More

    ‘ಪನ್ನೂನ್ ಹತ್ಯೆ ಯತ್ನ ಪ್ರಕರಣದಲ್ಲಿ ಭಾರತದ ಹೊಣೆಗಾರಿಕೆ ತೃಪ್ತಿ ತಂದಿದೆ’: ಅಮೆರಿಕಾ

    ವಾಷಿಂಗ್ಟನ್​: ಖಲಿಸ್ತಾನಿ ಭಯೋತ್ಪಾದಕ ಪನ್ನುನ್ ಹತ್ಯೆ ಯತ್ನದ ಆರೋಪದಲ್ಲಿ ಭಾರತ ಹೊಣೆಗಾರಿಕೆ ಪ್ರದರ್ಶಿಸಿದೆ. ಇದು ಅಮೆರಿಕಾಗೆ ತೃಪ್ತಿ ತಂದಿದೆ ಎಂದು ಭಾರತದಲ್ಲಿನ ಅದರ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ.

    ಇದನ್ನೂ ಓದಿ: ನರೇಂದ್ರ ದಾಭೋಲ್ಕರ್ ಹತ್ಯೆ: ಮೂವರು ಆರೋಪಿಗಳು ಖುಲಾಸೆ

    ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್​, ಉನ್ನತ ಚಿಂತಕರ ಚಾವಡಿ ವತಿಯಿಂದ ವಾಷಿಂಗ್ಟನ್​ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿ, ಈ ಸಂಬಂಧ ಭಾರತ ಇನ್ನೂ ಅನೇಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.

    ಭಾರತವು ಗಟ್ಟಿಯಾದ ಪ್ರಜಾಪ್ರಭುತ್ವ ದೇಶವಾಗಿದೆ. ಅಲ್ಲಿ ಕಾನೂನು ಗೌರವಿಸಲಾಗುತ್ತದೆ. ಹೀಗಾಗಿಯೇ ಪನ್ನೂನ್ ಹತ್ಯೆ ಯತ್ನದ ಪ್ರಕರಣದಲ್ಲೂ ತನಿಖಾ ಆಯೋಗವನ್ನು ರಚಿಸಿದೆ. ತನಿಖೆಗೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು.

    ಭಯೋತ್ಪಾದನೆಯ ಆರೋಪದ ಮೇಲೆ ಭಾರತಕ್ಕೆ ಬೇಕಾಗಿರುವ ಪನ್ನುನ್, ಯುಎಸ್ ಮತ್ತು ಕೆನಡಾದ ದ್ವಿಪೌರತ್ವವನ್ನು ಹೊಂದಿದ್ದ. ಭಯೋತ್ಪಾದನಾ ವಿರೋಧಿ ಕಾಯ್ದೆಯಡಿ ಕೇಂದ್ರ ಗೃಹ ಸಚಿವಾಲಯವು ಅವನನ್ನು ಭಯೋತ್ಪಾದಕ ಎಂದು ಘೋಷಿಸಿತ್ತು.

    ಕಳೆದ ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ “ಸಂಭಾವ್ಯ” ಒಳಗೊಳ್ಳುವಿಕೆಯ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್‌ನಲ್ಲಿ ಆರೋಪಗಳ ಸುರಿಮಳೆಗರೆದಿದ್ದು, ಇದಾದ ವಾರದ ನಂತರ ಪನ್ನುನ್ ಹತ್ಯೆಯ ವಿಫಲ ಸಂಚು ಕುರಿತ ಆರೋಪಗಳು ಮುನ್ನೆಲೆಗೆ ಬಂದವು.

    ಪವಿತ್ರ ಚಾರ್​ಧಾಮ್ ಯಾತ್ರೆ ಆರಂಭ: ಹಿಮಾಲಯದ ಪ್ರಮುಖ ದೇಗುಲಗಳಿಗೆ ಭಕ್ತಸಾಗರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts