ಹೈ ಅಲರ್ಟ್​: ವಿದ್ಯಾರ್ಥಿಗಳ ಮೇಲೆ ಅಪರಿಚಿತರಿಂದ ವಿಚಿತ್ರ ಲಿಕ್ವಿಡ್ ಸ್ಪ್ರೇ!; ಮೈಗೆ ತಾಕುತ್ತಿದ್ದಂತೆ ಅಲರ್ಜಿ..

Spray
Published on

ಮುಂಬೈ: ಇಂದು ಕರ್ನಾಟಕದಲ್ಲಿ ಬಹಳಷ್ಟು ಜನರ ಮೊಬೈಲ್​​ಫೋನ್​ಗೆ ಒಂದು ತುರ್ತು ಅಲರ್ಟ್ ಮೆಸೇಜ್ ಬಂದಿದೆ. ಇದೀಗ ಇನ್ನೊಂದು ಹೈ ಅಲರ್ಟ್ ಘೋಷಣೆ ಆಗಿದೆ. ಅದೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ.. ವಿದ್ಯಾರ್ಥಿಗಳ ಮೇಲೆ ಅಪರಿಚಿತರು ಅಲರ್ಜಿ ಉಂಟು ಮಾಡುವಂಥ ವಿಚಿತ್ರ ದ್ರವವೊಂದನ್ನು ಸಿಂಪಡಣೆ ಮಾಡಿರುವುದರಿಂದ ಈ ಹೈ ಅಲರ್ಟ್​ ನೀಡಲಾಗಿದೆ.

ಅಂದಹಾಗೆ ಮಹಾರಾಷ್ಟ್ರದ ಪುಣೆ ಸಮೀಪದ ಅಂಬೆಗಾಂವ್​​ನ ಗಾಯ್ಮುಖ್​ನಿಂದ ಭೋರ್ವಾಡಿ ರಸ್ತೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಕೆಲವು ಅಪರಿಚಿತರು ಅಲರ್ಜಿ ಉಂಟು ಮಾಡುವಂಥ ವಿಚಿತ್ರ ದ್ರವವೊಂದನ್ನು ಸ್ಪ್ರೇ ಮಾಡಿದ್ದಾರೆ. ವಾರಕ್ಕೆರಡು ಸಲ ಎಂಬಂತೆ ಇಂಥ ಘಟನೆಗಳು ನಡೆದಿವೆ.

ಇಂಥ ದ್ರವ ಮೈಮೇಲೆ ಬೀಳುತ್ತಿದ್ದಂತೆ ತುರಿಕೆ, ದದ್ದು ಉಂಟಾಗಿ ಅಲರ್ಜಿಯಂಥ ಲಕ್ಷಣಗಳು ಗೋಚರಿಸಿವೆ. ಇದರಿಂದ ವಿದ್ಯಾರ್ಥಿಗಳಷ್ಟೇ ಅಲ್ಲದೆ, ಅವರ ಪಾಲಕರೂ ಆತಂಕಗೊಂಡಿದ್ದಾರೆ. ಈ ಸಂಬಂಧ ಮಂಚಾರ್ ಪೊಲೀಸ್ ಠಾಣೆಗೆ ಸಾರ್ವಜನಿಕರು ದೂರು ನೀಡಿದ್ದಾರೆ.

ಪೊಲೀಸರು ಇಂಥ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ತನಿಖೆ ಆರಂಭಿಸಿದ್ದಾರೆ. ಸದ್ಯ ಮಕ್ಕಳೊಂದಿಗೆ ಪಾಲಕರೂ ಶಿಕ್ಷಣ ಸಂಸ್ಥೆಗಳ ವರೆಗೆ ಹೋಗಿ ಬರಲಾರಂಭಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬರುತ್ತಿರುವ ಅಪರಿಚಿತರು ಈ ರೀತಿ ಮಾಡುತ್ತಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ. ಸದ್ಯ ಮಕ್ಕಳು ಗುಂಪಾಗಿ ಶಾಲೆಗೆ ತೆರಳುವಂತೆ ಪೊಲೀಸರು ಕಿವಿಮಾತು ಹೇಳಿದ್ದು, ಹೈ ಅಲರ್ಟ್​ನಲ್ಲಿ ಇರುವಂತೆಯೂ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net