More

    ವಿಶ್ವಕಪ್ ಕ್ರಿಕೆಟ್​: ಭಾರತ-ಪಾಕಿಸ್ತಾನ ಸೆಮಿಫೈನಲ್ ಫಿಕ್ಸಾ?

    ನವದೆಹಲಿ: ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಿನ್ನೆ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಅಮೋಘ ಮತ್ತು ಅಜೇಯ ದ್ವಿಶತಕದೊಂದಿಗೆ ಗೆಲುವು ಕಂಡ ಆಸ್ಟ್ರೇಲಿಯಾ ತಂಡ, ಸೆಮಿಫೈನಲ್​ಗೆ ಹೋಗುವುದನ್ನು ಖಚಿತಪಡಿಸಿಕೊಂಡಿದೆ. ಈ ಮೂಲಕ ವಿಶ್ವಕಪ್​ನ ಸೆಮಿಫೈನಲ್ ಸೆಣಸಾಟ ಇನ್ನಷ್ಟು ಕುತೂಹಲ ಕೆರಳಿಸಿದೆ.

    ಮತ್ತೊಂದೆಡೆ ಅಂಕಪಟ್ಟಿಯಲ್ಲಿ ಭಾರತ ಈಗಾಗಲೇ ಅಗ್ರಸ್ಥಾನ ಪಡೆದುಕೊಂಡಿದ್ದು, ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದವರಿಗೆ ಮಾತ್ರ ಸೆಮಿಫೈನಲ್ ಸ್ಥಾನ ಬಿಟ್ಟುಕೊಟ್ಟಿದೆ. ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳು ನಾಕ್-ಔಟ್ ಹಂತದಲ್ಲಿ ಉಳಿದಿರುವ ಕೊನೆಯ ಸ್ಥಾನಕ್ಕಾಗಿ ಇನ್ನೂ ಪೈಪೋಟಿ ನಡೆಸುತ್ತಿವೆ.

    ನಾಕೌಟ್ ಹಂತದಲ್ಲಿ ಉಳಿದಿರುವ ಕೊನೆಯ ಸ್ಥಾನಕ್ಕಾಗಿ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳ ಮಧ್ಯೆ ಪೈಪೋಟಿ ಇದೆ. ಈ ಮೂವರ ಪೈಕಿ ಯಾವುದೇ ತಂಡ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಸೋತರೆ ರೇಸ್‌ನಲ್ಲಿ ಹಿಂದೆ ಬೀಳುತ್ತದೆ.

    ಇದನ್ನೂ ಓದಿ: ಫೇಸ್​ಬುಕ್​ನಲ್ಲಿ ‘ಬ್ಯಾಕ್ ಪೇನ್​’; ಬಳಕೆದಾರರಿಂದ ವಿಶೇಷ ಬೇಡಿಕೆ..

    ಹೀಗಾಗಿ ಭಾರತದ ಎದುರಾಳಿಯಾಗಿ ಸೆಮಿಫೈನಲ್​ನಲ್ಲಿ ಯಾವ ತಂಡ ಎದುರಾಗಲಿದೆ ಎಂಬ ಕುರಿತು ಈಗಾಗಲೇ ಕೌತುಕ ಉಂಟಾಗಿದ್ದು, ಕ್ರೀಡಾಭಿಮಾನಿಗಳಲ್ಲಿ ನಾನಾ ಲೆಕ್ಕಾಚಾರಗಳು ನಡೆಯುತ್ತಿವೆ. ಅದರಲ್ಲೂ ಸೆಮಿಫೈನಲ್​ನಲ್ಲಿ ಭಾರತದ ಎದುರಾಳಿ ಯಾರಾಗಲಿದ್ದಾರೆ ಎಂಬ ಸಾಧ್ಯತೆಯ ಬಗ್ಗೆ ಮಾತುಕತೆಗಳು ಕೇಳಿಬರುತ್ತಿವೆ.

    ಸಾಧ್ಯತೆ ಒಂದು..

    ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ನಡುವೆ ಗುರುವಾರ ನಡೆಯಲಿರುವ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದರೆ ಸೆಮಿಫೈನಲ್‌ನಲ್ಲಿ ಭಾರತವನ್ನು ಎದುರಿಸಲು ಅವರು ಮುಂಚೂಣಿಯಲ್ಲಿರುತ್ತಾರೆ. ಕಿವೀಸ್ (+0.398) ಮೂರರಲ್ಲಿ ಅತ್ಯುತ್ತಮ ನೆಟ್​ ರನ್​ ರೇಟ್​ ಹೊಂದಿದ್ದು, ನಂತರದ ಸ್ಥಾನಗಳಲ್ಲಿ ಪಾಕಿಸ್ತಾನ (+.036) ಮತ್ತು ಅಫ್ಘಾನಿಸ್ತಾನ (-0.338) ಇವೆ.

    ಅಫ್ಘಾನಿಸ್ತಾನವು ಈಗಾಗಲೇ ಸೆಮಿಫೈನಲ್ ಪ್ರವೇಶ ಖಚಿತವಾಗಿರುವ ದಕ್ಷಿಣ ಆಫ್ರಿಕ ತಂಡದ ಜತೆ ಶುಕ್ರವಾರ ಆಡಲಿದೆ. ಆದರೆ ಅವರ ಋಣಾತ್ಮಕ ನೆಟ್​ ರನ್​ ರೇಟ್​ ಸರಿದೂಗಿಸಲು ದೊಡ್ಡ ಗೆಲುವೇ ಬೇಕಾಗಿದೆ. ಹೀಗಾಗಿ ಅದು ಕಷ್ಟವಾಗಿರುವುದರಿಂದ ನ್ಯೂಜಿಲೆಂಡ್ ಸೆಮಿಫೈನಲ್​ ಪ್ರವೇಶ ಸಾಧ್ಯತೆಯೇ ಅಧಿಕವಾಗಿತ್ತದೆ.

    ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ತಮ್ಮ ರೌಂಡ್ ರಾಬಿನ್ ಅಭಿಯಾನ ಮುಕ್ತಾಯಗೊಳಿಸಿದ ನಂತರ ಪಾಕಿಸ್ತಾನ ಶನಿವಾರ ಇಂಗ್ಲೆಂಡ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನಾಡುತ್ತದೆ. ಆದರೆ ನ್ಯೂಜಿಲೆಂಡ್​ನ ದೊಡ್ಡ ಗೆಲುವು ನೆಟ್​ ರನ್​ ರೇಟ್​ನಲ್ಲಿ ಹಿಂದಿರುವ ಲಂಕಾಗೆ ಸೆಮಿಫೈನಲ್ ಬಾಗಿಲನ್ನು ಮುಚ್ಚಲಿದೆ.

    ಸಾಧ್ಯತೆ ಎರಡು..

    ನ್ಯೂಜಿಲೆಂಡ್ ಶ್ರೀಲಂಕಾ ವಿರುದ್ಧ ಸೋತರೆ ಮತ್ತು ಅಫ್ಘಾನಿಸ್ತಾನ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದರೆ ಹಾಗೂ ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ ಗೆದ್ದರೆ ಅದು ನ್ಯೂಜಿಲೆಂಡ್​ ತಂಡವನ್ನು ಹಿಂದಿಕ್ಕಬಹುದು. ನಂತರ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಲಾ 10 ಮತ್ತು ನ್ಯೂಜಿಲೆಂಡ್ 8 ಅಂಕಗಳನ್ನು ಹೊಂದಿರುತ್ತದೆ. ಅಲ್ಲದೆ ಪಾಕಿಸ್ತಾನದ ನೆಟ್ ರನ್ ರೇಟ್ ಅಫ್ಘಾನಿಸ್ತಾನಕ್ಕಿಂತ ಚೆನ್ನಾಗಿರುವುದರಿಂದ ಸೆಮಿಫೈನಲ್​ನಲ್ಲಿ ಭಾರತದ ಎದುರಾಳಿಯಾಗಿ ಪಾಕ್ ಬರುವ ಸಾಧ್ಯತೆ ಇದ್ದು, ಸೆಮಿಫೈನಲ್​ ರೋಚಕ ಎನಿಸಲಿದೆ.

    ಸಾಧ್ಯತೆ ಮೂರು..

    ಅಂತಿಮ ಪಂದ್ಯಗಳಲ್ಲಿ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳು ಸೋತರೆ ಮೂವರದ್ದೂ ಅಂಕ 8 ಆಗಿರಲಿದೆ. ಆಗ ನೆಟ್​ ರನ್​ ರೇಟ್ ಮತ್ತೊಮ್ಮೆ ಮಹತ್ತರ ಪಾತ್ರವಹಿಸಲಿದ್ದು, ಈಗಾಗಲೇ ಅತ್ಯುತ್ತಮ ಎನ್​ಆರ್​ಆರ್​ ಹೊಂದಿರುವ ನ್ಯೂಜಿಲೆಂಡ್​​ಗೇ ಇದು ಅನುಕೂಲಕಾರಿ ಆಗಲಿದೆ.

    ಸಾಧ್ಯತೆ ನಾಲ್ಕು.. 

    ಶ್ರೀಲಂಕಾ-ನ್ಯೂಜಿಲೆಂಡ್ ನಡುವಿನ ಕೊನೆಯ ಪಂದ್ಯ ಮಳೆಯಿಂದ ಬಾಧಿತವಾದರೆ, ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನದ ಗೆಲುವು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್​ಗಿಂತ ಮುಂದಿರುವಂತೆ ಮಾಡಲಿದೆ. ಇನ್ನೊಂದೆಡೆ ಅಫ್ಘಾನಿಸ್ತಾನದ ಗೆಲುವು ಅವರನ್ನು 10 ಅಂಕಗಳಿಗೆ ಕೊಂಡೊಯ್ಯುತ್ತದೆ. ಇಲ್ಲಿ ಇನ್ನೊಮ್ಮೆ ನೆಟ್​ ರನ್​ ರೇಟ್ ಮುನ್ನೆಲೆಗೆ ಬರಲಿದ್ದು, ಆಗ ಅದು ಪಾಕಿಸ್ತಾನಕ್ಕೆ ಅನುಕೂಲಕಾರಿ ಆಗಲಿದೆ.

    ಒಂದು ವೇಳೆ ಕೊನೆಯ ಎಲ್ಲ ಪಂದ್ಯಗಳೂ ಮಳೆಯಿಂದ ಬಾಧಿತವಾದರೆ ಉತ್ತಮ ರನ್​ ರೇಟ್ ಇರುವ ನ್ಯೂಜಿಲೆಂಡ್​ಗೇ ಪ್ರಯೋಜನ ಆಗಲಿದೆ. ಆಗ ಭಾರತ ಮತ್ತು ಪಾಕಿಸ್ತಾನ ನಡುವಿನ ಸೆಮಿಫೈನಲ್ ಹಣಾಹಣಿ ಸಾಧ್ಯತೆ ನ್ಯೂಜಿಲೆಂಡ್ ಶ್ರೀಲಂಕಾ ನಡುವಿನ ಪಂದ್ಯವನ್ನು ಅವಲಂಬಿಸಿರುತ್ತದೆ.

    ಚಿರತೆಯನ್ನೇ ಎದುರಿಸಿ ಏಳು ವರ್ಷದ ಮಗಳನ್ನು ರಕ್ಷಿಸಿದ ತಂದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts