More

    ಬಿಜೆಪಿ ಅಲೆ ಇಮ್ಮಡಿ ; ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ

    ವಿಜಯಪುರ: ಸುಮಾರು 40 ವರ್ಷ ರಾಜಕಾರದಲ್ಲಿ ಸಕ್ರಿಯವಾಗಿದ್ದರೂ ಕುಟುಂಬಸ್ಥರನ್ನು ರಾಜಕೀಯಕ್ಕೆ ತರದೇ ಪ್ರಾಮಾಣಿಕವಾಗಿ, ಬದ್ಧತೆಯಿಂದ ರಾಜಕಾರಣ ಮಾಡಿದವರು ರಮೇಶ ಜಿಗಜಿಣಗಿ. ಹೀಗಾಗಿ ಈ ಬಾರಿಯೂ ಅವರ ಗೆಲುವು ನಿಶ್ಚಿತ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.

    ಜಿಲ್ಲೆಯ ಅಭಿವೃದ್ಧಿಗೆ ರಮೇಶ ಜಿಗಜಿಣಗಿ ಸಾಕಷ್ಟು ಶ್ರಮಿಸಿದ್ದಾರೆ. ಅಪಾರ ಅನುದಾನ ತಂದು ಅಭಿವೃದ್ಧಿ ಕಾಮಗಾರಿ ಕೈಗೊಂಡರೂ ಎಲ್ಲಿಯೂ ತಮ್ಮ ಹೆಸರು ಹಾಕಿಸಿಕೊಂಡಿಲ್ಲ. ಹೀಗಾಗಿ ಅಭಿವೃದ್ಧಿ ಪರ ಕಾಳಜಿಯುಳ್ಳ ರಮೇಶ ಜಿಗಜಿಣಗಿ ಪರ ಜನರ ಒಲವಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

    ಜಿಗಜಿಣಗಿ ಅವರು ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಂಡಿದ್ದಾರೆ. ಆದರೂ ಕೆಲವರು ಲಂಬಾಣಿ ವಿರುದ್ಧ ಹೇಳಿಕೆ ನೀಡುತ್ತಾರೆಂದು ಆರೋಪಿಸುತ್ತಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದ ಪಟ್ಟಣಶೆಟ್ಟಿ, ಬಾಬುರಾಜೇಂದ್ರ ನಾಯಕ ಅಂಥವರು ಯಾವುದೋ ಪಕ್ಷದ ಮೂಲದಿಂದ ಬಂದು ಟಿಕೆಟ್‌ಗಾಗಿ ಬೇಡಿಕೆ ಇಟ್ಟರು. ಅದಕ್ಕಾಗಿ ನಾನಾ ಕಸರತ್ತು ನಡೆಸಿದರು. ಅವರಿಗೆ ಪಕ್ಷದ ತತ್ವ, ಸಿದ್ಧಾಂತದ ಬಗ್ಗೆ ಯಾವುದೇ ನೈಜ ಕಳಕಳಿ ಇರಲಿಲ್ಲ. ಹೀಗಾಗಿ ಟಿಕೆಟ್ ಸಿಗದ ಕಾರಣಕ್ಕೆ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಬಹುಶಃ ಅವರ ಮೂಲ ಕಾಂಗ್ರೆಸ್ ಇರಬಹುದೆಂದು ಲೇವಡಿ ಮಾಡಿದರು.

    ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳನ್ನು ಗೊಡ್ಡೆಮ್ಮಿ ಎಂದು ಟೀಕಿಸಿರುವ ಸಚಿವ ಶಿವಾನಂದ ಪಾಟೀಲರ ವಿರುದ್ಧ ಹರಿಹಾಯ್ದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಯಾವ ಎಮ್ಮೆ ಹಿಂಡುತ್ತದೆ ಮತ್ತು ಯಾವ ಎಮ್ಮೆ ಗೊಡ್ಡು ಎಂಬುದು ಜನತೆಗೆ ಗೊತ್ತಿದೆ. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮತದಾನದ ಮೂಲಕ ಅದಕ್ಕೆ ಉತ್ತರ ಕೊಡಲಿದ್ದಾರೆಂದು ಟಾಂಗ್ ನೀಡಿದರು. ಅಲ್ಲದೇ, ವಿಜಯಾನಂದ ಕಾಶಪ್ಪನವರ ತಮ್ಮ ಭಾಷಣದಲ್ಲಿ ಶಾಸಕ ಯತ್ನಾಳರನ್ನು ಗೊಡ್ಡೆಮ್ಮಿ ಎಂದು ಕರೆದಿದ್ದು, ಆ ಬಗ್ಗೆ ಯತ್ನಾಳ ಅವರೇ ಖಡಕ್ ಆಗಿ ಉತ್ತರ ನೀಡಲಿದ್ದಾರೆಂದು ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.

    ಮುಖಂಡರಾದ ಭೀಮಾಶಂಕರ ಹದನೂರ, ಪಾಲಿಕೆ ಸದಸ್ಯ ರಾಹುಲ್ ಜಾಧವ, ಕೃಷ್ಣಾ ಗುನ್ಹಾಳಕರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts