More

  ಮೋದಿ ಎಂದಿಗೂ ಹಿಂದು-ಮುಸ್ಲಿಂ ರಾಜಕೀಯ ಮಾಡಿಲ್ಲ ಆದ್ರೆ ಕಾಂಗ್ರೆಸ್​ನ ಮುಸ್ಲಿಂ-ಮುಸ್ಲಿಂ ರಾಜಕಾರಣ ಬಯಲು ಮಾಡ್ತಿದ್ದಾರೆ!

  ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎಂದಿಗೂ ಹಿಂದು-ಮುಸ್ಲಿಂ ಅಂತ ರಾಜಕೀಯ ಮಾಡಿಲ್ಲ. ಬದಲಾಗಿ ಕಾಂಗ್ರೆಸ್​ ಮಾಡಿದ ಮುಸ್ಲಿಂ-ಮುಸ್ಲಿಂ ರಾಜಕೀಯವನ್ನು ಬಯಲಿಗೆ ಎಳೆಯುತ್ತಾ ಬರುತ್ತಿದ್ದಾರೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್​ ತನ್ನ ಕೆಟ್ಟ ನಿರೂಪಣೆಯಿಂದ ಪ್ರಧಾನಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂಬುದನ್ನು ಬ್ಲೂಕ್ರಾಫ್ಟ್​ ಡಿಜಿಟಲ್​ ಫೌಂಡೇಶನ್​ ಸಿಇಒ ಅಖಿಲೇಶ್​ ಮಿಶ್ರಾ ಉದಾಹರಣೆ ಸಹಿತ ಎಳೆಎಳೆಯಾಗಿ ವಿವರಿಸಿದ್ದಾರೆ.

  ಮೊದಲು ಕಾಂಗ್ರೆಸ್​ ಮಾಲಿಕ ರಾಹುಲ್​ ಗಾಂಧಿ ಹೋದ ಕಡೆಯೆಲ್ಲ ಬೆಂಕಿಯಿಡುವ ಭಾಷಣ ಮಾಡುವುದರ ಜತೆಗೆ ಭರವಸೆ ನೀಡುತ್ತಾರೆ. ಭಾರತವನ್ನು ಇಬ್ಭಾಗ ಮಾಡುವುದು ಅಥವಾ ಅಂತರ್ಯುದ್ಧವನ್ನು ಪ್ರಚೋದಿಸುವ ರೀತಿಯಲ್ಲೇ ಭಾಷಣವನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಬಳಿಕ ವ್ಯಕ್ತಿನಿಷ್ಠೆಯನ್ನು ಹೊಂದಿರುವ ಇಡೀ ಕಾಂಗ್ರೆಸ್ ಪಟಾಲಂ ವ್ಯವಸ್ಥೆಯು ರಾಹುಲ್​ ಮಾತನ್ನು ಮೌನದಲ್ಲಿ ಅಥವಾ ಬಹಿರಂಗವಾಗಿಯೇ ಹುರಿದುಂಬಿಸುತ್ತದೆ.

  ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ವಿಚಾರಗಳಲ್ಲಿರುವ ಕೆಟ್ಟ ಸ್ವಭಾವದ ಬಗ್ಗೆ ದೇಶದ ಜನರಿಗೆ ತಿಳಿಹೇಳಲು ಪ್ರಯತ್ನಿಸುತ್ತಾರೆ. ಯಾವಾಗ ಪ್ರಧಾನಿ ಮೋದಿ ಮಾತನಾಡುತ್ತಾರೋ ಮೊದಲೇ ಯೋಜನೆ ರೂಪಿಸಿದಂತೆ ಎಲ್ಲ ಕಾಂಗ್ರೆಸ್ಸಿಗರು ಒಮ್ಮೆಲೆ ಎದ್ದು, ಮೋದಿಯವರು ಈ ಚುನಾವಣೆಯನ್ನು ಕೋಮುವಾದಗೊಳಿಸುತ್ತಿದ್ದಾರೆ. ಅಲ್ಲದೆ, ವಿಭಜನೆಯ ಭಾಷೆ ಬಳಸುತ್ತಿದ್ದಾರೆ ಮತ್ತು ವೈಷಮ್ಯವನ್ನು ಬಿತ್ತುತ್ತಿದ್ದಾರೆ ಎಂದು ಬಾಯಿ ಬಡಿದುಕೊಳ್ಳುತ್ತಾರೆ. ಈ ಮೂಲಕ ಮೋದಿ ಅವರು ಹಿಂದು-ಮುಸ್ಲಿಂ ರಾಜಕೀಯ ಮಾಡುತ್ತಿದ್ದಾರೆ ಬಿಂಬಿಸುತ್ತಿದ್ದಾರೆ. ಆದರೆ, ಮೋದಿ ಮುಸ್ಲಿಂ-ಮುಸ್ಲಿಂ ರಾಜಕೀಯದ ಪರಿಣಾಮಗಳನ್ನು ಬಹಿರಂಗಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಅಖಿಲೇಶ್​ ಮಿಶ್ರಾ, ಕೆಲ ಉದಾಹರಣೆಗಳನ್ನು ಸಹ ನೀಡಿದ್ದಾರೆ.

  1. ಆಸ್ತಿ ಹಂಚಿಕೆ
  ನಾವು ಅಧಿಕಾರಕ್ಕೆ ಬಂದರೆ ದೇಶದ ಜನರ ಸಂಪತ್ತಿನ ಬಗ್ಗೆ ಸಮೀಕ್ಷೆ ಮಾಡಿ, ನಂತರ ಜನಸಂಖ್ಯೆಗೆ ಅನುಗುಣವಾಗಿ ಸಂಪತ್ತನ್ನು ಮರುಹಂಚಿಕೆ ಮಾಡುತ್ತೇವೆ ಮತ್ತು ಅಲ್ಪಸಂಖ್ಯಾತರು ತಮ್ಮ ನ್ಯಾಯಯುತ ಪಾಲನ್ನು ಪಡೆಯುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ರಾಹುಲ್​ ಗಾಂಧಿ ತಮ್ಮ ಭಾಷಣದಲ್ಲಿ ಮೊದಲಿಗೆ ಹೇಳುತ್ತಾರೆ. ಈ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್​ನವರು ನಿಮ್ಮ ಮಂಗಳಸೂತ್ರವನ್ನು ಬಿಡುವುದಿಲ್ಲ. ಮಂಗಳಸೂತ್ರವನ್ನು ಕಿತ್ತು ಅವರ ಮತ ಬ್ಯಾಂಕ್‌ಗೆ ನೀಡುತ್ತಾರೆ ಎಂದು ತಮ್ಮ ಭಾಷಣದಲ್ಲಿ ಹೇಳುತ್ತಾರೆ. ಮೋದಿ ಭಾಷಣ ಮುಗಿಯುತ್ತಿದ್ದಂತೆ ಒಮ್ಮೆಲೆ ಮುಗಿಬೀಳುವ ಕಾಂಗ್ರೆಸ್​ ಪಟಾಲಂಗಳು ಈ ಚುನಾವಣೆಯು ಹಿಂದೂ-ಮುಸ್ಲಿಂ ಚುನಾವಣೆ ಎಂದು ಬಿಂಬಿಸಲು ಮೋದಿಗೆ ಎಷ್ಟು ಧೈರ್ಯ ಎಂದು ಬಾಯಿ ಬಡಿದುಕೊಳ್ಳುತ್ತಾರೆ.

  2. ಮುಸ್ಲಿಂ ಮೀಸಲಾತಿ
  ನಾವು ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು ನಡೆಸುತ್ತೇವೆ ಮತ್ತು ಅಲ್ಪಸಂಖ್ಯಾತರು ಉದ್ಯೋಗ, ಶಿಕ್ಷಣ ಮತ್ತು ಸಾರ್ವಜನಿಕ ಗುತ್ತಿಗೆಗಳಲ್ಲಿ ತಮ್ಮ ಪಾಲು ಪಡೆಯುವುದನ್ನು ಖಾತ್ರಿಪಡಿಸಿಕೊಳ್ಳುವುದಾಗಿ ನಮ್ಮ ಪ್ರಣಾಳಿಕೆ ಹೇಳುತ್ತದೆ ಎಂಬ ರಾಹುಲ್​ ಗಾಂಧಿ ಹೇಳುತ್ತಾರೆ. ಬಳಿಕ ಪ್ರಧಾನಿ ಮೋದಿ, ಕಾಂಗ್ರೆಸ್​ನವರು ಒಬಿಸಿ ಮೀಸಲಾತಿಯನ್ನು ಕಸಿದುಕೊಳ್ಳಲು ಬರುತ್ತಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ಮಾಡಿದಂತೆ ಮತ್ತು ಆಂಧ್ರಪ್ರದೇಶದಲ್ಲಿ ಪ್ರಯತ್ನಿಸಿದಂತೆ ಮುಸ್ಲಿಮರಿಗೆ ನೀಡುತ್ತಾರೆ ಎನ್ನುತ್ತಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್​ ಪಟಾಲಂಗಳು ಒಮ್ಮೆಲೆ ಎದ್ದು ಈ ಚುನಾವಣೆಯು ಹಿಂದೂ-ಮುಸ್ಲಿಂ ಚುನಾವಣೆ ಎಂದು ಬಿಂಬಿಸಲು ಮೋದಿಗೆ ಎಷ್ಟು ಧೈರ್ಯ ಎಂದು ಮತ್ತೆ ಬಾಯಿ ಬಡಿದುಕೊಳ್ಳುತ್ತಾರೆ.

  3. ಸಶಸ್ತ್ರ ಪಡೆಗಳಲ್ಲಿ ಅಶಾಂತಿ ಪ್ರಚೋದಿಸುವುದು
  ಸಶಸ್ತ್ರ ಪಡೆಗಳ ವಿಚಾರಕ್ಕೆ ಬಂದಾಗ ರಾಹುಲ್​ ಗಾಂಧಿ, ತಮ್ಮ ಭಾಷಣದಲ್ಲಿ ಬೆಂಕಿಯಂತಹ ಟೀಕೆಗಳನ್ನು ಮಾಡುತ್ತಾರೆ. ಇದು ಬಹುತೇಕ ದೇಶದ್ರೋಹವಾಗಿದ್ದು, ಸೈನಿಕರು ಮತ್ತು ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯವನ್ನು ಮೂಡಿಸಲು ಪ್ರಯತ್ನಿಸುತ್ತಾರೆ. ಈ ವಿಚಾರವಾಗಿ ಮೋದಿ ಮಾತನಾಡಿ, ರಾಹುಲ್ ಗಾಂಧಿಯನ್ನು ಟೀಕಸಿದಾಗ ಮತ್ತೆ ಉರಿದು ಬೀಳುವ ಕಾಂಗ್ರೆಸ್​ ಪಟಾಲಂಗಳು ಓಹೋ! ಮೋದಿಯವರನ್ನು ನೋಡಿ ಸಶಸ್ತ್ರ ಪಡೆಗಳನ್ನು ರಾಜಕೀಯಗೊಳಿಸುವುದನ್ನು ಬಿಡುತ್ತಿಲ್ಲ ಎಂದು ಬಾಯಿ ಬಡಿದುಕೊಳ್ಳುತ್ತಾರೆ.

  ಅಂದಹಾಗೆ ರಾಹುಲ್ ಗಾಂಧಿಯವರ ಪ್ರತಿಯೊಂದು ಭಾಷಣ ಅಥವಾ ಭರವಸೆಯು ಸಾಮಾಜಿಕ ರಚನೆಯನ್ನು (ಜಾತಿ ಸಂಘರ್ಷ ಸೃಷ್ಟಿ) ಮುರಿಯಲು, ಆರ್ಥಿಕ ಸ್ಥಿತಿಯನ್ನು (ಸಂಪತ್ತಿನ ಪುನರ್ವಿತರಣೆ) ನಾಶಮಾಡಲು, ರಾಷ್ಟ್ರೀಯ ಏಕತೆಯನ್ನು (ಉತ್ತರ-ದಕ್ಷಿಣ ವಿಭಜನೆ) ಅಥವಾ ಸಶಸ್ತ್ರ ಪಡೆಗಳ (ಅಗ್ನಿವೀರ್ ದಾಳಿ) ಒಗ್ಗಟ್ಟಿಗೆ ಹಾನಿಯನ್ನುಂಟು ಮಾಡುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಹೀಗಾಗಿ ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ರಾಷ್ಟ್ರಕ್ಕೆ ಯಾವುದು ಹೆಚ್ಚು ಹಾನಿಕಾರಕ ಎಂಬುದನ್ನು ನೀವೇ ಯೋಚಿಸಿ.

  ಮೋದಿಯವರು ತಮ್ಮ ನೇರ ಭಾಷೆಯ ಮೂಲಕ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್​ನ ಮುಸ್ಲಿಂ ಮೀಸಲಾತಿ, ಧರ್ಮದ ಆಧಾರದ ಮೇಲೆ ಗುತ್ತಿಗೆ ನೀಡುವುದು, ಸಂಪತ್ತನ್ನು ದೋಚಿ ತಮ್ಮ ಮತಬ್ಯಾಂಕ್‌ಗೆ ಹಂಚುವ ವಿಚಾರಗಳಂತಹ ಕಾಂಗ್ರೆಸ್​ನ ಕೊಳಕು ಸತ್ಯಗಳನ್ನು ಎತ್ತಿ ತೋರಿಸುತ್ತಿದ್ದಾರೆಯೇ? ಮೋದಿ ಅವರ ಭಾಷಾ ಶೈಲಿ ನಿಮಗೆ ಇಷ್ಟವಾಗದೇ ಇರಬಹುದು. ಆದರೆ, ಅವರು ಬೆಣ್ಣೆಯಂತಹ ಮಾತುಗಳನ್ನು ಆಡುವುದಿಲ್ಲ. 10 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಅವರು ಎಂದಿಗೂ ಇದನ್ನು ಪ್ರಯತ್ನಿಸಲಿಲ್ಲ. ತಮ್ಮ ನೇರ ನಡೆ-ನುಡಿಯಿಂದಲೇ ಸದ್ದು ಮಾಡಿದವರು. ಆದರೂ ಮೋದಿಯವರ ಭಾಷೆ ನಿಮ್ಮ ರೆಡ್ ವೈನ್-ರಿಫೈನ್ಡ್ ಸೆನ್ಸಿಟಿವ್‌ಗಳಿಗೆ ಇಷ್ಟವಾಗುವುದಿಲ್ಲ. ಆದರೆ, ರಾಹುಲ್ ಗಾಂಧಿಯವರ ನೀತಿಗಳು ದೇಶದಲ್ಲಿ ಅಂತರ್ಯುದ್ಧ ಮತ್ತು ಮತ್ತೊಂದು ವಿಭಜನೆಗೆ ಕಾರಣವಾಗುತ್ತವೆ. ಹೀಗಾಗಿ ಪ್ರಧಾನಿ ಮೋದಿ ಅವರು ಹೇಳಿದಂತೆ ಅವರೆಂದಿಗೂ ಹಿಂದೂ-ಮುಸ್ಲಿಂ ರಾಜಕೀಯ ಮಾಡಿಲ್ಲ ಎಂಬುದು ವಾಸ್ತವವಾಗಿ ಸತ್ಯ. ವಿಶಾಲ ರಾಷ್ಟ್ರೀಯ ಹಿತಾಸಕ್ತಿಯ ಅರ್ಥದಲ್ಲಿಯೂ ಇದು ಸತ್ಯವಾಗಿದೆ.

  ಹೀಗಾಗಿ ನಿಜವಾದ ಅಪಾಯ ಏನೆಂದರೆ ರಾಹುಲ್ ಗಾಂಧಿ/ಕಾಂಗ್ರೆಸ್​ನ ಮುಸ್ಲಿಂ-ಮುಸ್ಲಿಂ ರಾಜಕಾರಣ. ಹೀಗಾಗಿ ಇದರಿಂದ ಎಚ್ಚರಗೊಳ್ಳಬೇಕಿದೆ. ಹೀಗಾಗಿ ಮೋದಿ ಅವರು ತಮ್ಮ ಮಾತಿನ ಉದ್ದಕ್ಕೂ ಕಾಂಗ್ರೆಸ್​ನ ಕಟು ಸತ್ಯಗಳನ್ನು ಎತ್ತಿ ತೋರಿಸುತ್ತಿದ್ದಾರೆ ಎಂದು ಅಖಿಲೇಶ್​ ಮಿಶ್ರಾ ಅವತರು ತಮ್ಮ ಎಕ್ಸ್​ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

  ಮೇ 18ರಂದು ಸಿಎಸ್​ಕೆ ವಿರುದ್ಧ ಆರ್​ಸಿಬಿ ಗೆಲುವು ನಿಶ್ಚಿತ ಪ್ಲೇಆಫ್ ಪ್ರವೇಶ​ ಖಚಿತ! ಇದಕ್ಕೆ ಕೊಹ್ಲಿಯೇ ಸಾಕ್ಷಿ

  800 ಅತಿಥಿಗಳು, ಐಷಾರಾಮಿ ಹಡಗು! ಸಮುದ್ರದ ಮಧ್ಯೆ ಮುಕೇಶ್​ ಅಂಬಾನಿ ಪುತ್ರನ 2ನೇ ಪ್ರೀ ವೆಡ್ಡಿಂಗ್ ಸಂಭ್ರಮ

  ಒಮ್ಮೆ ಹೋದ್ರೆ ಮತ್ತೆ ನೀವು ನನ್ನ ನೋಡೋದು ಡೌಟ್​; ನಿವೃತ್ತಿ ಬಗ್ಗೆ ವಿರಾಟ್ ಕೊಹ್ಲಿ ಬಿಚ್ಚುಮಾತು, ಫ್ಯಾನ್ಸ್​ ಶಾಕ್!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts