ಜಿಪ್​​ಲೈನ್​​ ತುಂಡಾಗಿ 30 ಅಡಿ ಆಳದ ಕಮರಿಗೆ ಬಿದ್ದ ಯುವತಿ; ಮುಂದೇನಾಯ್ತು?: ಎದೆ ಝಲ್​​ ಎನಿಸುವ ವಿಡಿಯೋ ವೈರಲ್​! |Zipline Broke

dk - 2025-06-15T174329.144
Published on

Zipline Broke: ಮನಾಲಿಗೆ ಪ್ರವಾಸದ ಟ್ರಿಪ್ ಹೋಗಿದ್ದ ಯುವತಿಯೊಬ್ಬಳು ಜಿಪ್​​ಲೈನ್​ ತುಂಡಾದ ಪರಿಣಾಮ 30 ಅಡಿ ಆಳವಾದ ಕಮರಿಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಾಗ್ಪುರದ 12 ವರ್ಷದ ಬಾಲಕಿ ಗಾಯಗೊಂಡಿದ್ದಾಳೆ. ಕಳೆದ ವಾರ ಈ ಘಟನೆ ನಡೆದಿದ್ದು, ಪ್ರಸ್ತುತ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವರದಿಯಾಗಿದೆ. ಅಲ್ಲದೆ, ಈಕೆ ಆಳಕ್ಕೆ ಬಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಕುಟುಂಬದ ಮೂಲಗಳ ಪ್ರಕಾರ, ತ್ರಿಶಾ ಬಿಜ್ವೆ ಎಂದು ಗುರುತಿಸಲ್ಪಟ್ಟ ಆ ಹುಡುಗಿ ತನ್ನ ಕುಟುಂಬದೊಂದಿಗೆ ಮನಾಲಿಯಲ್ಲಿ ರಜೆ ಕಳೆಯುತ್ತಿದ್ದಳು. ಅವಳು ಧರಿಸಿದ್ದ ಸರಂಜಾಮುಗೆ ಜೋಡಿಸಲಾದ ಹಗ್ಗ ತುಂಡಾಗಿ ಜಿಪ್‌ಲೈನ್ ಸವಾರಿ ಮಾಡುವಾಗ ಬಿದ್ದಳು.

ಜಿಪ್‌ಲೈನ್ ಅಪಘಾತದ ಆಘಾತಕಾರಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಗ್ಗ ತುಂಡಾಗಿ 12 ವರ್ಷದ ಬಾಲಕಿ ಕೆಳಗಿನ ಬಂಡೆಗಳ ಮೇಲೆ ಬಿದ್ದ ಭಯಾನಕ ಕ್ಷಣವನ್ನು ಸೆರೆಹಿಡಿಯಲಾಗಿದೆ.

ಬಾಲಕಿಯ ಮೂಳೆಗಳು ಬಹತೇಕ ಮರಿದಿದ್ದು, ಆಕೆಯ ಸ್ಥುತಿ ಗಂಭೀರವಾಗಿದೆ. ಹಲವು ಶಸ್ತ್ರಚಿಕಿತ್ಸೆಗೆ ಒಳಾಗಿದ್ದಾಳೆ. ಎಂದ ಆಕೆಯ ತಂದೆ ಪ್ರಫುಲ್ ಬಿಜ್ವೆ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net