More

    ಹೈಕೋರ್ಟ್​ ಟೆರೇಸ್​ ಮೇಲೆ ಮಹಿಳೆಗೆ ಚುಂಬಿಸಿದ ವಕೀಲ! ವಿಡಿಯೋ ವೈರಲ್​ ಆದ ಬಳಿಕ ದೂರು ದಾಖಲು

    ಹೈದರಾಬಾದ್​: ಮಹಿಳೆಯರಿಗೆ ಎಲ್ಲಿಯೂ ರಕ್ಷಣೆ ಇಲ್ಲ ಎಂಬಾಂತಾಗಿದೆ. ಮನೆಯಲ್ಲಿ, ಕೆಲಸದ ಸ್ಥಳದಲ್ಲಿ ಮಾತ್ರವಲ್ಲದೆ, ರಕ್ಷಣಾ ವ್ಯವಸ್ಥೆ ಎಂದು ಪರಿಗಣಿಸಲಾದ ಪೊಲೀಸ್ ಠಾಣೆಗಳು ಮತ್ತು ನ್ಯಾಯಾಲಯಗಳಲ್ಲಿಯೂ ಲೈಂಗಿಕ ದೌರ್ಜನ್ಯ ಅಥವಾ ಲೈಂಗಿಕ ಕಿರುಕುಳ ನಡೆಯುತ್ತಿದೆ. ಮಾಜಿ ಸರ್ಕಾರಿ ವಕೀಲರೊಬ್ಬರು ತನ್ನ ಮಹಿಳಾ ಸಹೋದ್ಯೋಗಿಗೆ ಬಲವಂತವಾಗಿ ಚುಂಬಿಸಿದ್ದರು. ಈ ಘಟನೆ ಕಳೆದ ಫೆಬ್ರವರಿಯಲ್ಲಿ ನಡೆದಿತ್ತು ಮತ್ತು ಕ್ಯಾಮರಾದಲ್ಲಿಯೂ ಸೆರೆಯಾಗಿತ್ತು. ಇದೀಗ ಮಹಿಳೆ ದೂರು ನೀಡಿದ ನಂತರ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

    ಮಾಜಿ ಸರ್ಕಾರಿ ವಕೀಲರಾಗಿದ್ದ ಎ.ಸಂಜಯ್ ಕುಮಾರ್ ಎಂಬುವರು ಮುತ್ತು ಕೊಡುವಂತೆ ಮಹಿಳೆಯೊಬ್ಬರನ್ನು ತೆಲಂಗಾಣದ ಹೈದರಾಬಾದ್ ಹೈಕೋರ್ಟ್ ಕಟ್ಟಡದ ಟೆರೇಸ್ ಮೇಲೆಯೇ ಒತ್ತಾಯಿಸಿದ್ದಾರೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾದ ನಂತರ ವೈರಲ್ ಆಗಿದೆ.

    ಮಹಿಳಾ ಉದ್ಯೋಗಿ ಹೈಕೋರ್ಟ್ ಕಟ್ಟಡದ ಟೆರೇಸ್ ಮೇಲೆ ನಿಂತಿರುವಾಗ, ವಕೀಲ ವೇಷದಲ್ಲಿರುವ ಸಂಜಯ್ ಫೋನ್​​ನಲ್ಲಿ ಮಾತನಾಡುತ್ತಿರುವುದು ಕಂಡು ಬಂದಿದೆ. ಕರೆ ಮುಗಿಸಿದ ಬಳಿಕ ಮಹಿಳೆಯ ಬಳಿ ಹೋಗಿ ಅವಳ ಮುಖವನ್ನು ಕೈಯಲ್ಲಿ ಹಿಡಿದು ಬಲವಂತವಾಗಿ ಮುತ್ತಿಡುತ್ತಾರೆ. ಟೆರೇಸ್ ಮೇಲೆ ಬರುವಂತೆ ಬಲವಂತ ಮಾಡಿದ ನಂತರವೇ ಆಕೆ ಅಲ್ಲಿಗೆ ಹೋಗಿದ್ದಾಳೆ ಎಂದು ವರದಿಯಾಗಿದೆ.

    ಸಂಜಯ್ ಕುಮಾರ್ ಅವರು ನ್ಯಾಯಾಲಯದ ಆವರಣದಲ್ಲೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಲೈಂಗಿಕ ಆಸೆಗಳನ್ನು ಈಡೇರಿಸುವಂತೆ ಒತ್ತಾಯಿಸುತ್ತಿದ್ದಾರೆ. ನನ್ನನ್ನು ನಿರಂತರವಾಗಿ ಹಿಂಬಾಲಿಸುತ್ತಿದ್ದು, ಬ್ಲಾಕ್​ಮೇಲ್ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

    ಸಂಜಯ್ ಕುಮಾರ್ ವಿರುದ್ಧ ಚಾರ್ಮಿನಾರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354, 354ಡಿ ಮತ್ತು 506 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ನ್ಯಾಯದೇವರ ಆವರಣದಲ್ಲೇ ಮಹಿಳೆಯರಿಗೆ ರಕ್ಷಣೆ ಇಲ್ಲವೆಂದರೆ, ಇನ್ನುಳಿದ ಪ್ರದೇಶಗಳಲ್ಲಿ ಮಹಿಳೆಯರ ಹೇಗೆ ತಾನೇ ಮುಕ್ತವಾಗಿ ಇರಲು ಸಾಧ್ಯ ಎಂಬ ಪ್ರಶ್ನೆ ಉದ್ಭವವಾಗಿದೆ. (ಏಜೆನ್ಸೀಸ್​)

    ಅಂಕಲ್​ನನ್ನು ಮದುವೆಯಾದ ಯುವತಿ! ನಿನ್ನ ನಗು ನೋಡೋಕಾಗ್ತಿಲ್ಲ ಅಂದ್ರು ನೆಟ್ಟಿಗರು

    ಆ ರೀತಿಯ ಆರೋಪಗಳಿಲ್ಲ ಎಂದು ಎಸ್​ಐಟಿ ಹೇಳಿಕೆ: ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ಎಚ್​.ಡಿ. ರೇವಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts