More

    ‘ನಾನು ಯಾವ ಪಕ್ಷಕ್ಕೂ ಸೇರಿಲ್ಲ’: ಚಿರಂಜೀವಿ ಕುತೂಹಲಕಾರಿ ಕಾಮೆಂಟ್

    ಹೈದರಾಬಾದ್​: ನಾನು ರಾಜಕೀಯದಿಂದ ದೂರವಿದ್ದು, ಯಾವುದೇ ಪಕ್ಷದಲ್ಲಿಲ್ಲ ಎಂದು ಮೆಗಾಸ್ಟಾರ್ ಚಿರಂಜೀವಿ ಹೇಳಿದ್ದಾರೆ.

    ಗುರುವಾರ(ಮೇ 9) ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿದ ಅವರು ಶುಕ್ರವಾರ ಹೈದರಾಬಾದ್ ಗೆ ಬಂದಿದ್ದು, ಈ ಸಂದರ್ಭದಲ್ಲಿ ರಾಜಕೀಯದ ಬಗ್ಗೆ ಪ್ರಶ್ನಿಸಿದಾಗ ಸ್ವಾರಸ್ಯಕರವಾದ ಪ್ರತಿಕ್ರಿಯೆ ನೀಡಿದರು.

    ಇದನ್ನೂ ಓದಿ: ‘ಪನ್ನೂನ್ ಹತ್ಯೆ ಯತ್ನ ಪ್ರಕರಣದಲ್ಲಿ ಭಾರತದ ಹೊಣೆಗಾರಿಕೆ ತೃಪ್ತಿ ತಂದಿದೆ’: ಅಮೆರಿಕಾ

    45 ವರ್ಷಗಳ ಸುದೀರ್ಘ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಈ ಪ್ರಶಸ್ತಿ ನೀಡಿದೆ ಎಂದು ಅವರು ಹೇಳಿದರು, ನನ್ನನ್ನು ಈ ಎತ್ತರಕ್ಕೆ ಬೆಳೆಸಿದ ಅಭಿಮಾನಿಗಳು, ಪ್ರೇಕ್ಷಕರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಯಾವ ಸಮಯಕ್ಕೆ ಏನು ಬರಬೇಕೋ ಅದು ಬರುತ್ತೆ, ನಾನು ಯಾವುದಕ್ಕೂ ಕಾಯುತ್ತಿಲ್ಲ ಎಂದರು.

    ಎನ್ ಟಿಆರ್ ಗೆ ಭಾರತ ರತ್ನ ಪ್ರಶಸ್ತಿ ಸಿಗಬೇಕಿತ್ತು. ನಾನು ರಾಜಕೀಯವನ್ನು ಮೀರಿದವನು. ಯಾವುದೇ ಪಕ್ಷಕ್ಕೆ ಸೇರಿದವನಲ್ಲ ಎಂದು ಸ್ಪಷ್ಟಪಡಿಸಿದರು.
    ಗಣರಾಜ್ಯೋತ್ಸವದಂದು ಕೇಂದ್ರ ಸರ್ಕಾರ 2024ನೇ ಸಾಲಿಗೆ 132 ಮಂದಿಗೆ ಪದ್ಮ ಪ್ರಶಸ್ತಿ ಘೋಷಿಸಿದ್ದು ಗೊತ್ತೇ ಇದೆ. ಅವರಲ್ಲಿ 67 ಮಂದಿಗೆ ಏಪ್ರಿಲ್ 22 ರಂದು ಅಧ್ಯಕ್ಷ ದ್ರೌಪದಿ ಮುರ್ಮು ಪದ್ಮ ಪ್ರಶಸ್ತಿಗಳನ್ನು ನೀಡಿದ್ದು, ಉಳಿದ 65 ಮಂದಿಗೆ ಗುರುವಾರ ಸಂಜೆ ನೀಡಲಾಯಿತು.

    ರಾಷ್ಟ್ರಪತಿ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕೈಯಿಂದ ಚಿರಂಜೀವಿ ಪದ್ಮವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉಪರಾಷ್ಟ್ರಪತಿ, ಕೇಂದ್ರದ ಹಲವು ಸಚಿವರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

    ಪವಿತ್ರ ಚಾರ್​ಧಾಮ್ ಯಾತ್ರೆ ಆರಂಭ: ಹಿಮಾಲಯದ ಪ್ರಮುಖ ದೇಗುಲಗಳಿಗೆ ಭಕ್ತಸಾಗರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts