ಏನಿದು ಡೆಮಿಸೆಕ್ಸುವಾಲಿಟಿ? ತೀವ್ರ ಚರ್ಚೆ ಹುಟ್ಟುಹಾಕಿದ ಲೈಂಗಿಕ ಸಂಬಂಧದ ಬಗ್ಗೆ ತಿಳಿದು ಬೆರಗಾದ ಜಗತ್ತು! Demisexuality

Demisexuality
Published on

Demisexuality: ಇತ್ತೀಚೆಗೆ ಡೆಮಿಸೆಕ್ಸುವಾಲಿಟಿ ಎಂಬ ಪದವು ಅಂತರ್ಜಾಲದಲ್ಲಿ ಹೆಚ್ಚಾಗಿ ಕೇಳಿಬರುತ್ತಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಡೆಮಿಸೆಕ್ಸುವಾಲಿಟಿ ಎಂದರೇನು? ಏಕೆ ಚರ್ಚೆಯಾಗುತ್ತಿದೆ? ಎಂಬ ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಡೆಮಿಸೆಕ್ಸುವಾಲಿಟಿ ಎಂಬುದು ಒಂದು ರೀತಿಯ ಲೈಂಗಿಕ ಸಂಬಂಧವಾಗಿದೆ. "ಡೆಮಿಸೆಕ್ಸುವಲ್" ಎಂಬ ಪದವು ಮೊದಲು ಅಂತರ್ಜಾಲದಲ್ಲಿ 2006ರಲ್ಲಿ ಎ ಸೆಕ್ಸುವಲ್​ ವಿಸಿಬಿಲಿಟಿ ಮತ್ತು ಎಜುಕೇಶನ್​ ನೆಟ್‌ವರ್ಕ್ (AVEN) ವೇದಿಕೆಯಲ್ಲಿ ಕಾಣಿಸಿಕೊಂಡಿತು.

ಅಂದಹಾಗೆ ಡೆಮಿಸೆಕ್ಸುವಾಲಿಟಿಯನ್ನು ಅರ್ಥಮಾಡಿಕೊಳ್ಳುವುದು ತುಂಬಾ ಸುಲಭ. ಒಬ್ಬ ವ್ಯಕ್ತಿಯು ಯಾವುದೇ ಲೈಂಗಿಕ ಬಯಕೆಗಳಿಲ್ಲದೆ ತನ್ನ ವಿರುದ್ಧ ಲಿಂಗದೊಂದಿಗೆ ಒಂದು ರೀತಿಯ ಬಂಧವನ್ನು ರೂಪಿಸಿಕೊಳ್ಳುತ್ತಾನೆ.

ಇನ್ನು ಸರಳವಾಗಿ ಹೇಳುವುದಾದರೆ, ಡೆಮಿಸೆಕ್ಸುವಾಲಿಟಿ ಗುಣಲಕ್ಷಣಗಳನ್ನು ಹೊಂದಿರುವ ಜನರು ಸುಲಭವಾಗಿ ವಿರುದ್ಧ ಲಿಂಗಕ್ಕೆ ಆಕರ್ಷಿತರಾಗುವುದಿಲ್ಲ. ಬದಲಾಗಿ ಅವರನ್ನು ಆಕರ್ಷಿಸಲು ಬಲವಾದ ಭಾವನಾತ್ಮಕ ಬಂಧವನ್ನು ರೂಪಿಸಬೇಕು. ಇಲ್ಲಿ ಮೈಕಟ್ಟು ಅಥವಾ ಸೌಂದರ್ಯವನ್ನು ನೋಡಿದಾಗ ಯಾವುದೇ ಭಾವನೆ ಉಂಟಾಗುವುದಿಲ್ಲ.

ಸೌಂದರ್ಯದಿಂದಲ್ಲ ಹೃದಯದಿಂದ ಪ್ರೀತಿಸಬೇಕೆಂಬ ಡೈಲಾಗ್‌ಗಳನ್ನು ನೀವು ಸಿನಿಮಾಗಳಲ್ಲಿ ಕೇಳಿರುತ್ತೀರಿ. ಅದೇ ರೀತಿಯಲ್ಲಿ ಡೆಮಿಸೆಕ್ಸುವಾಲಿಟಿ ಹೊಂದಿರುವ ಜನರು ವರ್ತಿಸುತ್ತಾರೆ. ಯಾವುದೇ ಭಾವನೆಗಳಿಲ್ಲದ ವಿರುದ್ಧ ಲಿಂಗದ ಬಗ್ಗೆ ಅವರಲ್ಲಿಯೂ ಭಾವನೆಗಳಿರುವುದಿಲ್ಲ. ಒಬ್ಬ ವ್ಯಕ್ತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡ ನಂತರ ಮತ್ತು ಅವರೊಂದಿಗೆ ದೀರ್ಘವಾದ ಭಾವನಾತ್ಮಕ ಪ್ರಯಾಣವನ್ನು ಮಾಡಿದ ನಂತರವೇ ಲೈಂಗಿಕ ಬಯಕೆಗಳನ್ನು ಪಡೆಯುತ್ತಾರೆ.

ಆದರೆ ಈ ಗುಣಲಕ್ಷಣಗಳನ್ನು ಹೊಂದಿರುವ ಜನರು ಇತರರೊಂದಿಗೆ ಭಾವನಾತ್ಮಕ ಬಂಧವನ್ನು ಬೆಳೆಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಕೆಲವರು ಕೆಲವು ವಾರಗಳನ್ನು ತೆಗೆದುಕೊಳ್ಳಬಹುದು, ಇತರರು ವರ್ಷಗಳನ್ನು ತೆಗೆದುಕೊಳ್ಳಬಹುದು. ಅಲ್ಲಿಯವರೆಗೆ ಲೈಂಗಿಕತೆಗೆ ಒಪ್ಪಿಗೆ ಸೂಚಿಸುವುದೇ ಇಲ್ಲ. ಭಾವನಾತ್ಮಕ ಬಂಧ ಬೆಳೆದಾಗ ಮಾತ್ರ ದೈಹಿಕ ಬಂಧನಕ್ಕೆ ಮುಂದಾಗುತ್ತಾರೆ.

ಡೆಮಿಸೆಕ್ಸುವಾಲಿಟಿ ಬಗ್ಗೆ ಏಕೆ ತಿಳಿಯಬೇಕು?

ಸಾಮಾನ್ಯವಾಗಿ ಎಲ್ಲರೂ ಲೈಂಗಿಕತೆಯ ಬಗ್ಗೆ ಒಂದೇ ರೀತಿ ಯೋಚಿಸುತ್ತಾರೆ. ಆದರೆ ಲೈಂಗಿಕತೆಯ ಬಗ್ಗೆ ಪ್ರತಿಯೊಬ್ಬರ ಅಭಿಪ್ರಾಯವೂ ಕೂಡ ಭಿನ್ನವಾಗಿರುತ್ತದೆ. ಡೆಮಿಸೆಕ್ಸುವಾಲಿಟಿ ಕೂಡ ಅಂತಹ ವ್ಯಕ್ತಿಗಳಲ್ಲಿ ಒಬ್ಬರು. ಹೀಗಾಗಿ ಇದರ ಬಗ್ಗೆ ಸದ್ಯ ತೀವ್ರ ಚರ್ಚೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net