ಮಧ್ಯಪ್ರಾಚ್ಯ ಉದ್ವಿಗ್ನ! ಇರಾನ್​-ಇಸ್ರೇಲ್​ ಸಂಘರ್ಷದಲ್ಲಿ 80 ಮಂದಿ ಬಲಿ | Israel-Iran Conflict

ವಿಜಯವಾಣಿ (31)
Published on

Israel-Iran Conflict: ಮಧ್ಯಪ್ರಾಚ್ಯ ವಿರೋಧಿ ದೇಶಗಳಾದ ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರವಾಗಿದೆ. ಎರಡೂ ರಾಷ್ಟ್ರಗಳು ಭಾನುವಾರ ರಾತ್ರಿಯಿಡೀ ಕ್ಷಿಪಣಿ ಮತ್ತು ಡ್ರೋನ್​ ದಾಳಿಗಳನ್ನು ನಡೆಸಿದ್ದು, ಪಶ್ಚಿಮ ಏಷ್ಯಾದಲ್ಲಿ ವ್ಯಾಪಕ ಪ್ರಾದೇಶಿಕ ಸಂಘರ್ಷದ ಆತಂಕ ಸೃಷ್ಟಿಯಾಗಿದೆ.

ಅತ್ತ ಅಹಮದಾಬಾದ್​ನಲ್ಲಿ ಸಂಭವಿಸಿದ ಏರ್​ ಇಂಡಿಯಾ ವಿಮಾನ ದುರಂತ ಮಾಸುವ ಮುನ್ನವೇ ಇತ್ತ ಇರಾನ್ ಮತ್ತು ಇಸ್ರೇಲ್​ ನಡುವೆ ಸೇಡಿನ ಕಿಡಿ ಹೊತ್ತಿ ಉರಿಯುತ್ತಿದೆ.​ ಜೂ.13ರ ಬೆಳಗ್ಗೆ ರಾಜಧಾನಿ ಟೆಹ್ರಾನ್‌ ಮೇಲೆ ವಾಯುದಾಳಿ ನಡೆಸಿದ ಇಸ್ರೇಲ್​, ಇರಾನ್​ನ ಸೇನಾ ಮುಖ್ಯಸ್ಥ ಸೇರಿದಂತೆ ಪ್ರಮುಖ ಅಧಿಕಾರಿಗಳನ್ನೇ ಹೊಡೆದುರಳಿಸಿತು. ಇದು ಎರಡೂ ದೇಶಗಳ ನಡುವಿನ ಪ್ರತೀಕಾರದ ಜ್ವಾಲೆಗೆ ದೊಡ್ಡ ಕಾರಣವಾಗಿ ಮಾರ್ಪಟ್ಟಿದೆ.

ಇತ್ತೀಚಿನ ವರದಿಗಳ ಪ್ರಕಾರ, ಮೊದಲ ಎರಡು ದಿನಗಳ ಇಸ್ರೇಲ್ ದಾಳಿಯಲ್ಲಿ ಒಟ್ಟು 80 ಮಂದಿ ಸಾವಿಗೀಡಾಗಿದ್ದಾರೆ. ಟೆಹ್ರಾನ್​ನ ಬೃಹತ್​ ಕಟ್ಟಡಗಳು ಛಿದ್ರಗೊಂಡಿದ್ದು, ಮೇಲಿನ ಮಹಡಿಗಳು ಕುಸಿದಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ. ಇರಾನ್​ನ ಪ್ರಮುಖ ಸ್ಥಳಗಳನ್ನೇ ಗುರಿಯಾಗಿಸಿಕೊಂಡಿರುವ ಇಸ್ರೇಲ್​, ನಿರಂತರ ಕ್ಷಿಪಣಿ ದಾಳಿಯ ಮೂಲಕ ಜನರ ಪ್ರಾಣ ಕಸಿದುಕೊಳ್ಳುತ್ತಿದೆ.

ಇರಾನ್​ ಪ್ರತೀಕಾರದ ಕ್ಷಿಪಣಿ!

ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ತಮ್ಮ ದೇಶದ ಹಲವಾರು ಜನರು ಜೀವ ಕಳೆದುಕೊಂಡ ಬೆನ್ನಲ್ಲೇ ಪ್ರತೀಕಾರದ ಎಚ್ಚರಿಕೆ ಕೊಟ್ಟ ಇರಾನ್ ಸೇನೆ, ಇಂದು ಇಸ್ರೇಲ್ ಮೇಲೆ ಕ್ಷಿಪಣಿಗಳ ಮಳೆಯನ್ನೇ ಸುರಿಸಿದೆ. ಈ ದಾಳಿಯಲ್ಲಿ ಇಸ್ರೇಲ್​ನ 10 ಜನರು ಮೃತಪಟ್ಟಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net