More

  ನಾಳೆಯಿಂದ ಉದ್ಯಾನನಗರಿಯಲ್ಲಿ ಯೆಲ್ಲೋ ಅಲರ್ಟ್​​​​

  ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೆ ಸುಳಿಗಾಳಿ ಪರಿಣಾಮ ನಗರದ ಹಲವೆಡೆ ಸುರಿಯುತ್ತಿರುವ ಮಳೆ ಶನಿವಾರವೂ ಮುಂದುವರಿದಿದೆ.

  ಬೆಳಗ್ಗೆಯಿಂದ ಹಲವು ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇತ್ತು. ಕೆಲವಡೆ ತುಂತುರು ಮಳೆ ಸುರಿದರೆ ಇನ್ನೂ ಕೆಲವೆಡೆ ಬಿರುಸಾಗಿ ವರ್ಷಧಾರೆಯಾಯಿತು. ಸಂಜೆ ಬಳಿಕ ಕೃಷ್ಣರಾಜೇಂದ್ರ ಮಾರುಕಟ್ಟೆ, ಮೆಜೆಸ್ಟಿಕ್​,ಲಾಲ್​ಬಾಗ್​, ವಿಧಾನಸೌಧ, ಜೆ.ಪಿ.ನಗರ, ಜಯನಗರ, ರಾಜಮಹಲ್​ ಗುಟ್ಟಹಳ್ಳಿ, ಯಶವಂತಪುರ, ಎಂ.ಜಿ.ರಸ್ತೆ, ಚಾಮರಾಜಪೇಟೆ ಸೇರಿ ನಗರದ ವಿವಿಧೆಡೆ ಮಳೆಯಾಯಿತು. ಮಳೆ ಕೊರತೆ ಅನುಭವಿಸುತ್ತಿದ್ದ ಉದ್ಯಾನನಗರಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿರುವುದು ಗಮನಾರ್ಹ. ವಾರದಿಂದ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ತಂಪಾದ ವಾತಾವರಣ ಕಂಡುಬಂದಿದ್ದು, ಉಷ್ಣಾಂಶ ಇಳಿಮುಖವಾಗಿದೆ.

  ಚಿನ್ನಸ್ವಾಮಿಯಲ್ಲಿ ಆರ್​ಸಿಬಿ-ಸಿಎಸ್​ಕೆ ಪಂದ್ಯ ವೀಕ್ಷಿಸಿದ ಸಿಎಂ ಸಿದ್ಧರಾಮಯ್ಯ, ನಟ ಶಿವರಾಜ್​ಕುಮಾರ್

  ಮೂರು ದಿನ ಬಿರುಸು
  ಅರಬ್ಬಿ ಸಮುದ್ರ, ಹಿಂದೂ ಮಹಾಸಾಗರ ಹಾಗೂ ಬಂಗಾಳಕೊಲ್ಲಿಯಲ್ಲಿ ನೈಋತ್ಯ ಮಾನ್ಸೂನ್​ (ಮುಂಗಾರು ಮಾರುತ) ರೂಪುಗೊಳ್ಳುವುದಕ್ಕೆ ಆಶಾದಾಯಕ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ ನಗರದಲ್ಲಿ ಮೇ 19ರಿಂದ ಮೇ 21ರವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್​ ಘೋಷಿಸಿದೆ.

  ಎಲ್ಲೆಲ್ಲಿ ಎಷ್ಟು ಮಳೆ?
  ಪ್ರದೇಶ           ಮಿಮೀ
  ಮಾರಪ್ಪನಪಾಳ್ಯ   35
  ನಂದಿನಿಲೇಔಟ್​    25
  ನಾಗಪುರ           24
  ಪೀಣ್ಯ ಕೈಗಾರಿಕಾ ಪ್ರದೇಶ 17
  ರಾಜಾಜಿನಗರ          12
  ಕಾಟನ್​ಪೇಟೆ          12
  ಚಾಮರಾಜಪೇಟೆ      10

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts