More

    ಫ್ರೆಷರ್ಸ್​ಗೆ ಹೋಲಿಸಿದ್ರೆ ಇನ್​ಫೊಸಿಸ್ ಸಿಇಒ ಸಂಬಳ 2,200 ಪಟ್ಟು ಹೆಚ್ಚು!; ಅವರು ಎಷ್ಟು ಗಂಟೆ ಕೆಲಸ ಮಾಡ್ತಾರೆ?

    ಬೆಂಗಳೂರು: ದಿಗ್ಗಜ ಐಟಿ ಕಂಪನಿಗಳ ಪೈಕಿ ಒಂದಾಗಿರುವ ಇನ್​ಫೊಸಿಸ್​ನ ಸಂಸ್ಥಾಪಕ ನಾರಾಯಣಮೂರ್ತಿ ಅವರು ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದಿರುವುದು ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ಪರ-ವಿರೋಧ ಅಭಿಪ್ರಾಯಗಳಿಗೂ ಗುರಿಯಾಗಿದೆ.

    ಇದೀಗ ಇನ್​ಫೊಸಿಸ್​ ಸಿಇಒ ಸಂಬಳವೂ ಚರ್ಚೆಗೀಡಾಗಿದ್ದು, ಇತರ ಕೆಲವು ಐಟಿ ಕಂಪನಿಗಳ ಸಿಇಒ ವೇತನ ಕೂಡ ಜನರ ಕಣ್ಣು ಕುಕ್ಕುವಂತೆ ಮಾಡಿದೆ. ಮಾತ್ರವಲ್ಲ, ಫ್ರೆಷರ್ಸ್​ಗೆ ಹೋಲಿಸಿದರೆ ಸಿಇಒಗಳ ವೇತನ ಹೆಚ್ಚಳದಲ್ಲಿ ಕಳೆದೊಂದು ದಶಕದಲ್ಲಿ ಭಾರಿ ಅಸಮತೋಲನ ಆಗಿರುವುದು ಕೂಡ ಮುನ್ನೆಲೆಗೆ ಬಂದಿದೆ.

    ನಾರಾಯಣಮೂರ್ತಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಐಎಎಸ್​ ಅಧಿಕಾರಿ ಅಶೋಕ್ ಖೇಮ್ಕಾ, ಫ್ರೆಷರ್ಸ್​​ಗಿಂತ ಇನ್​ಫೊಸಿಸ್​ ಸಿಇಒ ವೇತನ 2,200 ಪಟ್ಟು ಹೆಚ್ಚಿದೆ. ವಾರಕ್ಕೆ 168 ಗಂಟೆಗಳಷ್ಟೇ ಇರುವುದು, ಸಿಇಒ ಮತ್ತು ಫ್ರೆಷರ್ಸ್​ ಕ್ರಮವಾಗಿ ವಾರಕ್ಕೆ ಎಷ್ಟು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

    ಇದನ್ನೂ ಓದಿ: ಯುವಕರೇಕೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಅಚ್ಚರಿಯೇ?: 70 ಗಂಟೆ ಕೆಲಸ.. ಮೂರ್ತಿ ವರ್ಸಸ್ ಮೂರ್ತಿ…

    ಇನ್​ಫೊಸಿಸ್, ವಿಪ್ರೋ, ಟಿಸಿಎಸ್, ಟೆಕ್ ಮಹಿಂದ್ರಾ, ಎಲ್​ ಆ್ಯಂಡ್ ಟಿ ಇನ್​ಫೊಟೆಕ್​, ಎಚ್​​ಸಿಎಲ್​, ಮೀಡಿಯನ್ ಕಂಪನಿಗಳ ಸಿಇಒ ಮತ್ತು ಫ್ರೆಷರ್ಸ್​ ವೇತನ ಹತ್ತು ವರ್ಷಗಳ ಹಿಂದೆ ಎಂದರೆ 2012ರಲ್ಲಿ ಎಷ್ಟಿತ್ತು ಹಾಗೂ 2022ರಲ್ಲಿ ಎಷ್ಟು ಕೊಡಲಾಗುತ್ತಿದೆ ಎಂಬ ಪಟ್ಟಿಯನ್ನೂ ಅವರು ಪೋಸ್ಟ್ ಮಾಡಿಕೊಂಡು ತಮ್ಮ ಪ್ರಶ್ನೆಯನ್ನು ಕೇಳಿದ್ದಾರೆ. ಸಿಇಒಗಳ ವಾರ್ಷಿಕ ಸಂಬಳ ಹತ್ತು ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಳಗೊಂಡಿದ್ದರೆ, ಫ್ರೆಷರ್ಸ್​ ವಾರ್ಷಿಕ ವೇತನದಲ್ಲಿ ಅಂಥ ಹೆಚ್ಚಳ ಕಾಣದಿರುವುದೂ ಈ ಪಟ್ಟಿಯಲ್ಲಿ ಕಂಡುಬಂದಿದೆ.

    ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಹಿಳೆಯೊಬ್ಬರು, ತಾವು 1999ರಲ್ಲಿ ಇನ್​ಫೊಸಿಸ್​​ಗೆ ಫ್ರೆಷರ್ ಆಗಿ ಕೆಲಸಕ್ಕೆ ಸೇರಿದ್ದು ವಾರ್ಷಿಕ ವೇತನ ತೆರಿಗೆ ಸೇರಿ 3.55 ಲಕ್ಷ ರೂ. ಅಂದರೆ ತಿಂಗಳಿಗೆ 29 ಸಾವಿರ ರೂ. ಇತ್ತು. ವಾರಕ್ಕೆ 70 ಗಂಟೆಗಳ ಕೆಲಸ, ಕಾಂಪ್​ ಆಫ್ ಕೂಡ ಇತ್ತು ಎಂದಿದ್ದಾರೆ. ಆದರೆ ಇನ್​ಫೊಸಿಸ್ ಈಗಲೂ ಫ್ರೆಷರ್ಸ್​ಗೆ ವಾರ್ಷಿಕ 3.72 ಲಕ್ಷ ರೂ. ವೇತನ ಕೊಡುತ್ತಿದೆ ಎಂದರೆ ನಂಬಲಾಗುತ್ತಿಲ್ಲ. ಇದನ್ನು ಶೋಷಣೆ ಎಂದು ಕರೆದರೂ ಕಡಿಮೆ ಎನಿಸುತ್ತದೆ ಎಂಬುದಾಗಿಯೂ ಆಕೆ ಹೇಳಿದ್ದಾರೆ.

    ವಾರಕ್ಕೆ 55 ಗಂಟೆ ಅಥವಾ ಅದಕ್ಕೂ ಹೆಚ್ಚು ಕೆಲಸ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ: ಅಧ್ಯಯನದ ವಿವರ ಇಲ್ಲಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts