More

    ದಕ್ಷ, ಅಪರೂಪದ ರಾಜಕಾರಣಿ ಪ್ರಸಾದ್

    ಕೆ.ಆರ್.ನಗರ: ಸುದೀರ್ಘ ಅವಧಿಗೆ ಜನಪ್ರತಿನಿಧಿಯಾಗಿ ಸೇವೆ ಮಾಡಿದ ದಿವಂಗತ ವಿ.ಶ್ರೀನಿವಾಸ್ ಪ್ರಸಾದ್ ಅವರು ಶೋಷಿತರು ಮತ್ತು ದಮನಿತರ ಧ್ವನಿಯಾಗಿದ್ದರು. ಅವರ ಅಗಲಿಕೆ ಸಮುದಾಯಕ್ಕೆ ಆಘಾತವನ್ನುಂಟು ಮಾಡಿದೆ ಎಂದು ಬುದ್ಧ, ಬಸವ, ಅಂಬೇಡ್ಕರ್ ಸಮನ್ವಯ ಸಮಿತಿ ತಾಲೂಕು ಅಧ್ಯಕ್ಷ ಎಂ.ಜೆ.ರಾಜಶೇಖರ್ ಹೇಳಿದರು.

    ಪಟ್ಟಣದ ಹರ್ಷ ಪ್ಲೆಕ್ಸ್ ಕಚೇರಿಯಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಸಮನ್ವಯ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ವಿ.ಶ್ರೀನಿವಾಸ ಪ್ರಸಾದ್ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಬುದ್ಧ್ದ, ಬಸವ, ಅಂಬೇಡ್ಕರ್ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಅಪರೂಪದ ಮತ್ತು ದಕ್ಷ ರಾಜಕಾರಣಿ ಎಂದರು.

    ಶ್ರೀನಿವಾಸಪ್ರಸಾದ್ ದಲಿತ ಸಮುದಾಯದ ಸ್ವಾಭಿಮಾನದ ಸಂಕೇತದ ಹಿರಿಯ ಮುತ್ಸದ್ಧಿ. ಅವರ ಅಗಲಿಕೆಯಿಂದ ದಲಿತ ಸಮುದಾಯಕ್ಕೆ ಮತ್ತು ಕರ್ನಾಟಕ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದ್ದು, ಎಲ್ಲ ವರ್ಗದ ಜನರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತಿದ್ದ ಅಪರೂಪದ ರಾಜಕಾರಣಿ. ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ರಾಜಕೀಯ ಸ್ಥಾನಮಾನ ದೊರಕಿಸಿಕೊಡಲು ಮುಂದಾಗುತ್ತಿದ್ದ ಅಪರೂಪದ ಮನಸ್ಸುಳ್ಳ ವ್ಯಕ್ತಿತ್ವದವರು ಎಂದು ಬಣ್ಣಿಸಿದರು.

    ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದ ಸಂದರ್ಭದಲ್ಲಿ ಅದನ್ನು ವಿರೋಧಿಸಿ ಪ್ರತಿಭಟಿಸುವ ಮೂಲಕ ಪಕ್ಷಾಂತರ ಮಾಡಿದರು ಕೂಡ ಅವರು ಎಂದು ತಮ್ಮ ಸಿದ್ಧಾಂತ ಬದಲಾಯಿಸಿಕೊಳ್ಳಲಿಲ್ಲ. ಆದ್ದರಿಂದಲೇ ಅವರು ಎಲ್ಲರ ಸಮುದಾಯ ಮತ್ತು ರಾಜಕಾರಣಿಗಳಿಗೆ ಇಷ್ಟವಾಗುತ್ತಿದ್ದರು. ಅಂತಹ ಮಹಾನ್ ವ್ಯಕ್ತಿ ಮತ್ತೊಮ್ಮೆ ರಾಜ್ಯದಲ್ಲಿ ಹುಟ್ಟಿ ಬರಲಿ ಎಂಬುದು ನಮ್ಮ ಪ್ರಾರ್ಥನೆ. ಅವರ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಗೌರವ ಸಲ್ಲಿಸೋಣ ಎಂದರು.

    ಬುದ್ಧ, ಬಸವ, ಅಂಬೇಡ್ಕರ್ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಪ್ಪ, ಉಪಾಧ್ಯಕ್ಷ ಕೃಷ್ಣಯ್ಯ, ಖಜಾಂಚಿ ಮಹಾಲಿಂಗಪ್ಪ, ಗೌರವಾಧ್ಯಕ್ಷ ವೆಂಕಟೇಶ್, ನಾರಾಯಣಪ್ಪ, ಹದೇವಣ್ಣ, ನವೀನ, ಮಹದೇವ, ಚಂದ್ರಪ್ಪ, ಶಿವಲಿಂಗ, ಸಿದ್ದರಾಜ, ಸುರೇಶ್, ಅಶೋಕ, ಶಿವಕುಮಾರ, ಸುರೇಶ್, ಅಮರನಾಥ್, ದ್ಯಾವಪ್ಪ, ಹೊನ್ನಪ್ಪ ಇನ್ನಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts