More

    ಹಾವೇರಿ ಬಸವ ಭವನದಲ್ಲಿ ಬಸವ ಜಯಂತಿ ಸಂಭ್ರಮ

    ಹಾವೇರಿ: ನಗರದ ಬಸವ ಭವನದಲ್ಲಿ ಶುಕ್ರವಾರ ಹುಕ್ಕೇರಿ ಮಠ, ಬಸವ ಬಳಗ ಮತ್ತು ಹಾವೇರಿ ಶಹರ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿಶ್ವಗುರು, ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ 891ನೇ ಜಯಂತಿ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
    ಸಾನಿಧ್ಯ ವಹಿಸಿದ್ದ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಇದ್ದ ಜಾತಿ ಪದ್ಧತಿ, ಲಿಂಗ ಸಮಾನತೆ, ಅಸ್ಪೃಶ್ಯತೆಯನ್ನು ಹೋಗಲಾಡಿಸಲೆಂದೇ ಧರೆಗೆ ಬಂದ ಬಸವಣ್ಣ, ದೀನದಲಿತರ ಉದ್ಧಾರಕ್ಕಾಗಿ ಮತ್ತು ಜೀವನದ ಮಾರ್ಗವಾಗಿ ವಚನಗಳನ್ನು ಮತ್ತು ಅನುಭವ ಮಂಟಪವನ್ನು ನೀಡಿದಂತಹ ಮಹಾನ್ ಮಾನವತಾವಾದಿ ಎಂದರು.
    ಹೊಸಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಒಬ್ಬ ವ್ಯಕ್ತಿಯಲ್ಲ. ಅದು ಮನುಕುಲದ ಶಕ್ತಿ ಎಂಬಂತೆ ಕನ್ನಡ ನಾಡು ಕಂಡ ಅತ್ಯಂತ ಶ್ರೇಷ್ಠ ಸಮಾಜ ಸುಧಾರಕರು ಎಂದರು.
    ಬೆಳಗ್ಗೆ ಬಸವೇಶ್ವರನಗರದ ವಿವಿಧ ಬಡಾವಣೆಗಳಲ್ಲಿ ಪಥ ಸಂಚಲನ ನಡೆಸಿ, ಬಸವ ಭವನದ ಎದುರು ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಬಸವ ಭವನದಲ್ಲಿ 12ನೇ ಶತಮಾನದ ಪ್ರಮುಖ ವಚನಕಾರರ ಭಾವಚಿತ್ರಗಳ ಅನಾವರಣ ಮಾಡಲಾಯಿತು. ಮಲ್ಲಿಕಾರ್ಜುನ ಹಿಂಚಿಗೇರಿ ಮತ್ತು ಜಗದೀಶ ಹತ್ತಿಕೋಟಿ ಉಪನ್ಯಾಸ ನೀಡಿದರು.
    ಬಸವ ಉತ್ಸವದ ಅಧ್ಯಕ್ಷ ವಿಜಯಕುಮಾರ ಕೂಡ್ಲಪ್ಪನವರ, ಎಂ.ಎಸ್.ಕೋರಿಶೆಟ್ಟರ, ಮಾಂತಣ್ಣ ಮಾಸೂರು, ವಿರೂಪಾಕ್ಷಪ್ಪ ಎಳಗೇರಿ, ಕಿರಣ ಕೊಳ್ಳಿ, ಶೋಭಾತಾಯಿ ಮಾಗಾವಿ, ಜಯಶ್ರೀ, ಚನ್ನಬಸವಣ್ಣ ರೊಡ್ಡನವರ, ಶಿವಬಸಪ್ಪ ಮುದ್ದಿ, ಮುರಿಗೆಪ್ಪ ಕಡೆಕೊಪ್ಪ, ಶಿವಯೋಗಿ ಮಹಾರಾಜಪೇಟೆ, ಇತರರಿದ್ದರು. ಬಸವರಾಜ ಕೋರಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts