ಕಮಲನಗರ: ಪಟ್ಟಣದಲ್ಲಿ ಭಾನುವಾರ ನಮ್ಮ ನಡೆ ಮತಗಟ್ಟೆ ಕಡೆ ಅಭಿಯಾನ ಅಂಗವಾಗಿ ಭಾನುವಾರ ಸೈಕಲ್ ಜಾಥಾ ನಡೆಯಿತು.

ಅಲ್ಲಮಪ್ರಭು ವೃತ್ತದ ಬಳಿ ತಾಪಂ ಇಒ ಶಿವಕುಮಾರ ಘಾಟೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿ ಮತವೂ ಅಮೂಲ್ಯವಾಗಿದೆ. ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ದೇಶದ ಅಭಿವೃದ್ಧಿಗೆ ನೀವು ನಿಮ್ಮ ಮತ ಚಲಾಯಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಅಲ್ಲಮಪ್ರಭು ವೃತ್ತದಿಂದ ಹೊರಟ ಸೈಕಲ್ ಜಾಥಾ ಸೋನಾಳ ಮುಖ್ಯ ರಸ್ತೆ, ಪೊಲೀಸ್ ಠಾಣೆ, ಅತಿಥಿ ಗೃಹ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆವರೆಗೆ ಸಾಗಿ ಮತದಾನದ ಮಹತ್ವ ತಿಳಿಹೇಳಿತು. ಪಿಡಿಒ ರಾಜಕುಮಾರ ತಂಬಾಕೆ, ಮುಖ್ಯ ಗುರುಗಳು, ಶಿಕ್ಷಕರು, ಬಿಎಲ್‌ಒ, ತಾಪಂ ಮತ್ತು ಗ್ರಾಪಂ ಸಿಬ್ಬಂದಿ ಪಾಲ್ಗೊಂಡಿದ್ದರು. ನಂತರ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಹತ್ತಿರ ಚುನಾವಣಾ ಧ್ವಜಾರೋಹಣ ನೆರವೇರಿಸಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.