More

  ಅರಣ್ಯಾಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು

  ಧಾರವಾಡ: ರೂಟ್ ಸ್ಟಾಕ್ ಯೋಜನೆಯ ಅನುಷ್ಠಾನದಲ್ಲಿ ಅರಣ್ಯ ಇಲಾಖೆಯ ಕೆಲ ಅಽಕಾರಿಗಳು ನಿಯಮಾವಳಿ ಉಲ್ಲಂಘಿಸಿ ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿದ್ದಾರೆ ಎಂದು ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ, ನ್ಯಾಯವಾದಿ ಸುರೇಂದ್ರ ಉಗಾರೆ ಆರೋಪಿಸಿದರು.
  ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ವಿಸ್ತÈತ ತನಿಖೆಗೆ ಒತ್ತಾಯಿಸಿ ಅರಣ್ಯ ಸಚಿವರು, ಇಲಾಖೆಯ ಹಿರಿಯ ಅಽಕಾರಿಗಳು ಹಾಗೂ ಎಪಿಸಿಸಿಎಫ್ ಜಾಗೃತ ದಳಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
  ಅರಣ್ಯ ಇಲಾಖೆಯ ರೂಟ್ ಸ್ಟಾಕ್ ಯೋಜನೆಯಡಿ ನೆಡು ತೋಪು ನಿರ್ಮಾಣಕ್ಕೆ ಅನುಮತಿ ಪಡೆದು ಕಾಮಗಾರಿ ಕೈಕೊಳ್ಳಲಾಗಿತ್ತು. ಈ ಯೋಜನೆಗಳ ಪೈಕಿ ಧಾರವಾಡ ತಾಲೂಕಿನ ಕಲಕೇರಿ ಗ್ರಾಮದ ಸ.ನಂ. ೧೧೪ ಮತ್ತು ೧೨೨ರಲ್ಲಿ ಕೈಗೊಂಡ ಕಾಮಗಾರಿಯಲ್ಲಿ ೨,೬೦೩ ಸಿಮೆಂಟ್ ಕಂಬ ಬಳಸಿ ೫,೮೬೦ ಮೀಟರ್ ಮುಳ್ಳು ತಂತಿ ಬೇಲಿ ಅಳವಡಿಸಬೇಕಿತ್ತು. ಆದರೆ, ಅರ್ಧದಷ್ಟು ಮಾತ್ರ ಬೇಲಿ ಅಳವಡಿಸಲಾಗಿದೆ. ಪ್ರತಿ ೩ ಮೀಟರ್‌ಗೆ ಸಿಮೆಂಟ್ ಕಂಬವನ್ನು ಅಳವಡಿಸಬೇಕಿತ್ತು. ಅಲ್ಲದೆ, ಪ್ರತಿ ೬ ಕಂಬಕ್ಕೆ ೨ ಆಧಾರ ಕಂಬಗಳನ್ನು ಹಾಕಬೇಕಿತ್ತು. ಆದರೆ, ೧೦ ಕಂಬಕ್ಕೆ ೨ ಸಪೋರ್ಟ್ ಕಂಬಗಳನ್ನು ಹಾಕಲಾಗಿದೆ. ಇನ್ನು ೧೫೦ ಹೆಕ್ಟೇರ್ ಪ್ರದೇಶದÀಲ್ಲಿ ೫೦ ಹೆಕ್ಟೇರ್ ಪ್ರದೇಶ ಆಯ್ಕೆ ಮಾಡಿ ಅದರಲ್ಲಿ ಗುಂಡಿ ತೆಗೆದು ೬,೦೦೦ ಸಸಿಗಳನ್ನು ನೆಡಬೆಕಿತ್ತು. ಆದರೆ, ೩ ಸಾವಿರ ಸಸಿಗಳನ್ನು ನೆಟ್ಟು, ಉಳಿದ ಗುಂಡಿಗಳನ್ನು ತೆಗೆಯದೇ ಸಾವಿರಾರು ಸಸಿಗಳನ್ನು ನಾಶ ಮಾಡಲಾಗಿದೆ ಎಂದರು.
  ಈ ಅವ್ಯವಹಾರದಲ್ಲಿ ಉಪ ವಲಯ ಅರಣ್ಯ ಅಽಕಾರಿ ಪರಶುರಾಮ ಮಣಕೂರ, ವಲಯ ಅರಣ್ಯ ಅಽಕಾರಿಗಳಾದ ರಾಮಲಿಂಗಪ್ಪ ಉಪ್ಪಾರ, ಪ್ರದೀಪ ಪವಾರ, ಸಹಾಯಕ ಅರಣ್ಯ ಸಂರಕ್ಷಣಾಽಕಾರಿ ಪರಿಮಳ ಹುಲಗಣ್ಣವರ ಮತ್ತು ಉಪ ಅರಣ್ಯ ಸಂರಕ್ಷಣಾಽಕಾರಿ ಸೋನಾಲಿ ವೃಷ್ಣಿ ಭಾಗಿಯಾಗಿದ್ದಾರೆ. ಅವ್ಯವಹಾರದ ತನಿಖೆಗೆ ಅಗ್ರಹಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ ಎಂದು ಉಗಾರೆ ತಿಳಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts