More

    ಜ್ಯೂ.ಎನ್​ಟಿಆರ್ ಸಹೋದರ ಕಲ್ಯಾಣ್ ರಾಮ್ ಸಿನಿಮಾ ಸೆಟ್‌ನಲ್ಲಿ ಬೆಂಕಿ: ನಾಲ್ಕು ಕೋಟಿ ನಷ್ಟ!

    ತೆಲಂಗಾಣ: ಟಾಲಿವುಡ್​ನ ಜನಪ್ರಿಯ ನಟ ಜ್ಯೂ.ಎನ್‌ಟಿಆರ್ ಸಹೋದರ ನಂದಮೂರಿ ಕಲ್ಯಾಣ್ ರಾಮ್ ನಟಿಸುತ್ತಿದ್ದ ಸಿನಿಮಾದ ಶೂಟಿಂಗ್ ಸೆಟ್​​ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು ಸುಮಾರು 4 ಕೋಟಿ ರೂ. ನಷ್ಟವಾಗಿದೆ. ಬೆಂಕಿ ಅವಘಡದಲ್ಲಿ ಯಾರಿಗೂ ಯಾವುದೇ ಗಾಯ ಅಥವಾ ಜೀವಹಾನಿ ಸಂಭವಿಸಿಲ್ಲ ಎಂದು ಚಿತ್ರತಂಡ ತಿಳಿಸಿದೆ.

    ಇದನ್ನೂ ಓದಿ: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರ ಕೇಸ್ ದಾಖಲಿಸಿದ ಎಸ್‌ಐಟಿ!

    ಶಾರ್ಟ್ ಸರ್ಕ್ಯೂಟ್​ನಿಂದಾಗಿ ಈ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗುತ್ತಿದ್ದು, ಸೆಟ್​ಗೆ ಬೆಂಕಿ ಬಿದ್ದಾಗ ಶೂಟಿಂಗ್ ನಡೆಯುತ್ತಿರಲಿಲ್ಲ ವಾದ್ದರಿಂದ ಯಾವುದೇ ಹಾನಿಯಾಗಿಲ್ಲ.

    ಜ್ಯೂ.ಎನ್​ಟಿಆರ್ ಸಹೋದರ ಕಲ್ಯಾಣ್ ರಾಮ್ ಸಿನಿಮಾ ಸೆಟ್‌ನಲ್ಲಿ ಬೆಂಕಿ: ನಾಲ್ಕು ಕೋಟಿ ನಷ್ಟ!

    ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಲ್ಯಾಣ್ ರಾಮ್ ಕ್ರೈಂ ಥ್ರಿಲ್ಲರ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಕಲ್ಯಾಣ್ ರಾಮ್ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಳ್ತಿದ್ದಾರೆ. ಜೊತೆಗೆ ಬಾಲಿವುಡ್​ನ ಅರ್ಜುನ್ ರಾಮ್​ಪಾಲ್, ನಾಯಕಿಯಾಗಿ ಸಾಯಿ ಮಂಜ್ರೇಕರ್, ಸಿನಿಮಾದಲ್ಲಿ ಹಿರಿಯ ನಟಿ, ರಾಜಕಾರಣಿ ವಿಜಯಶಾಂತಿ ವಿಜಯಶಾಂತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಈ ಚಿತ್ರವನ್ನು ಪ್ರದೀಪ್ ಚಿಲಕೂರಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಅಶೋಕ್ ಬಂಡವಾಳ ಹೂಡಿದ್ದಾರೆ. ಕಲ್ಯಾಣ್ ರಾಮ್ ನಟನೆ ಜೊತೆಗೆ ಸಹ ನಿರ್ಮಾಪಕರೂ ಆಗಿದ್ದಾರೆ.

    ಈ ಸಿನಿಮಾದ ಆಕ್ಷನ್ ದೃಶ್ಯಗಳ ಚಿತ್ರೀಕರಣಕ್ಕಾಗಿ ಹೈದರಾಬಾದ್ ಹೊರವಲಯದಲ್ಲಿ ಒಂದೇ ಜಾಗದಲ್ಲಿ ಬೇರೆ ಬೇರೆ ಸೆಟ್​ಗಳನ್ನು ನಿರ್ಮಾಣ ಮಾಡಲಾಗಿತ್ತು. ಸೆಟ್ ನಿರ್ಮಾಣಕ್ಕೆ ಸುಮಾರು 4 ಕೋಟಿ ಖರ್ಚು ಮಾಡಲಾಗಿತ್ತು ಎನ್ನಲಾಗುತ್ತಿದೆ. ಈಗ ಆ ಬೃಹತ್ ಸೆಟ್​ ಬೆಂಕಿಗೆ ಆಹುತಿಯಾಗಿದೆ. ಸೆಟ್​ಗೆ ಬೆಂಕಿ ಬಿದ್ದಾಗ ಚಿತ್ರೀಕರಣ ನಡೆಯುತ್ತಿರಲಿಲ್ಲವಾದ್ದರಿಂದ ಯಾರಿಗೂ ಹಾನಿಯಾಗಿಲ್ಲ.

    ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ: ರಾಜ್ಯದಲ್ಲಿ ಇನ್ನೂ 5 ದಿನ ಮಳೆಯಾಗುವ ಸಾಧ್ಯತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts