More

    ಯುವಕರೇಕೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಅಚ್ಚರಿಯೇ?: 70 ಗಂಟೆ ಕೆಲಸ.. ಮೂರ್ತಿ ವರ್ಸಸ್ ಮೂರ್ತಿ…

    ಬೆಂಗಳೂರು: ಭಾರತದ ವರ್ಕ್ ಕಲ್ಚರ್ ಬದಲಾಗಬೇಕು, ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಇನ್​ಫೊಸಿಸ್​ನ ನಾರಾಯಣಮೂರ್ತಿ ಅವರು ನೀಡಿದ್ದ ಹೇಳಿಕೆ ಕಳೆದ ಕೆಲವು ದಿನಗಳಿಂದ ಭಾರಿ ಸಂಚಲನ ಮೂಡಿಸಿತ್ತು. ಮಾತ್ರವಲ್ಲ, ಇದಕ್ಕೆ ಪರ-ವಿರೋಧ ಅಭಿಪ್ರಾಯಗಳು ಕೂಡ ವ್ಯಕ್ತವಾಗಿವೆ.

    ನಾರಾಯಣಮೂರ್ತಿ ಅವರ ಹೇಳಿಕೆಗೆ ಹೃದ್ರೋಗ ತಜ್ಞರೊಬ್ಬರು ಪ್ರತಿಕ್ರಿಯೆ ನೀಡಿದ್ದು, ಅದು ಇನ್ನೊಂದು ಸಂಗತಿಯ ಕುರಿತು ಚಿಂತಿಸುವಂತೆ ಮಾಡಿದೆ. ಬೆಂಗಳೂರಿನ ಸಕ್ರಾ ವರ್ಲ್ಡ್ ಹಾಸ್ಪಿಟಲ್​ನ ಹೃದ್ರೋಗ ತಜ್ಞ ಡಾ.ದೀಪಕ್ ಕೃಷ್ಣಮೂರ್ತಿ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ನಾರಾಯಣಮೂರ್ತಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಭಾರತದ ವರ್ಕ್​ ಕಲ್ಚರ್ ಬದಲಾಗಬೇಕು ಎಂದ ಇನ್​ಫೊಸಿಸ್​ ನಾರಾಯಣಮೂರ್ತಿ ಹೇಳಿದ್ದೇನು?

    ದಿನಕ್ಕೆ 24 ಗಂಟೆಗಳಿದ್ದು, ವಾರದ ರಜೆಯನ್ನು ಹೊರತು ಪಡಿಸಿದರೆ ವಾರಕ್ಕೆ 70 ಗಂಟೆಗಳಂತೆ ಕೆಲಸ ಮಾಡಲು ಆರು ದಿನಗಳಲ್ಲಿ ನಿತ್ಯ 12 ಗಂಟೆ ಕೆಲಸ ಮಾಡಬೇಕು. ಇನ್ನುಳಿದ 12 ಗಂಟೆಗಳಲ್ಲಿ 8 ಗಂಟೆ ನಿದ್ರೆಗೆ ಹೋದರೆ 4 ಗಂಟೆ ಉಳಿಯುತ್ತದೆ. ಬೆಂಗಳೂರಿನಂಥ ನಗರದಲ್ಲಿ 2 ಗಂಟೆ ರಸ್ತೆಗಳಲ್ಲೇ ಕಳೆದುಹೋಗುತ್ತದೆ. ಇನ್ನುಳಿದ 2 ಗಂಟೆಗಳಲ್ಲಿ ಬ್ರಷ್​, ಸ್ನಾನ, ತಿಂಡಿ-ಊಟ ಮುಗಿಸಬೇಕು ಎಂಬುದಾಗಿ ಅವರು ಲೆಕ್ಕಾಚಾರ ನೀಡಿದ್ದಾರೆ.

    ಇದನ್ನೂ ಓದಿ: ‘ವಾರಕ್ಕೆ 70 ಗಂಟೆ ದುಡಿಯಬೇಕು…’ಎಂಬ ಇನ್ಫೋಸಿಸ್ ನಾರಾಯಣ ಮೂರ್ತಿಯವರ ಸಲಹೆಗೆ ಯುವಕರ ಪ್ರತಿಕ್ರಿಯೆ ಹೇಗಿದೆ ಗೊತ್ತಾ?

    ಇಷ್ಟಾದ ಮೇಲೆ ಜನರೊಂದಿಗೆ ಬೆರೆಯಲು, ಮನೆಯವರೊಂದಿಗೆ ಮಾತನಾಡಲು, ವ್ಯಾಯಾಮಕ್ಕೆ, ಮನರಂಜನೆಗೆ ಸಮಯ ಎಲ್ಲಿ ಎಂಬುದಾಗಿ ಪ್ರಶ್ನಿಸಿರುವ ಅವರು, ಕೆಲವು ಕಂಪನಿಗಳು ಕೆಲಸದ ಅವಧಿ ಮುಗಿದ ಬಳಿಕವೂ ಇ-ಮೇಲ್, ಕಾಲ್​ಗಳಿಗೆ ಉತ್ತರಿಸಬೇಕು ಎಂದು ಬಯಸುತ್ತವೆ ಎಂಬ ಸಂಗತಿ ಮೇಲೂ ಬೆಳಕು ಚೆಲ್ಲಿದ್ದಾರೆ.

    ಇದನ್ನೂ ಓದಿ: ಇನ್​ಫೊಸಿಸ್​ ನಾರಾಯಣಮೂರ್ತಿ ಅವರ ಆ ಮಾತು ‘ವಾರಕ್ಕೆ 70 ಗಂಟೆಗಳ ಕೆಲಸದ ನಡುವೆ’ ಕಳೆದುಹೋಯ್ತಾ?

    ವಾರಕ್ಕೆ 70 ಗಂಟೆಗಳಂತೆ ಕೆಲಸ ಮಾಡುವ ಕುರಿತಾಗಿ ಲೆಕ್ಕಾಚಾರ ನೀಡಿ, ಅದರ ಸಾಧ್ಯತೆ-ಸಮಸ್ಯೆಗಳ ಕುರಿತು ಪ್ರಸ್ತಾಪಿಸಿರುವ ಡಾ.ದೀಪಕ್ ಕೃಷ್ಣಮೂರ್ತಿ, ಯುವಕರು ಏಕೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂಬುದರ ಬಗ್ಗೆ ಇನ್ನೂ ಅಚ್ಚರಿ ಪಡುತ್ತಿದ್ದೀರಾ? ಎಂಬ ಪ್ರಶ್ನೆಯನ್ನೂ ಜನರ ಮುಂದಿಟ್ಟಿದ್ದಾರೆ.

    ಈ ದೇವಸ್ಥಾನದಲ್ಲಿ ಮಹಿಳೆಯರಿಗಷ್ಟೇ ಗರ್ಭಗುಡಿಗೆ ಪ್ರವೇಶ, ಪೂಜಿಸಲು ಅವಕಾಶ: ಮುಟ್ಟಾಗಿದ್ದರೂ ಇಲ್ಲಿ ಮೈಲಿಗೆಯಲ್ಲ!

    ರಾತ್ರಿ ಮಲಗುವ ಮುನ್ನ ಇವುಗಳನ್ನು ಮಾಡಬೇಡಿ: ಯಾತಕ್ಕಾಗಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts