ಹೈದರಾಬಾದ್: ತೆಲುಗಿನ ಖ್ಯಾತ ನಿರೂಪಕಿ, ಪುಷ್ಪಾ ನಟಿ ಎಂದೇ ಖ್ಯಾತಿಯಾಗಿರುವ ಅನಸೂಯಾ ಭಾರದ್ವಾಜ್ ಸಿನಿಮಾಗಳಿಗಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅನಸೂಯಾ ಮನಸ್ಸಿನಲ್ಲಿ ಏನಿದೆಯೋ ಅದನ್ನು ನೇರವಾಗಿ ಹೇಳುತ್ತಾರೆ ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿ.
ಇದನ್ನೂ ಓದಿ: ಜ್ಯೂ.ಎನ್ಟಿಆರ್ ಸಹೋದರ ಕಲ್ಯಾಣ್ ರಾಮ್ ಸಿನಿಮಾ ಸೆಟ್‌ನಲ್ಲಿ ಬೆಂಕಿ: ನಾಲ್ಕು ಕೋಟಿ ನಷ್ಟ!
ಅನಸೂಯಾ ಭಾರದ್ವಾಜ್ ತಮ್ಮ ವೃತ್ತಿಜೀವನವನ್ನು ಆಂಕರ್ ಆಗಿ ಪ್ರಾರಂಭಿಸಿದವರು. ಆ ನಂತರ ನಟಿಯಾದವರು. ಸದ್ಯ ಟಾಲಿವುಡ್’ನಲ್ಲಿ ವಿಭಿನ್ನ ಪಾತ್ರಗಳಲ್ಲಿ ಬ್ಯುಸಿಯಾಗಿರುವ ಅನಸೂಯಾ, ಕೇವಲ ಧನಾತ್ಮಕ ಪಾತ್ರಗಳಲ್ಲಿ ಮಾತ್ರವಲ್ಲದೆ ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ಕೆಲವು ದಿನಗಳಿಂದ ಅವರ ಸಂಭಾವನೆ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಈಗ ಇದಕ್ಕೆ ಉತ್ತರ ಸಿಕ್ಕಿದೆ.
ಹೌದು…ನಿರೂಪಕಿ, ನಟಿ ಅನಸೂಯಾ ಅವರು ಬಿಂದಾಸ್, ಮಾಡರ್ನ್ ಮಹಾಲಕ್ಷ್ಮಿ, ಬೂಮ್ ಬೂಮ್ ಮತ್ತು ಮಾಸ್ಟರ್ ಚೆಫ್‌ನಂತಹ ಅನೇಕ ಟಿವಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಕ್ಷಣ, ಗಾಯತ್ರಿ, ಯಾತ್ರಾ, ಥ್ಯಾಂಕ್ಯೂ ಬ್ರದರ್, ರಂಗಸ್ಥಳ, ಪುಷ್ಪ ಮುಂತಾದ ಹಲವು ಹಿಟ್ ಚಿತ್ರಗಳಲ್ಲೂ ಅನಸೂಯಾ ನಟಿಸಿದ್ದಾರೆ.
ಟಾಲಿವುಡ್ನ ಟಾಪ್ ಆಂಕರ್‌ಗಳಲ್ಲಿ ಒಬ್ಬರಾಗಿ ಖ್ಯಾತಿ ಪಡೆದಿರುವ ಅನಸೂಯಾ ಅವರು ನಿರೂಪಣೆ ಮಾಡುವ ಪ್ರತಿ ಕಾರ್ಯಕ್ರಮಕ್ಕೆ 3 ರಿಂದ 5 ಲಕ್ಷ ರೂ. ಪಡೆಯುತ್ತಾರೆ ಎನ್ನಲಾಗಿದೆ. ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಆದರೆ ಈ ವಿಷಯ ಟಾಲಿವುಡ್ನಲ್ಲಿ ಭಾರೀ ಸಂಚಲ ಮೂಡಿಸುತ್ತಿದೆ. ದೂರದರ್ಶನದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ನಿರೂಪಕರಾಗಿರುವ ಅವರು ಚಲನಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ: ಅಂದಹಾಗೆ ಅನಸೂಯಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ.
ಅನಸೂಯಾ ಸದ್ಯ ಟಾಲಿವುಡ್ನ ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪಾ-2 ಜೊತೆಗೆ ಇನ್ನೂ ಕೆಲವು ಸ್ಟಾರ್ ಹೀರೋ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಕಾರಣ ಅನಸೂಯಾ ಕಿರುತೆರೆಯಿಂದ ದೂರ ಉಳಿದಿದ್ದರು. ಕಳೆದ ವರ್ಷ ಜಬರ್ದಸ್ತ್ ಕಾರ್ಯಕ್ರಮಕ್ಕೆ ವಿದಾಯ ಹೇಳಿದ್ದರು.
ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರ ಕೇಸ್ ದಾಖಲಿಸಿದ ಎಸ್‌ಐಟಿ!