More

    ಪವಿತ್ರ ಚಾರ್​ಧಾಮ್ ಯಾತ್ರೆ ಆರಂಭ: ಹಿಮಾಲಯದ ಪ್ರಮುಖ ದೇಗುಲಗಳಿಗೆ ಭಕ್ತಸಾಗರ..

    ರುದ್ರಪ್ರಯಾಗ: ಅಕ್ಷಯ ತೃತೀಯ ಸಂದರ್ಭದಲ್ಲೇ ಹಿಮಾಲಯದ ಪವಿತ್ರ ಹಾಗೂ ಪ್ರಮುಖ ದೇವಾಲಯಗಳು ಭಕ್ತರಿಗಾಗಿ ಬಾಗಿಲುಗಳು ತೆರೆಯುವುದರಿಂದ ಚಾರ್ ಧಾಮ್ ಯಾತ್ರೆ ಶುಕ್ರವಾರ(ಮೇ 10)ದಿಂದ ಪ್ರಾರಂಭವಾಗಿದೆ.

    ಇದನ್ನೂ ಓದಿ: ಶ್ರೀ ತುಳಜಾಭವಾನಿ ದೇವಸ್ಥಾನ ಹುಂಡಿ ಹಗರಣ :ತನಿಖೆ ಮುಂದುವರಿಸಲು ಹೈಕೋರ್ಟ್ ಅನುಮತಿ

    ಬಹಳ ದಿನಗಳ ನಂತರ ಗಂಗೋತ್ರಿ, ಯಮುನೋತ್ರಿ ಮತ್ತು ಕೇದಾರನಾಥ ದೇವಾಲಯಗಳ ಬಾಗಿಲುಗಳು ಏಕಕಾಲದಲ್ಲಿ ಅಂದರೆ ಶುಕ್ರವಾರ ಬೆಳಗ್ಗೆ 6:55 ಕ್ಕೆ ತೆರೆಯಲ್ಪಟ್ಟವು. ಈ ಅಪರೂಪದ ಕ್ಷಣ ಕಣ್ತುಂಬಿಕೊಳ್ಳಲು ಸುಮಾರು 15 ಸಾವಿರ ಯಾತ್ರಿಕರು (ಭಕ್ತರು) ಗಂಗೋತ್ರಿ ಮತ್ತು ಕೇದಾರನಾಥ ಧಾಮ ತಲುಪಿದ್ದರು.

    ಚಾರ್ ಧಾಮ್ ಯಾತ್ರೆಗೆಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. 35 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ವಿವಿಧೆಡೆ ರೈಲು, ಬಸ್​ ನಿಲ್ದಾಣಗಳಲ್ಲಿ ತಂಗಿದ್ದಾರೆ. ಮೇ 12 ರಿಂದ ಬದರಿನಾಥ ದೇವಸ್ಥಾನದಲ್ಲಿ ದರ್ಶನ ಆರಂಭವಾಗಲಿದೆ.

    ಇನ್ನು ಕೇದಾರನಾಥಕ್ಕೆ ಹೆಲಿ ಸೇವೆಯೂ ಆರಂಭವಾಗಲಿದ್ದು, ಮತ್ತೊಂದೆಡೆ ಮೂರನೇ ಕೇದಾರ ತುಂಗನಾಥ ಧಾಮದ ಬಾಗಿಲು ಕೂಡ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ತೆರೆಯಲಾಯಿತು. ಮೊದಲಿಗೆ ಕೇದಾರನಾಥ ಧಾಮದ ಬಾಗಿಲು ಬೆಳಗ್ಗೆ 6 ಗಂಟೆಗೆ ತೆರೆಯಿತು. ಬಾಬಾ ಕೇದಾರ್ ಪಂಚಮುಖಿ ಚಲ್ ವಿಗ್ರಹದ ಡೋಲಿ ಉತ್ಸವ ಕೂಡ ಶುಕ್ರವಾರ ಮಧ್ಯಾಹ್ನ 6 ಗ್ರೆನೇಡಿಯರ್ ಆರ್ಮಿ ರೆಜಿಮೆಂಟ್ ಬ್ಯಾಂಡ್‌ನ ಸುಮಧುರ ಶಬ್ದಗಳ ನಡುವೆ ಕೇದಾರಪುರಿ ತಲುಪಿತು.

    ಚಾರ್ ಧಾಮ್‌ನಲ್ಲಿ, ಯಮುನೋತ್ರಿ ಧಾಮದ ಬಾಗಿಲು ಮೊದಲು ಬೆಳಗ್ಗೆ 10:29 ಕ್ಕೆ ತೆರೆಯಿತು. ಗಂಗೋತ್ರಿ ಧಾಮದ ಬಾಗಿಲು ಮಧ್ಯಾಹ್ನ 12:25 ಕ್ಕೆ ತೆರೆದಿದ್ದು, ಗಂಗಾ ಮಾತೆಯ ಉತ್ಸವದ ಮೆರವಣಿಗೆಯು ಶುಕ್ರವಾರ ದಂದು ಚಳಿಗಾಲದ ಪೀಠದ ಮುಖ್ವಾದಿಂದ ಭೈರವ ಘಾಟ್‌ಗೆ ಬಾಗಿಲು ತೆರೆಯಲು ಹೊರಟಿತು. ಶನಿವಾರ ಬೆಳಗ್ಗೆ ಡೋಲಿ ಉತ್ಸವವರು ಗಂಗೋತ್ರಿ ಧಾಮವನ್ನು ತಲುಪುತ್ತದೆ. ಏತನ್ಮಧ್ಯೆ, ಯಮುನಾ ದೇವಿ ಉತ್ಸವ ಮೆರವಣಿಗೆ ಶನಿವಾರ ಬೆಳಗ್ಗೆ ಖಾರ್ಸಾಲಿಯ ಚಳಿಗಾಲದ ಸ್ಥಾನದಿಂದ ಯಮುನೋತ್ರಿ ಧಾಮಕ್ಕೆ ಹೊರಡಲಿದೆ.

    ಬಾಗಿಲು ತೆರೆಯುವ ಸಂದರ್ಭದಲ್ಲಿ ಕೇದಾರನಾಥ ಧಾಮ 20 ಕ್ವಿಂಟಾಲ್, ಗಂಗೋತ್ರಿ ಧಾಮ 21 ಕ್ವಿಂಟಾಲ್ ಮತ್ತು ಯಮುನೋತ್ರಿ ಧಾಮ 10 ಕ್ವಿಂಟಾಲ್ ಹೂವುಗಳಿಂದ ಅಲಂಕರಿಸಲಾಗಿತ್ತು. ಮತ್ತೊಂದೆಡೆ, ಈ ಪ್ರದೇಶದಲ್ಲಿ ಹಗಲಿನ ತಾಪಮಾನವು 0 ಡಿಗ್ರಿಯಿಂದ 3 ಡಿಗ್ರಿ ಸೆಲ್ಸಿಯಸ್​ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾತ್ರಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ.

    ಇದಲ್ಲದೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಡೆಹ್ರಾಡೂನ್‌ನ ಹವಾಮಾನ ಕೇಂದ್ರ ತಿಳಿಸಿದೆ. 4 ಸಾವಿರ ಮೀಟರ್‌ಗಿಂತ ಹೆಚ್ಚಿನ ಪ್ರದೇಶಗಳು ಲಘು ಹಿಮಪಾತವನ್ನು ಅನುಭವಿಸಬಹುದು. ತಗ್ಗು ಪ್ರದೇಶಗಳಲ್ಲಿ ಕೆಲವೆಡೆ ಆಲಿಕಲ್ಲು ಮಳೆ ಹಾಗೂ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿಯೇ ಹಳದಿ ಅಲರ್ಟ್ ಘೋಷಿಸಲಾಗಿದೆ.

    ವ್ಹಾವ್​.. ಅಮೆರಿಕಾದಲ್ಲೂ ಇದೇ ದೃಶ್ಯ.. ಭಾರತೀಯರಿಗೆ ಅಚ್ಚರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts