More

    ನಿಮ್ಮಲ್ಲಿ ಹಳೇ ಚಪ್ಲಿ ಇದ್ರೆ ಸಾಕು, ನೀವು ಈ ‘ನಡಿಗೆ’ಯಲ್ಲಿ ಪಾಲ್ಗೊಳ್ಳಬಹುದು: ಏನಿದು ಅಭಿಯಾನ?

    ಬೆಂಗಳೂರು: ಯಾವುದೇ ದೊಡ್ಡ ಪ್ರಯಾಣ ಒಂದು ಸಣ್ಣ ಹೆಜ್ಜೆಯಿಂದ ಶುರುವಾಗುತ್ತದೆ ಎಂಬ ಮಾತಿದೆ. ಆದರೆ ಇಲ್ಲೊಂದು ಪ್ರಯಾಣ-ಅಭಿಯಾನ ಹಳೇ ಚಪ್ಪಲಿಯಿಂದ ಶುರುವಾಗುತ್ತಿದೆ. ತಮ್ಮ ಬಳಿ ಹಳೇ ಚಪ್ಪಲಿ ಇರುವ ಯಾರೇ ಆದರೂ ಈ ‘ನಡಿಗೆ’ಯಲ್ಲಿ ಪಾಲ್ಗೊಳ್ಳಬಹುದು. ಇಂಥದ್ದೊಂದು ಅಭಿಯಾನ ಕರಾವಳಿಯಲ್ಲಿ ಹಮ್ಮಿಕೊಳ್ಳಲಾಗಿದೆ.

    ಸಾಮಾಜಿಕ ಕಾರ್ಯಕರ್ತ ಅವಿನಾಶ್ ಕಾಮತ್ ಎಂಬವರು ಹಮ್ಮಿಕೊಂಡಿರುವ ಈ ಅಭಿಯಾನ ನ. 30ರಿಂದ ಡಿ. 2ರ ವರೆಗೆ ಉಡುಪಿಯ ಎಂಜಿಎಂ ಕಾಲೇಜ್ ಕ್ಯಾಂಪಸ್​​ನಲ್ಲಿ ನಡೆಯಲಿದೆ. ಅಶಕ್ತರಿಗೆ ಉಚಿತವಾಗಿ ಪಾದರಕ್ಷೆ ಒದಗಿಸಲೆಂದೇ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.

    ಸಾರ್ವಜನಿಕರು ಸುಸ್ಥಿತಿಯಲ್ಲಿರುವ ತಮ್ಮ ಹಳೆಯ ಪಾದರಕ್ಷೆಗಳನ್ನು ಕೊಡುವ ಮೂಲಕ ಈ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು. ಈ ಅಭಿಯಾನಕ್ಕೆ ನಡಿಗೆ ಎಂದು ಹೆಸರಿಡಲಾಗಿದ್ದು, ವಿವಿಧ ಸಾಮಾಜಿಕ ಸಂಘಟನೆಗಳು ಕೂಡ ಇದಕ್ಕೆ ಕೈಜೋಡಿಸಿವೆ.

    ಫಾರ್ಮಲ್​ ಶೂಸ್, ಸ್ಪೋರ್ಟ್​ ಶೂಸ್, ಸ್ಲಿಪ್ಪರ್ಸ್​, ಸ್ಯಾಂಡಲ್ಸ್, ಫೋಮ್ ಶೂಸ್, ರಬ್ಬರ್ ಶೂಸ್ ಸೇರಿದಂತೆ ಯಾವುದೇ ತೆರನಾದ ಹಳೆಯ ಪಾದರಕ್ಷೆಗಳನ್ನು ನೀಡಬಹುದು. ಆದರೆ ಹೈ ಹೀಲ್ಡ್​, ಪಾಯಿಂಟೆಡ್ ಮತ್ತು 10 ವರ್ಷದ ಒಳಗಿನ ಮಕ್ಕಳ ಪಾದರಕ್ಷೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

    ಹೀಗೆ ಸಂಗ್ರಹವಾದ ಪಾದರಕ್ಷೆಗಳನ್ನು ಮುಂಬೈನ ಪ್ರತಿಷ್ಠಿತ ಗ್ರೀನ್​ ಸೋಲ್​ ಸಂಸ್ಥೆಗೆ ಕಚ್ಚಾ ಪದಾರ್ಥದ ರೂಪದಲ್ಲಿ ನೀಡಲಾಗುವುದು. ಅವರು ಇದರಿಂದ ಹೊಸ ಆರಾಮದಾಯಕ ಪಾದರಕ್ಷೆಗಳನ್ನು ತಯಾರಿಸಿ ದೇಶಾದ್ಯಂತ ಇರುವ ಅಶಕ್ತರಿಗೆ, ಪಾದರಕ್ಷೆರಹಿತರಿಗೆ ಉಚಿತವಾಗಿ ನೀಡಲಿದ್ದಾರೆ ಎಂದು ಆಯೋಜಕರು ಹೇಳಿಕೊಂಡಿದ್ದಾರೆ.

    34 ವರ್ಷದ ಡಾಕ್ಟರ್ ಕುಸಿದು ಬಿದ್ದು ಸಾವು; ಆಸ್ಪತ್ರೆಯಲ್ಲಿ ರೋಗಿಗಳನ್ನು ಪರೀಕ್ಷಿಸಿ ಮೆಟ್ಟಿಲೇರುತ್ತಿದ್ದಂತೆ ಹೃದಯಾಘಾತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts