

Fingernails : ನಿಮ್ಮ ಬೆರಳಿನ ಉಗುರುಗಳನ್ನು ನೋಡುವ ಮೂಲಕ ನಿಮ್ಮ ಆರೋಗ್ಯವನ್ನು ಊಹಿಸಬಹುದು ಎಂದರೆ ನೀವು ನಂಬುತ್ತೀರಾ? ಹೌದು, ನಂಬಲೇಬೇಕು. ಬೆರಳಿನ ಉಗುರುಗಳು ಸಾಮಾನ್ಯವಾಗಿರದಿದ್ದರೆ, ಅವುಗಳಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ, ನಿಮ್ಮ ದೇಹದಲ್ಲಿ ಬದಲಾವಣೆಗಳು ಉಂಟಾಗುತ್ತಿವೆ ಎಂದು ಅರ್ಥಮಾಡಿಕೊಳ್ಳಬೇಕು.
ಬೆರಳಿನ ಉಗುರುಗಳ ಆಧಾರದ ಮೇಲೆ ದೇಹದಲ್ಲಿ ಯಾವ ರೀತಿಯ ಅನಾರೋಗ್ಯವಿದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ತೆಳುವಾದ ಉಗುರುಗಳು: ನಿಮ್ಮ ಉಗುರುಗಳೇನಾದರೂ ತೆಳ್ಳಗಿದ್ದರೆ ಮತ್ತು ಬೇಗನೆ ಮುರಿದರೆ ದೇಹದಲ್ಲಿ ವಿಟಮಿನ್ ಬಿ ಕೊರತೆಯಿದೆ ಎಂದು ಅರ್ಥಮಾಡಿಕೊಳ್ಳಬಹುದು. ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಕೊರತೆಗಳಿವೆ ಎಂದು ಸಹ ಅಂದಾಜಿಸಬಹುದು.
ಉಗುರುಗಳ ಮೇಲೆ ಬಿಳಿ ಕಲೆಗಳು: ಕೆಲವು ಅಲರ್ಜಿಗಳು, ದೇಹದಲ್ಲಿ ಸತುವಿನ ಕೊರತೆ ಅಥವಾ ಶಿಲೀಂಧ್ರಗಳ ಸೋಂಕುಗಳು ಉಗುರುಗಳ ಮೇಲೆ ಬಿಳಿ ಚುಕ್ಕೆಗಳನ್ನು ಉಂಟುಮಾಡಬಹುದು. ನಿಮ್ಮ ಉಗುರುಗಳಲ್ಲಿ ಈ ರೀತಿ ಇದ್ದರೆ ವೈದ್ಯರನ್ನು ಸಂಪರ್ಕಿಸಿ.
ಹಳದಿ ಬಣ್ಣದ ಉಗುರುಗಳು: ಹೆಚ್ಚು ಸಿಗರೇಟ್ ಸೇದುವವರಲ್ಲಿ ಉಗುರುಗಳು ಹಳದಿಯಾಗುವುದು ಸಾಮಾನ್ಯ. ಇದಲ್ಲದೆ, ಶಿಲೀಂಧ್ರಗಳ ಸೋಂಕಿನಿಂದಲೂ ಕೂಡ ಈ ರೀತಿ ಆಗುತ್ತದೆ. ಉಸಿರಾಟದ ಕಾಯಿಲೆಗಳು ಮತ್ತು ಥೈರಾಯ್ಡ್ ಕೂಡ ಉಗುರುಗಳು ಹಳದಿ ಬಣ್ಣಕ್ಕೆ ತಿರುಗಲು ಕಾರಣವಾಗಬಹುದು.
ಶಂಕುವಿನಾಕಾರದ ಉಗುರುಗಳು: ಉಗುರುಗಳು ಸಾಮಾನ್ಯ ಆಕಾರದಲ್ಲಿ ಇರದೆ ಶಂಕುವಿನಾಕಾರದಲ್ಲಿದ್ದರೆ ದೇಹದಲ್ಲಿ ಕೆಲ ಬದಲಾವಣೆಗಳು ಆಗುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ದೇಹದಲ್ಲಿ ರಕ್ತದ ನಷ್ಟ ಮತ್ತು ಯಕೃತ್ತಿನ ಸಮಸ್ಯೆಗಳಿಂದಾಗಿ ಉಗುರುಗಳು ಶಂಕುವಿನಾಕಾರದಲ್ಲಿ ಬೆಳೆಯುತ್ತವೆ.
ಈ ಮೇಲಿನ ಯಾವುದೇ ಲಕ್ಷಣಗಳು ಕಾಣಿಸಿಕೊಂಡಾಗ ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳುವುದು ಸೂಕ್ತ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದ ಆಧಾರದ ಮೇಲೆ ಸಂಗ್ರಹಿಸಲಾಗಿದೆ. ಇದು ಕೇವಲ ಜಾಗೃತಿಗಾಗಿ. "ವಿಜಯವಾಣಿ ಡಾಟ್ ನೆಟ್" ಇದನ್ನು ದೃಢೀಕರಿಸುವುದಿಲ್ಲ. ಈ ಕುರಿತು ಯಾವುದೇ ಪ್ರಶ್ನೆಗಳಿದ್ದರೆ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.