More

    ರಾಜ್ಯ ಸರ್ಕಾರ ಮೊದಲು ರೈತರ ಸಾಲಮನ್ನಾ ಮಾಡಲಿ; ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸವಾಲು

    ಹಾವೇರಿ: ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ನೀಡಿರುವ ಬರ ಪರಿಹಾರದಲ್ಲಿ ಈ ಮುಂಚೆ ತಾವು ಕೊಟ್ಟಿದ್ದ 2 ಸಾವಿರ ರೂ. ಕಡಿತ ಮಾಡಿ ರೈತರಿಗೆ ಕೊಡುತ್ತಿದೆ. ಬರ ಪರಿಹಾರವನ್ನು ಸಾಲಕ್ಕೆ ಹೊಂದಾಣಿಕೆ ಮಾಡುತ್ತಿದೆ. ಈ ಮೂಲಕ ರೈತರಿಗೆ ದೊಡ್ಡ ಅನ್ಯಾಯ ಮಾಡುತ್ತಿದೆ. ರೈತರಿಗೆ ಸಹಾಯ ಮಾಡಬೇಕೆಂದಿದ್ದರೆ ಈಗಾಗಲೇ ಘೋಷಣಾ ಪತ್ರದಲ್ಲಿ ತಾವೇ ಹೇಳಿರುವಂತೆ ಸಾಲಮನ್ನಾ ಮಾಡಲಿ. ಕರ್ನಾಟಕದಿಂದಲೇ ಇದು ಪ್ರಾರಂಭವಾಗಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದರು.
    ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲದಲ್ಲಿ ನೊಂದ ರೈತರ ಸಹಾಯಕ್ಕೆಂದು ಕೇಂದ್ರ ಸರ್ಕಾರ ಬರ ಪರಿಹಾರ ಕೊಟ್ಟಿದೆ. ನಮ್ಮ ಕಾಲದಲ್ಲಿ ಎನ್‌ಡಿಆರ್‌ಎಫ್ ಮಾನದಂಡಕ್ಕಿಂತ ಎರಡು ಪಟ್ಟು ಹೆಚ್ಚು ಪರಿಹಾರ ಕೊಟ್ಟಿರುವ ಉದಾಹರಣೆಯಿದೆ. ರಾಜ್ಯ ಸರ್ಕಾರ ಕೊಟ್ಟಿರುವುದೇ ಜುಜುಬಿ ಎರಡು ಸಾವಿರ. ಅದನ್ನೂ ಕಟ್ ಮಾಡುತ್ತಿದ್ದಾರೆ. ಇದು ರಾಜ್ಯದ ರೈತರಿಗೆ ಮಾಡುತ್ತಿರುವ ಘೋರ ಅನ್ಯಾಯ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಕೂಡಲೇ ಇದನ್ನು ಸರಿ ಪಡಿಸದಿದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
    ಪೊಲೀಸರೇ ಕ್ಲಬ್ ನಡೆಸುತ್ತಾರೆ
    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವುದಕ್ಕೆ ಹುಬ್ಬಳ್ಳಿಯಲ್ಲಿ ಮತ್ತೋರ್ವ ಯುವತಿಯ ಹತ್ಯೆಯಾಗಿರುವುದೇ ಸಾಕ್ಷಿಯಾಗಿದೆ. ಇಂತಹ ಹೇಯ ಕೃತ್ಯ ಮಾಡಿದವರನ್ನು ತಂದು ಒದ್ದು ಒಳಗೆ ಹಾಕಿ ಗಲ್ಲಿಗೇರಿಸುವಂಥ ಶಿಕ್ಷೆ ಕೊಡಿಸುವ ಕೆಲಸವನ್ನು ಸರ್ಕಾರ, ಪೊಲೀಸ್ ಇಲಾಖೆ ಮಾಡಬೇಕು. ಹಾಡಹಗಲೇ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಏನೂ ಆಗಿಲ್ಲದಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಬೇರೆ ಬೇರೆ ರಾಜಕಾರಣದ ಕೇಸ್‌ಗಳಲ್ಲಿ ಅಟ್ರಾಸಿಟಿ ಮತ್ತಿತರ ಕೇಸ್ ಹಾಕುವಲ್ಲಿ, ಕ್ಲಬ್ ನಡೆಸುವಲ್ಲಿ ಪೊಲೀಸರು ಮಗ್ನರಾಗಿದ್ದಾರೆ. ಘೋರ ಅನ್ಯಾಯ, ರೇಪ್‌ಗಳು ಆಗುತ್ತಿವೆ. ಇಂತಹದರ ಬಗ್ಗೆ ಏನೂ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯ ಸರ್ಕಾರವೇ ಮುಂದೆ ನಿಂತು ಇಂತಹದಕ್ಕೆಲ್ಲ ಕುಮ್ಮಕ್ಕು ಕೊಡುವುದನ್ನು ನಾನು ನೋಡಿರಲಿಲ್ಲ. ಇದು ಅತ್ಯಂತ ಜನವಿರೋಧಿ ಸರ್ಕಾರ ಎಂದು ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts