More

    ಮಧುವನಹಳ್ಳಿ ಬಡಾವಣೆಯಲ್ಲಿ ಶ್ರೀ ಮಾರಮ್ಮ ತಾಯಿ ಮಹೋತ್ಸವವು

    ಕೆ.ಆರ್.ನಗರ: ಪಟ್ಟಣದ ಮಧುವನಹಳ್ಳಿ ಬಡಾವಣೆಯ 23ನೇ ವಾರ್ಡಿನಲ್ಲಿರುವ ಶ್ರೀ ಮಾರಮ್ಮ ತಾಯಿ ವಾರ್ಷಿಕ ಮಹೋತ್ಸವವು ಬುಧವಾರ ವಿಜೃಂಭಣೆಯಿಂದ ನೆರವೇರಿತು.

    ಪಟ್ಟಣದ ಮಧುವನಹಳ್ಳಿ ಬಡಾವಣೆಯ 1, 22 ಮತ್ತು 23ನೇ ವಾರ್ಡ್ ವ್ಯಾಪ್ತಿಯ ಗ್ರಾಮ ದೇವತೆಯು ಬಹಳ ಪ್ರಸಿದ್ಧಿಯಾಗಿದ್ದು, ಕಳೆದ 1 ತಿಂಗಳಿನಿಂದಲೇ ಹಬ್ಬದ ಪೂರ್ವ ಸಿದ್ಧತೆ ಮತ್ತು ದೇವಿ ಪೂಜಾ ಕಾರ್ಯಕ್ರಮಗಳು ಜರುಗಿದ್ದವು.

    ಇತ್ತೀಚೆಗೆ ಗ್ರಾಮದ ಅಧಿದೇವತೆ ಶ್ರೀ ದಿಡ್ಡೇದಮ್ಮ ತಾಯಿ ವಾರ್ಷಿಕ ಮಹೋತ್ಸವ ಅದ್ದೂರಿಯಾಗಿ ಜರುಗಿತ್ತು. ಮಾರಮ್ಮ ತಾಯಿ ಮತ್ತು ತಲೆಪೊಟರಾಯರಿಗೆ ಮಂಗಳವಾರ ಸಪ್ಪೆಕಾಳು, ಮೊಸರನ್ನ ಮತ್ತು ಏಳನೀರಿನ ನೈವೇದ್ಯ ಮಾಡಿ ಪೂಜೆ ಸಲ್ಲಿಸಲಾಗಿತ್ತು. ಬುಧವಾರ ಮುತ್ತೈದೆಯರು ಹಾಗೂ ಹೆಣ್ಣು ಮಕ್ಕಳು ತಂಬಿಟ್ಟಿನ ಆರತಿಯ ಮೂಲಕ ದೇವಿಗೆ ಪೂಜೆ ನೆರವೇರಿಸಿ ಭಕ್ತಿಯಿಂದ ತಮ್ಮ ಇಸ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.

    ಮಕ್ಕಳು ತಂಬಿಟ್ಟಿನ ಆರತಿ, ಕಳಸ ಹೊತ್ತು ತಮ್ಮ ಸೊಂಟಕ್ಕೆ ಬೇವಿನ ಸೊಪ್ಪಿನ ತಳಿರು ಕಟ್ಟಿಕೊಂಡು ಕುಟುಂಬಸ್ಥರೊಂದಿಗೆ ದೇವಸ್ಥಾನಕ್ಕೆ ಬಂದು ಪೂಜೆಯಲ್ಲಿ ಭಾಗವಹಿಸಿದ್ದರು. ಕಳೆದ ಐದಾರು ದಿನಗಳಿಂದ ಬಡಾವಣೆಯಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು. ರಸ್ತೆ, ದೇವಸ್ಥಾನಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts