More

    12 ವರ್ಷಗಳಿಂದ ಇನ್ಶೂರೆನ್ಸ್ ಇಲ್ಲದ ವಾಹನದಲ್ಲಿ ಪೊಲೀಸರ ಡ್ಯೂಟಿ; ಸ್ಥಳೀಯ ವ್ಯಕ್ತಿ ಅಧಿಕಾರಿಯನ್ನೇ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ!

    ಕುಂದಾಪುರ: ಪೊಲೀಸರ ಕೈಗೆ ಸಾರ್ವಜನಿಕರು ದಂಡ ಕಟ್ಟುವಂತಾಗುವುದು ಸಹಜ. ಆದರೆ ಇಲ್ಲೊಂದು ಕಡೆ ಪೊಲೀಸ್ ಅಧಿಕಾರಿಯೇ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು, ಫಜೀತಿ ಅನುಭವಿಸಿದ್ದಾರೆ.

    ಸಂಚಾರ ನಿಯಮ ಉಲ್ಲಂಘಿಸುವವರನ್ನು ಪತ್ತೆ ಮಾಡಿ ದಂಡ ವಿಧಿಸುತ್ತಿದ್ದ ಪೊಲೀಸ್ ಅಧಿಕಾರಿಯೇ ಸಂಚಾರ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದ್ದು, ಸಾರ್ವಜನಿಕರ ಪ್ರಶ್ನೆಗೆ ಆ ಅಧಿಕಾರಿ ಕಕ್ಕಾಬಿಕ್ಕಿ ಆಗುವಂತಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಈ ಪ್ರಕರಣ ನಡೆದಿದೆ.

    ನಡುರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ, ಸಾರ್ವಜನಿಕರಿಗೆ ದಂಡ ವಿಧಿಸುತ್ತಿದ್ದ ಪೊಲೀಸ್ ಅಧಿಕಾರಿಯನ್ನೇ ವಾಹನ ಸವಾರರೊಬ್ಬರು ವಾಹನದ ದಾಖಲೆ ಕೊಡುವಂತೆ ಜೋರಾಗಿ ಕೇಳಿದ್ದಾರೆ. ಅದಕ್ಕೆ ಕಕ್ಕಾಬಿಕ್ಕಿ ಆಯಾಗುವ ಸರದಿ ಪೊಲೀಸ್ ಅಧಿಕಾರಿಯದ್ದಾಗಿತ್ತು. ಬೈಂದೂರು ತಾಲೂಕು ನಾವುಂದ ಗ್ರಾಮದ ಅರೆಹೊಳೆ ಕ್ರಾಸ್ ಬಳಿ ಈ ಪ್ರಸಂಗ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರ ಪೊಲೀಸ್ ಸಿಬ್ಬಂದಿಯಿಂದ ವಾಹನ ತಪಾಸಣೆ ನಡೆಯುತ್ತಿತ್ತು.

    ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ಸೀಟ್ ಬೆಲ್ಟ್, ಇನ್ಶೂರೆನ್ಸ್ , ಹೆಲ್ಮೆಟ್ ವಿಚಾರವಾಗಿ ಪೊಲೀಸರು ಸವಾರರಿಗೆ ಫೈನ್ ಹಾಕುತ್ತಿದ್ದರು. ಈ ವೇಳೆ ತಪಾಸಣೆ ಮಾಡುತ್ತಿದ್ದ ಪೊಲೀಸ್ ವಾಹನದ ಮಾಹಿತಿ ಕಲೆಹಾಕಿದ ವಾಹನ ಸವಾರರೊಬ್ಬರು ಸುಮಾರು 12 ವರ್ಷಗಳಿಂದ ಇನ್ಶೂರೆನ್ಸ್ ಕಟ್ಟದೆ ಓಡಾಡುತ್ತಿರುವ ಪೊಲೀಸ್ ಇಲಾಖೆಯ ವಾಹನದ ದಾಖಲೆ ಪತ್ರ ತೋರಿಸುವಂತೆ ಕೇಳಿದ್ದಾರೆ.

    ಇದನ್ನೂ ಓದಿ: ಫ್ರೆಷರ್ಸ್​ಗೆ ಹೋಲಿಸಿದ್ರೆ ಇನ್​ಫೊಸಿಸ್ ಸಿಇಒ ಸಂಬಳ 2,200 ಪಟ್ಟು ಹೆಚ್ಚು!; ಅವರು ಎಷ್ಟು ಗಂಟೆ ಕೆಲಸ ಮಾಡ್ತಾರೆ?

    2011ಕ್ಕೆ ಇನ್ಶೂರೆನ್ಸ್ ಡ್ಯೂ ಆಗಿರುವ ಪೊಲೀಸ್ ವಾಹನ ಕುರಿತು ವಾಹನ ಸವಾರ ವಿಚಾರಿಸಿದ್ದಾರೆ. ಈ ಕುರಿತು ಸೀದಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನೇ ಕೇಳಿ. ಸದ್ಯಕ್ಕೆ ನನಗೆ ಫೈನ್ ಹಾಕಲು ಬಿಡಿ ಎಂದು ಪೊಲೀಸ್ ಅಧಿಕಾರಿ ಜಬರ್ದಸ್ತು ಮಾಡಿದ್ದಾರೆ.

    ಹಾಗಾದ್ರೆ ಜನಸಾಮಾನ್ಯರಿಗೆ ಒಂದು ನ್ಯಾಯ, ಪೊಲೀಸರಿಗೆ ಒಂದು ನ್ಯಾಯವಾ? ಎಂದು ವಾಹನ ಸವಾರ ಪ್ರಶ್ನಿಸಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು ವಾಹನ ಸವಾರನ ಕುರಿತು ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

    ನಿಮ್ಮಲ್ಲಿ ಹಳೇ ಚಪ್ಲಿ ಇದ್ರೆ ಸಾಕು, ನೀವು ಈ ‘ನಡಿಗೆ’ಯಲ್ಲಿ ಪಾಲ್ಗೊಳ್ಳಬಹುದು: ಏನಿದು ಅಭಿಯಾನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts