More

    ರಾಷ್ಟ್ರೀಯ ಹೆದ್ದಾರಿಯಲ್ಲೇ ಸ್ಟೂಲ್ ಇಟ್ಟು ಕುಳಿತು ಬಸ್​ಗೆ ತಡೆ; ಸಿನಿಮೀಯ ರೀತಿಯಲ್ಲಿ ಸ್ಥಳೀಯ ಪ್ರಯಾಣಿಕರಿಗೆ ನೆರವಾದ ಉದ್ಯಮಿ

    ಮಂಗಳೂರು: ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಶ್ನೆ ಮಾಡಬೇಕು ಎಂದು ಕೆಲವು ಹಿರಿಯರು ಹೇಳುತ್ತಿರುತ್ತಾರೆ. ಅಲ್ಲದೆ, ಸಾರ್ವಜನಿಕರು ಪ್ರಶ್ನೆ ಮಾಡಿದರೆ ಏನು ಬೇಕಿದ್ದರೂ ಬದಲಾವಣೆ ಆಗುತ್ತದೆ, ಯಾವುದು ಬೇಕಿದ್ದರೂ ಸುಧಾರಣೆ ಆಗುತ್ತದೆ ಎಂಬುದಕ್ಕೆ ಈ ಸಮಾಜದಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.

    ಅಂಥದ್ದೇ ಒಂದು ಪ್ರಶ್ನೆಯಿಂದ ಸಾರ್ವಜನಿಕರಿಗೆ ನೆರವಾದ ಪ್ರಕರಣವೊಂದು ನಡೆದಿದೆ. ಸಿನಿಮೀಯ ರೀತಿಯಲ್ಲಿ ಈ ಸನ್ನಿವೇಶ ಕಂಡುಬಂದಿರುವುದರಿಂದ ಈ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿನ ಗಮನ ಸೆಳೆದಿದೆ. ಅಷ್ಟಕ್ಕೂ ಸರ್ಕಾರಿ ಬಸ್​ ಸ್ಥಳೀಯ ಪ್ರಯಾಣಿಕರನ್ನು ನಿರ್ಲಕ್ಷಿಸಿ ಸಂಚರಿಸುತ್ತಿದ್ದುದರ ಹಿನ್ನೆಲೆಯಲ್ಲಿ ಈ ಪ್ರಕರಣ ನಡೆದಿದೆ.

    ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಗುರಿಯಾಗಿಸಿ ಪೋಸ್ಟ್ ಮಾಡಿದ ನಟ ಪ್ರಕಾಶ್ ರೈ

    ಮಂಗಳೂರಿನಿಂದ ಕೇರಳಕ್ಕೆ ಹೋಗುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಸರ್ವಿಸ್ ರೋಡ್​​ಗೆ ಬರದೆ ಆಗಾಗ ರಾಷ್ಟ್ರೀಯ ಹೆದ್ದಾರಿ ಮೂಲಕ ಹೋಗುತ್ತಿದ್ದುದರಿಂದ ಸ್ಥಳೀಯ ಪ್ರಯಾಣಿಕರಿಗೆ ತೊಂದರೆ ಆಗುತ್ತಿತ್ತು. ಇದನ್ನು ಗಮನಿಸಿದ್ದ ಸ್ಥಳೀಯ ಉದ್ಯಮಿ ಹುಸೈನಾರ್ ಎನ್ನುವವರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ತೋರಿದ್ದಾರೆ.

    ಇದನ್ನೂ ಓದಿ: ಪೊಳ್ಳು ಗ್ಯಾರಂಟಿಗಳಿಂದಾಗಿ ದೀಪಾವಳಿ ಹೊತ್ತಲ್ಲೇ ರಾಜ್ಯ ದಿವಾಳಿ: ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ ಕೊಟ್ಟಿದ್ದೇಕೆ ಮಾಜಿ ಸಿಎಂ?

    ಬಸ್​ ಬರುವ ಸಮಯಕ್ಕೆ ಸರಿಯಾಗಿ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಸ್ಟೂಲ್ ಇಟ್ಟು ಅದರ ಮೇಲೆ ಕುಳಿತು ಬಸ್​ಗೆ ತಡೆವೊಡ್ಡಿದ ಅವರು, ಬಳಿಕ ಆ ಬಸ್​ ಹೆದ್ದಾರಿಯಲ್ಲಿ ಸುಮಾರು ಅರ್ಧ ಕಿಲೋಮೀಟರ್ ದೂರ ರಿವರ್ಸ್ ಹೋಗುವಂತೆ ಮಾಡಿ ನಂತರ ಸರ್ವಿಸ್​ ರೋಡ್​ನಲ್ಲಿ ತೆರಳುವಂತೆ ಮಾಡಿದ್ದಾರೆ. ಈ ಮೂಲಕ ಅವರು ಸ್ಥಳೀಯ ಪ್ರಯಾಣಿಕರಿಗೆ ನೆರವಾಗಿದ್ದು, ಅವರ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಪ್ರಧಾನಿ ಮೋದಿ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ ಮುಸ್ಲಿಂ ಮಹಿಳೆ; ವಿರೋಧ ಎದುರಾದ್ರೂ ಛಲ ಬಿಡಲಿಲ್ಲ..

    ನೋಟ್ ಬ್ಯಾನ್​ನಿಂದ ಆದ ಒಂದೇ ಒಂದು ಪ್ರಯೋಜನವಿದ್ದರೆ ಬಿಜೆಪಿ ಉತ್ತರಿಸಲಿ: ಕಾಂಗ್ರೆಸ್ ಸವಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts