಿರುದ್ಧ ಕೊಲೆ ಬೆದರಿಕೆ, ಹಲ್ಲೆ ಸೇರಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: 9 ವರ್ಷ, 9 ಪ್ರಶ್ನೆ: ಮೌನ ಮುರಿದು ಉತ್ತರಿಸಿ ಎಂದು ಮೋದಿಗೆ ಕಾಂಗ್ರೆಸ್ ಸವಾಲು

    ಏನಿದು ಘಟನೆ?: ಕೆಎಎಸ್ ಅಧಿಕಾರಿ ಡಾ.ಮೈತ್ರಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಯನಗರದ 5ನೇ ಬ್ಲಾಕ್‌ನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ. ಇವರ ತಮ್ಮ ಡಾ.ಸಂಜಯ್ ಜಯನಗರದಲ್ಲೇ ಪ್ರತ್ಯೇಕವಾಗಿ ವಾಸವಾಗಿದ್ದಾನೆ. ಕಳೆದ ಎರಡು ವರ್ಷಗಳಿಂದ ಸಂಜಯ್, ಡಾ.ಮೈತ್ರಿ ಮನೆಗೆ ಆಗಾಗ ಬಂದು ಹೊಸದಾಗಿ ಬಿಜಿನೆಸ್ ಮಾಡಬೇಕು. ಮೂರು ಕೋಟಿ ರೂ. ಹಣ ನೀಡುವಂತೆ ಒತ್ತಾಯ ಮಾಡುತ್ತಿದ್ದ. ಈ ವೇಳೆ ಡಾ.ಮೈತ್ರಿ ಅವರು ಹಣ ನೀಡಲು ನಿರಾಕರಿಸುತ್ತ ಬಂದಿದ್ದರು. ಆ ಸಮಯದಲ್ಲಿ ಸಂಜಯ್, ಡಾ.ಮೈತ್ರಿ ಅವರನ್ನು ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದ. ಆದರೂ ಡಾ.ಮೈತ್ರಿ ಆತನ ಮಾತುಗಳನ್ನು ನಿರ್ಲಕ್ಷಿಸಿದ್ದರು.

    ಇದನ್ನೂ ಓದಿ: ಪೂಜೆಯಿಂದಾಗಿ ಪ್ರಾಣಾಪಾಯದಿಂದ ಪಾರಾದ ಉದ್ಯಮಿ!; ಆಗಿದ್ದೇನು?​

    ಭಾನಾಮತಿ ಮಾಡಿಸುವುದಾಗಿ ಬೆದರಿಕೆ

    ಮೇ 11ರಂದು ಸಂಜೆ 6.45ರ ಸುಮಾರಿಗೆ ಡಾ.ಮೈತ್ರಿ ಮನೆಗೆ ಬಂದಿರುವ ಸಂಜಯ್, ಹಣ ಸಿದ್ಧವಾಗಿದೆಯೇ ಎಂದು ಡಾ.ಮೈತ್ರಿ ಅವರನ್ನು ಕೇಳಿದ್ದಾನೆ. ಈ ವೇಳೆ ಹಣ ಇಲ್ಲ ಎಂದು ಮೈತ್ರಿ ಹೇಳಿದಾಗ, ಕೋಪಗೊಂಡ ಸಂಜಯ್, ಡಾ.ಮೈತ್ರಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಮುಂದಾಗಿದ್ದಾನೆ. ಅಷ್ಟೇ ಅಲ್ಲದೆ, ಮೈತ್ರಿ ಅವರ ಮೇಲೆ ದೈಹಿಕ ಹಲ್ಲೆ ಮಾಡಿದ್ದಾನೆ. ‘ಹಣ ನೀಡದಿದ್ದಲ್ಲಿ ನಿನ್ನ ಹಾಗೂ ನಿನ್ನ ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿದ್ದಾನೆ. ಭಾನಾಮತಿ ಮಾಡಿಸುವುದಾಗಿಯೂ ಬೆದರಿಕೆ ಹಾಕಿ ಮನೆಯಿಂದ ತೆರಳಿದ್ದಾನೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕೋಟ್ಯಂತರ ರೂ. ಹಣಕ್ಕೆ ಬೇಡಿಕೆ ಇಟ್ಟಿದಲ್ಲದೆ, ಮಹಿಳೆ ಎಂಬುದನ್ನು ನೋಡದೆ ದೈಹಿಕ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಸಂಜಯ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಡಾ.ಮೈತ್ರಿ ದೂರಿನಲ್ಲಿ ಮನವಿ ಮಾಡಿದ್ದಾರೆ.

    ದಂಪತಿ ಮಧ್ಯೆ ಪ್ರೀತಿ ಇದ್ದರೂ ದಾಂಪತ್ಯ ದ್ರೋಹ; ವಿವಾಹೇತರ ಸಂಬಂಧದ ಬಗ್ಗೆ ಇಲ್ಲ ಪಶ್ಚಾತ್ತಾಪ: ಏನಿದು ಅಧ್ಯಯನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts