More

    ಬೋಧನಾ ತರಗತಿಗಳ ರದ್ಧತಿಗೆ ಒತ್ತಾಯ; ಮಾಧ್ಯಮಿಕ ಶಾಲಾ ನೌಕರರ ಸಂಘ, ಸಹ ಶಿಕ್ಷಕರ ಸಂಘದಿಂದ ಮನವಿ

    ಹಾವೇರಿ: ಎಸ್ಸೆಸ್ಸೆಲ್ಸಿ ಪರೀಕ್ಷೆ -1ರಲ್ಲಿ ಅನುತ್ತೀರ್ಣವಾದ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆ ತರಗತಿಗಳನ್ನು ಮೇ 15ರಿಂದ ಪ್ರಾರಂಭಿಸಲು ಶಿಕ್ಷಣ ಇಲಾಖೆ ನೀಡಿರುವ ಆದೇಶವನ್ನು ರದ್ದುಪಡಿಸುವಂತೆ ಒತ್ತಾಯಿಸಿ ಬುಧವಾರ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ಸಹ ಶಿಕ್ಷಕರ ಸಂಘದಿಂದ ಡಿಡಿಪಿಐ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಶಿಕ್ಷಣ ಇಲಾಖೆಯು ರಜಾಸಹಿತ ಇಲಾಖೆಯಾಗಿದ್ದರೂ, ಮೇ 7ರ ವರೆಗೂ ಎಲ್ಲ ಶಿಕ್ಷಕರು ಚುನಾವಣೆ ಕರ್ತವ್ಯ, ಬಿಎಲ್ಒ, ಮಷ್ಟರಿಂಗ್ ಸೇರಿದಂತೆ ಹಲವು ಕರ್ತವ್ಯ ನಿರ್ವಹಿಸಲಾಗಿದೆ. ಅದಕ್ಕೂ ಪೂರ್ವದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೌಲ್ಯಮಾಪನ ಕಾರ್ಯ ಮಾಡಲಾಗಿತ್ತು. ಇದೀಗ ರಜೆ ಸಿಕ್ಕಿದ್ದು, ಹಲವಾರು ವೈಯಕ್ತಿಕ ಕೆಲಸ, ವೈದ್ಯಕೀಯ ಉಪಚಾರ, ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದು, ಬಿರು ಬೇಸಿಗೆಯಲ್ಲಿ ತರಗತಿ ನಡೆಸಲು ಆದೇಶ ಮಾಡಿರುವುದು ಅವೈಜ್ಞಾನಿಕವಾಗಿದೆ.
    ಪದವಿಪೂರ್ವ ಉಪನ್ಯಾಸಕರಿಗೆ ಇಲ್ಲದ ಆದೇಶ ಕೇವಲ ಪ್ರೌಢ ಶಾಲಾ ಶಿಕ್ಷಕರಿಗೆ ಏಕೆ ಎಂಬ ತಾರತಮ್ಯ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಈ ಆದೇಶ ರದ್ದುಪಡಿಸಿ ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಸಲ್ಲಿಸಲಾಯಿತು.
    ಜಿಲ್ಲಾ ಮಾಧ್ಯಮಿಕ ಸಂಘದ ಅಧ್ಯಕ್ಷ ಎಚ್.ಪಿ.ಬಣಕಾರ, ಸಹ ಶಿಕ್ಷಕರ ಸಂಘ ಅಧ್ಯಕ್ಷ ಮಲ್ಲಿಕಾರ್ಜುನ ಶಾಂತಗಿರಿ, ಎನ್.ಎನ್.ಕುಂದೂರು, ರಾಕೇಶ ಜಿಗಳಿ, ರಮೇಶ ಮಲ್ಲಾಡದ, ಸುರೇಶ ಕಲ್ಮನಿ, ಎಸ್.ಡಿ.ಪರಡ್ಡಿ, ರವಿ ಇಟಗಿ, ವಿ.ರವಿ, ಬಸವರಾಜ ಮೆಡ್ಲೇರಿ, ಎಂ.ಎಸ್.ಕುಂಬಾರ, ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts