

Complaint: ನನ್ನ ಸೋಪ್ ಅನ್ನು ನನ್ನ ಗಂಡ ಬಳಸಿದ್ದಾರೆ ಎಂದು ಆಕೆ ಗಂಡನ ಹತ್ತಿರ ಜಗಳವಾಡಿ ಕೊನೆಗೆ ಆತನ ವಿರುದ್ಧ ಎಫ್ಐಆರ್ ದಾಖಲಿಸಿದ ಅಪರೂಪದ ಪ್ರಕರಣ ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ಅಲಿಗಢಸದಲ್ಲಿ 39 ವರ್ಷದ ಪ್ರವೀಣ್ ಕುಮಾರ್ ಎಂಬಾತ ತನ್ನ ಪತ್ನಿಯ ಸೋಪು ಬಳಸಿದಾಗ ತನ್ನ ಹೆಂಡತಿ ಅತನ ಹತ್ತಿರ ಜಗಳವಾಡಿದ್ದಾಳೆ. ಈ ಸಣ್ಣ ಜಗಳ ದೊಡ್ಡ ಜಗಳವಾಗಿ ಮಾರ್ಪಟ್ಟಿದೆ. ಇದರಿಂದ ಕೂಪಿತರಾದ ಪತ್ನಿ ಪೊಲೀಸ್ ಠಾಣೆಗೆ ಕರೆ ಮಾಡಿ ಜಗಳದ ಬಗ್ಗೆ ಮಾಹಿತಿ ನೀಡಿದ್ದಾಳೆ. ಈ ಸಣ್ಣ ಜಗಳ ಎಂದು ಠಾಣೆ ಕರೆಯಿಸಿದ ಪೊಲೀಸರಿಗೆ ಶಾಕ್ ಆಗಿದ್ದಾರೆ.
ಹೌದು, ಅಲ್ಲಿಗೆ ಬಂದ ಆಕೆ ಆತ ನನ್ನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಹೀಗಾಗಿ ದೂರು ದಾಖಲಿಸಿಕೊಳ್ಳಿ ಎಂದಿದ್ದಾಳೆ. ಪೊಲೀಸರು ಬೇರೆ ದಾರಿ ಕಾಣದೆ ಕುಮಾರ್ ವಿರುದ್ಧ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 151 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.(ಇದು ಅಪರಾಧವನ್ನು ತಡೆಗಟ್ಟಲು ವಾರಂಟ್ ಇಲ್ಲದೆ ಬಂಧಿಸಲು ಅನುವು ಮಾಡಿಕೊಡುತ್ತದೆ)
ದಂಪತಿಗೆ 13 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ದಂಪತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ತನ್ನ ಪತಿಗೆ ಕಿರುಕುಳ ಮತ್ತು ದೈಹಿಕ ಕಿರುಕುಳದ ಇತಿಹಾಸವಿದೆ ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ಪೊಲೀಸರು ಮಾಜಿಸ್ಟ್ರೇಟ್ ಮುಂದೆ ತಿಳಿಸಿದ್ದಾರೆ.
ನನ್ನ ಜತೆ ಜಗಳವಾಡಿದ ನಂತರ ಅವಳು ಆಗಾಗ್ಗೆ ಪೊಲೀಸರಿಗೆ ಕರೆ ಮಾಡುತ್ತಾಳೆ. ದೇವರಿಗೆ ಧನ್ಯವಾದಗಳು, ನನಗೆ ಜಾಮೀನು ಸಿಕ್ಕಿತು ಎಂದು ಕುಮಾರ್ ತಿಳಿಸಿದ್ದಾರೆ(ಏಜೆನ್ಸೀಸ್)