

ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಭಾರತವು ಮುಂದುವರಿದ ಅರ್ಥಿಕತೆಯೊಂದಿಗೆ ಸ್ಪರ್ಧಿಸಲು ಬಯಸಿದರೆ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಸೂಚಿಸುವ ಮೂಲಕ ಭಾರತದಲ್ಲಿ ಕಾರ್ಮಿಕ ಸಂಸ್ಕೃತಿ ಬದಲಾಗಬೇಕು ಎಂದು 3one4 ಕ್ಯಾಪಿಟಲ್ನ ಪಾಡ್ಕಾಸ್ಟ್ 'ದಿ ರೆಕಾರ್ಡ್' ನ ಉದ್ಘಾಟನಾ ಸಂಚಿಕೆಯಲ್ಲಿ ಮಾತನಾಡಿದರು.
ಪಾಡ್ಕಾಸ್ಟ್ನಲ್ಲಿ ನಾರಾಯಣ ಮೂರ್ತಿ ಮಾತನಾಡಿ, ನಮ್ಮ ಯುವಕರು, 'ಇದು ನನ್ನ ದೇಶ. ನಾನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಬಯಸುತ್ತೇನೆ' ಎಂದು ಹೇಳಬೇಕೆಂದು ತಿಳಿಸಿದರು.
ನಾರಾಯಣ ಮೂರ್ತಿ ಅವರ ಈ ನಿರ್ದಿಷ್ಟ ಸಾಲು ಇದೀಗ ಕೆಲಸದ ಸಂಸ್ಕೃತಿ, ಕೆಲಸ-ಜೀವನದ ಸಮತೋಲನ, ಹೆಚ್ಚುವರಿ ಗಂಟೆ ಮತ್ತು ಕಡಿಮೆ ಸಂಬಳ ಮತ್ತು ಇತರ ಹಲವು ವಿಷಯಗಳ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
ಸೋಶಿಯಲ್ ಮೀಡಿಯಾ ಬಳಕೆದಾರರ ಕಾಮೆಂಟ್ ಹೀಗಿದೆ...
"ಕೆಲವರು ನಮಗೆ ಅದೇ ರೀತಿ ಸಂಬಳ ಕೊಡಬೇಕೆಂದರೆ", ಮತ್ತೆ ಕೆಲವರು "ಕೆಲಸ-ಜೀವನದ ಸಮತೋಲನ" ಕುರಿತು ಕಾಮೆಂಟ್ ಮಾಡಿದ್ದಾರೆ.
ಈ ಹೇಳಿಕೆ ಸಂಪೂರ್ಣವಾಗಿ ತಪ್ಪು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
"ಇದು ಹಲವು ಹಂತಗಳಲ್ಲಿ ತಪ್ಪಾಗಿದೆ, ಉತ್ಪಾದಕತೆಯು ಸಮಯದ ಅಳತೆಯಲ್ಲ, ಆದರೆ ಅದರ ಪರಿಣಾಮಕಾರಿ ಬಳಕೆಯಾಗಿದೆ, 70 ಗಂಟೆ ಕೆಲಸ ಮಾಡುವುದು ಜನರು ಕಡಿಮೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಪ್ರೋತ್ಸಾಹಿಸುವುದನ್ನು ಬಿಟ್ಟು ಬೇರೆನೂ ಮಾಡುವುದಿಲ್ಲ. ಜರ್ಮನಿ ಮತ್ತು ಜಪಾನ್ ಕೆಲಸದ ಸಮಯದ ನಂತರ ಯಾವುದೇ ಇಮೇಲ್ ಅನ್ನು ಸಹ ಸ್ವೀಕರಿಸದಿರಲು ಪ್ರಯತ್ನಿಸುತ್ತಿದೆ'' ಎಂದು ಬಳಕೆದಾರರು X ನಲ್ಲಿ ಕಾಮೆಂಟ್ ಮಾಡಿದ್ದಾರೆ.
ಈ ಹೇಳಿಕೆಯು ಕೆಲಸ-ಜೀವನದ ಸಮತೋಲನದ ನೀತಿಯನ್ನು ಪ್ರಶ್ನಿಸುವ ಜನರನ್ನು ಕೆರಳಿಸಿದೆ. ವೃತ್ತಿಪರರನ್ನು ಹೊರತುಪಡಿಸಿಯೂ ಜನರು ಇದನ್ನು ಪ್ರಶ್ನಿಸಿದ್ದಾರೆ.
"ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವುದರಿಂದ ಉತ್ಪಾದಕತೆ ಇರುವುದಿಲ್ಲ. ಉತ್ತಮ ಉತ್ಪಾದಕತೆಗಾಗಿ ಕೆಲಸ ಮತ್ತು ಜೀವನದ ನಡುವೆ ಸಮತೋಲನವನ್ನು ಕಂಡುಕೊಳ್ಳುವುದು ಮುಖ್ಯವಾಗಿದೆ. ಇನ್ನೂ ವಾರಕ್ಕೆ 40 ಗಂಟೆಗಳ ಕಾಲ ಕೆಲಸ ಮಾಡಿದರೆ ಸಾಕು'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.