More

    ಪ್ರಧಾನಿ ಮೋದಿಯನ್ನು ಗುರಿಯಾಗಿಸಿ ಪೋಸ್ಟ್ ಮಾಡಿದ ನಟ ಪ್ರಕಾಶ್ ರೈ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ, ಹಿಂದುತ್ವ, ಹಿಂದೂಗಳನ್ನು ಗುರಿಯಾಗಿಸಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ವಿವಾದಕ್ಕೆ ಹಾಗೂ ಟೀಕೆಗೆ ಒಳಗಾಗುತ್ತಿರುವ ನಟ ಪ್ರಕಾಶ್ ರೈ ಇದೀಗ ಪ್ರಧಾನಿ ಮೋದಿಯನ್ನು ಗುರಿಯಾಗಿಸಿ ಪೋಸ್ಟ್ ಮಾಡಿದ್ದಾರೆ.

    ಒಂದು ಹಳೆಯ ಪತ್ರಿಕೆಯ ಸುದ್ದಿ ತುಣುಕನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಾದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಪ್ರಕಾಶ್ ರೈ, ಡಿಮಾನಿಟೈಸೇಷನ್ ಬಗ್ಗೆ ಟೀಕಿಸಿ ಪೋಸ್ಟ್ ಮಾಡಿದ್ದಾರೆ. ಈ ನಾಟಕೀಯ ದಿನದ ಕುರಿತು ನಿಮಗೆ ನೆನಪಿದ್ದರೆ ಲೈಕ್ ಮಾಡಿ, ರಿಪೋಸ್ಟ್ ಮಾಡಿ ಎಂದೂ ಕೇಳಿಕೊಂಡಿದ್ದಾರೆ.

    ಇದನ್ನೂ ಓದಿ: ನಿಮ್ಮಲ್ಲಿ ಹಳೇ ಚಪ್ಲಿ ಇದ್ರೆ ಸಾಕು, ನೀವು ಈ ‘ನಡಿಗೆ’ಯಲ್ಲಿ ಪಾಲ್ಗೊಳ್ಳಬಹುದು: ಏನಿದು ಅಭಿಯಾನ?

    2016ರ ನ. 8ರಂದು ಡಿಮಾನಿಟೈಸೇಷನ್ ಘೋಷಣೆ ಮಾಡಿದ ಬಳಿಕ ಆದ ಅನನುಕೂಲ-ಅವಾಂತರಗಳ ಬಳಿಕ ಪ್ರಧಾನಿ ಮೋದಿ ಒಮ್ಮೆ ಗದ್ಗದಿತರಾಗಿ ಮಾತನಾಡಿದ್ದು ದೊಡ್ಡ ಸುದ್ದಿಯಾಗಿತ್ತು. ನನಗೆ 50 ದಿನಗಳ ಸಮಯ ಕೊಡಿ, ನನ್ನದು ತಪ್ಪಾಗಿದ್ದರೆ ನನ್ನನ್ನು ಜೀವಂತ ಸುಟ್ಟುಬಿಡಿ ಎಂದು ಮೋದಿ ಹೇಳಿದ್ದು ಪತ್ರಿಕೆಯೊಂದರಲ್ಲಿ ಮುದ್ರಿತಗೊಂಡಿತ್ತು.

    ಆ ಸುದ್ದಿಯ ತುಣುಕನ್ನು ಹಂಚಿಕೊಂಡಿರುವ ಪ್ರಕಾಶ್ ರೈ, ಈ ನಾಟಕೀಯ ದಿನದ ನೆನಪಿದ್ದರೆ ಲೈಕ್ ಮಾಡಿ ರಿಪೋಸ್ಟ್ ಮಾಡಿ ಎಂದು ಹೇಳಿಕೊಂಡಿದ್ದಾರೆ. ಬೆಳಗ್ಗೆ ಕರ್ನಾಟಕ ಕಾಂಗ್ರೆಸ್​ ಕೂಡ ಡಿಮಾನಿಟೈಸೇಷನ್ ವಿರುದ್ಧ ಎಕ್ಸ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ನೋಟ್​ ಬ್ಯಾನ್​ನಿಂದ ಒಂದೇ ಒಂದು ಪ್ರಯೋಜನ ಆಗಿದ್ದರೆ ಬಿಜೆಪಿ ಉತ್ತರಿಸಲಿ ಎಂದು ಸವಾಲೆಸೆದಿತ್ತು.

    ಫೇಸ್​ಬುಕ್​ನಲ್ಲಿ ‘ಬ್ಯಾಕ್ ಪೇನ್​’; ಬಳಕೆದಾರರಿಂದ ವಿಶೇಷ ಬೇಡಿಕೆ..

    ಪ್ರಧಾನಿ ಮೋದಿ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ ಮುಸ್ಲಿಂ ಮಹಿಳೆ; ವಿರೋಧ ಎದುರಾದ್ರೂ ಛಲ ಬಿಡಲಿಲ್ಲ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts