More

    ಪ್ರಧಾನಿ ಮೋದಿ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ ಮುಸ್ಲಿಂ ಮಹಿಳೆ; ವಿರೋಧ ಎದುರಾದ್ರೂ ಛಲ ಬಿಡಲಿಲ್ಲ..

    ನವದೆಹಲಿ: ಸ್ನಾತಕೋತ್ತರ ಪದವಿ ಪಡೆದ ಹಲವರು ಯಾವುದಾದರೂ ಒಂದು ವಿಶೇಷ ವಿಷಯದ ಮೇಲೆ ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆಯುವುದು ಸರ್ವೇಸಾಮಾನ್ಯ. ಕೆಲವೊಮ್ಮೆ ಅವರು ಆಯ್ಕೆ ಮಾಡಿಕೊಂಡ ವಿಷಯವೇ ಅವರ ಅಧ್ಯಯನಕ್ಕೆ ಹಿರಿಮೆ ತಂದುಕೊಡುತ್ತದೆ.

    ಅಂಥದ್ದೇ ಒಂದು ಹಿರಿಮೆಗೆ ಇಲ್ಲೊಬ್ಬರು ಮುಸ್ಲಿಂ ಮಹಿಳೆ ಪಾತ್ರರಾಗಿದ್ದಾರೆ. ನಜ್ಮಾ ಪರ್ವೀನ್ ಎಂಬ ಈ ಮಹಿಳೆ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ್ದು, ಪಿಎಚ್​ಡಿ ಪದವಿ ಪಡೆದಿದ್ದಾರೆ.

    ಉತ್ತರಪ್ರದೇಶದ ವಾರಾಣಸಿಯ ಲಲ್ಲಾಪುರ ಎಂಬಲ್ಲಿನ ನಿವಾಸಿ ಆಗಿರುವ ನಜ್ಮಾ ಪರ್ವೀನ್, ‘ನರೇಂದ್ರ ಮೋದಿಯವರ ರಾಜಕೀಯ ನಾಯಕತ್ವ: ಒಂದು ವಿಶ್ಲೇಷಣಾತ್ಮಕ ಅಧ್ಯಯನ’ ಎಂಬ ವಿಷಯದ ಮೇಲೆ ಈಕೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.

    ಇದನ್ನೂ ಓದಿ: 10 ಸಾವಿರ ಮಂದಿಗೆ ಉಚಿತವಾಗಿ ಸಿಗಲಿದೆ ಟೆಲಿಗ್ರಾಂ ಪ್ರೀಮಿಯಂ ಸಬ್​ಸ್ಕ್ರಿಪ್ಷನ್​: ನೀವು ಮಾಡಬೇಕಾದ್ದೇನು?

    ದೇಶದಲ್ಲಿ ಪ್ರಧಾನಿ ಮೋದಿಯವರ ಮೇಲೆ ಸಂಶೋಧನಾ ಪ್ರಬಂಧ ಮಂಡಿಸಿದ ಪ್ರಪ್ರಥಮ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದು, ಮೋದಿಯವರನ್ನು ಈಕೆ ರಾಜಕಾರಣದ ಮೆಗಾಸ್ಟಾರ್ ಎಂದು ತಮ್ಮ ಸಂಶೋಧನಾ ಪ್ರಬಂಧದಲ್ಲಿ ಬಣ್ಣಿಸಿದ್ದಾರೆ.

    ಈ ಅಧ್ಯಯನವನ್ನು ಇವರು 2014ರಲ್ಲಿ ಆರಂಭಿಸಿದ್ದು, ಎಂಟು ವರ್ಷಗಳಲ್ಲಿ ಪೂರ್ಣಗೊಳಿಸಿದ್ದಾರೆ. ಬನಾರಸ್​ ಹಿಂದೂ ವಿಶ್ವವಿದ್ಯಾಲಯದ ಪ್ರೊಫೆಸರ್ ಸಂಜಯ್ ಶ್ರೀವತ್ಸ ಇವರಿಗೆ ಮಾರ್ಗದರ್ಶನ ಮಾಡಿದ್ದು, ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಇವರ ಪ್ರಬಂಧಕ್ಕೆ ಬಾಹ್ಯ ಪರೀಕ್ಷಕರಾಗಿ ಕಾರ್ಯನಿರ್ವಹಿಸಿದೆ.

    ಆರಂಭದಲ್ಲಿ ಈ ಅಧ್ಯಯನಕ್ಕೆ ವಿರೋಧ ವ್ಯಕ್ತವಾಯಿತಾದರೂ ತಾವು ತಮ್ಮ ನಿರ್ಧಾರದಿಂದ ವಿಚಲಿತರಾಗಿಲ್ಲ ಎಂದು ಈಕೆ ಹೇಳಿಕೊಂಡಿದ್ದಾರೆ. ಈಕೆ ಭಾರತೀಯ ಅವಂ ಪಾರ್ಟಿ ಎಂಬ ಪಕ್ಷವನ್ನೂ ಸ್ಥಾಪಿಸಿದ್ದು, ಅದರ ಅಧ್ಯಕ್ಷರಾಗಿದ್ದಾರೆ.

    ಫೇಸ್​ಬುಕ್​ನಲ್ಲಿ ‘ಬ್ಯಾಕ್ ಪೇನ್​’; ಬಳಕೆದಾರರಿಂದ ವಿಶೇಷ ಬೇಡಿಕೆ..

    ಚಿರತೆಯನ್ನೇ ಎದುರಿಸಿ ಏಳು ವರ್ಷದ ಮಗಳನ್ನು ರಕ್ಷಿಸಿದ ತಂದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts