ವಿರಾಟ್​ಗೆ Fathers Day ಶುಭಾಶಯ ಕೋರಿದ ಮಗಳು!: ಅಪ್ಪನ ಬಗ್ಗೆ ವಮಿಕಾ ಬರೆದಿದ್ದೇನು..?

dk - 2025-06-15T171708.133
Published on

Fathers Day : ಬಾಲಿವುಡ್​ ಸೆಲೆಬ್ರೆಟಿಗಳು ಫದರ್ಸ್​​ ಡೇ ದಿನದಂದು ತಮ್ಮ ತಂದೆಗೆ ವಿಶೇಷ ಶುಭಾಶಯಗಳನ್ನು ಕೋರುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದೇ ರೀತಿ ಬಾಲಿವುಡ್​ ನಟಿ ಅನುಷ್ಕಾ ಶರ್ಮ ಕೂಡ ತನ್ನ ತಂದೆಗೆ ಶುಭಾಶಯ ಕೋರುವುದರ ಜತೆ ಟೀಮ್​ ಇಂಡಿಯಾ ಬ್ಯಾಟರ್​ ವಿರಾಟ್ ಕೊಹ್ಲಿಗೆ ತನ್ನ ಮುದ್ದಾದ ಮಗಳು ವಮಿಕಾ ವಿಶೇಷವಾಗಿ ಬರೆದ ಪತ್ರವೊಂದನ್ನು ತನ್ನ ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​​ ಮಾಡಿದ್ದಾರೆ.

ಹೌದು, ಅಪ್ಪಂದಿರ ದಿನವಾದ ಭಾನುವಾರ ಅನುಷ್ಕಾ ತನ್ನ ತಂದೆಯ ಹೆಡ್​​ಪೋನ್​​ ಹಾಕಿಕೊಂಡು ಹಾಡು ಕೇಳುತ್ತಾ ಸಂತೋಷ ಪಡುತ್ತಿರುವ ಫೋಟೋವೊಂದನ್ನು ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ಇದರ ಜತೆ ವಮಿಕಾ ವಿರಾಟ್​ಗೆ ಕೋರಿದ ಶುಭಾಶಯ ಕೋರಿದ ಪತ್ರವೊಂದನ್ನು ಪೋಸ್ಟ್​ ಮಾಡಿದ್ದಾರೆ.

ವಿರಾಟ್​ಗೆ ವಮಿಕಾ ಬರೆದ ಪತ್ರದಲ್ಲೇನಿದೆ..?

''ಅವನು ನನ್ನ ಸಹೋದರನಂತೆ ಕಾಣುತ್ತಾನೆ. ಅವನು ತಮಾಷೆಯಾಗಿ ಕಾಣುತ್ತಾನೆ. ಅವನು ನನಗೆ ಕಚಗುಳಿ ಇಡುತ್ತಾನೆ. ನಾನು ಅವನೊಂದಿಗೆ ಮೇಕಪ್​​ ಮಾಡಿಕೊಳ್ಳುತ್ತೇನೆ. ನಾನು ಅವನ್ನು ತುಂಬಾ ಪ್ರೀತಿಸುತ್ತಾನೆ. ಅವನು ನನ್ನನ್ನು ತುಂಬಾ ಪ್ರೀತಿಸುತ್ತಾನೆ. ತಂದೆಯ ದಿನದ ಶುಭಾಶಯಗಳು...'' ಎಂದು ವಾಮಿಕ ಪತ್ರದಲ್ಲಿ ಬರೆದಿದ್ದಾಳೆ. ಜತೆ ಆಕೆಯ(ವಮಿಕಾ)ಮುದ್ದಾದ ಸಹಿ ಕೂಡ ಪತ್ರದಲ್ಲಿ ಮೂಡಿದ್ದು, ಅಭಿಮಾನಿಗಳಿಗೆ ಹಾಗೂ ನೆಟ್ಟಿಗರಿಗೆ ವಮಿಕಾ ಪತ್ರ ಇಷ್ಟವಾಗಿದೆ. ಇದರಿಂದ ಮದ್ದಾದ ಲೇಟರ್​ಗೆ ತರೇಹವಾರಿ ಕಾಮೆಂಟ್​ಗಳು ಹರಿದು ಬರುತ್ತೀವೆ.

ವಿರಾಟ್​- ಅನುಷ್ಕಾ ಸಂಬಂಧ

ಅನುಷ್ಕಾ ಜತೆ ವಿರಾಟ್​ ಇಟಲಿಯಲ್ಲಿ 2017ರಲ್ಲಿ ಸಪ್ತಪದಿ ತುಳಿದರು. 2021ರ ಜ.11ರಂದು ಮೊದಲ ಮಗು ವಮಿಕಾ ಜನಿಸಿದರು. ಬಳಿಕ 2024ರ ಫ್ರೆ.15ರಂದು ಎರಡನೇ ಮಗು ಅಕಾಯ್​ ಎಂಬ ಜನಿಸಿದರು. ದಂಪತಿಗಳು ಯಾವಾಗಲೂ ತಮ್ಮ ಮಕ್ಕಳನ್ನು ಪಾಪರಾಜಿ ಮತ್ತು ಜನಮನದಿಂದ ದೂರವಿಟ್ಟಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net