More

    ತಿರುಪತಿಯಲ್ಲಿ ದರ್ಶನದ ಭಾಗವಾಗಿ ತಲೆ ಬೋಳಿಸಿಕೊಂಡ ನಟಿ

     ಬೆಂಗಳೂರು: ಮಲಯಾಳಂ ನಟಿ, ನಿರೂಪಕಿ ರಚನಾ ನಾರಾಯಣನ್‌ ಕುಟ್ಟಿ ತಿರುಪತಿಗೆ ಭೇಟಿ ನೀಡಿ ತಮ್ಮ ತಲೆಯ ಕೂದಲನ್ನು ಬೋಳಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ತಿರುಪತಿ ದರ್ಶನಕ್ಕೆ ಹೋಗಿರುವ ನಟಿ ರಚನಾ ನಾರಾಯಣನ್‌ ಕುಟ್ಟಿ, ತಮ್ಮ ಕೇಶಮುಂಡನ ಸೇವೆಯನ್ನು ಮಾಡಿಸಿದ್ದಾರೆ. ಅದರೊಂದಿಗೆ ‘ಎಲ್ಲಾ ಅಹಂಕಾರಗಳನ್ನು ಮತ್ತು ಅಂಧಕಾರಗಳನ್ನು ನಾಶಮಾಡುವ ಭಗವಂತನ ಸನ್ನಿಧಿಯಲ್ಲಿ ” ಎಂದು ಬರೆದುಕೊಂಡಿದ್ದಾರೆ.

    ರಚನಾ, ತಮ್ಮ ತಲೆಕೂದಲನ್ನು ಬೋಳಿಸಿಕೊಂಡಿರುವ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಹೆಚ್ಚಿನವರು ಇದು ಎಡಿಟೆಡ್‌ ಫೋಟೋ ಆಗಿರಬಹುದು ಎಂದುಕೊಂಡಡಿದ್ದರು. ಆದರೆ, ಫೋಟೋಗೆ ನೀಡಲಾದ ಅಡಿಬರಹ ಓದಿದ ಬಳಿಕ ನಟಿ ನಿಜವಾಗಿಯೂ ತಲೆ ಬೋಳಿಸಿಕೊಂಡಿದ್ದಾರೆ ಎನ್ನುವುದು ಖಚಿತವಾಗಿದೆ.

    ಟಿವಿ ಧಾರವಾಹಿಗಳ ಬಳಿಕ ನಟಿ ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದರು. ಸೋಶಿಯಲ್‌ ಮೀಡಿಯಾದಲ್ಲೂ ಸಖತ್‌ ಆಕ್ಟೀವ್‌ ಆಗಿರುವ ರಚನಾ ನಾರಾಯಣನ್‌ ಕುಟ್ಟಿ, ಸಾಮಾಜಿಕ ವಿಚಾರಗಳ ಬಗ್ಗೆ ಬಹಳ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.

    See also  ಕಾಂಗ್ರೆಸ್ ಯಾತ್ರೆ ಬಗ್ಗೆ ಆತಂಕವಿಲ್ಲ, ಜನರ ಮುಂದೆ ವಾಸ್ತವಾಂಶ‌ ಇಡ್ತೀವಿ: ಸಚಿವ ಅಶ್ವತ್ಥ ನಾರಾಯಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts