ಮಾರುಕಟ್ಟೆಯಲ್ಲಿ ಗಂಡನ ನಿಜ ರೂಪ ಕಂಡು ಕುಸಿದು ಬಿದ್ದ ಪತ್ನಿ! ಮದ್ವೆಯಾದ 4 ವರ್ಷದ ಬಳಿಕ ಸತ್ಯ ಬಯಲು | Husband

Husband

Husband : ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವಿಚಿತ್ರ ಪ್ರಕರಣವೊಂದು ಪ್ರಕರಣವೊಂದು ವರದಿಯಾಗಿದೆ. ಮದುವೆಯಾದ ನಾಲ್ಕು ವರ್ಷಗಳ ಬಳಿಕ ತನ್ನ ಗಂಡ ಪುರುಷನಲ್ಲ, ನಪುಂಸಕನೆಂದು ತಿಳಿದು ಮಹಿಳೆ ಆಘಾತಕ್ಕೆ ಒಳಗಾಗಿದ್ದಾಳೆ.

blank

ದಂಪತಿ 2020ರಲ್ಲಿ ಮದುವೆಯಾದರು. ಆದರೆ, ಗಂಡನಿಗೆ ಲೈಂಗಿಕ ಕ್ರಿಯೆಯ ಮೇಲೆ ಸ್ವಲ್ಪವೂ ಆಸಕ್ತಿ ಇರಲಿಲ್ಲ. ಕಾರಣ ಕೇಳಿದಾಗ ತನಗೆ ಆರೋಗ್ಯ ಸಮಸ್ಯೆ ಇದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದೇನೆ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದ. ಹೀಗೆ ನಾಲ್ಕು ವರ್ಷಗಳು ಕಳೆದು ಹೋಯಿತು. ಇತ್ತೀಚೆಗೆ ತನ್ನ ಪತಿ ಮಹಿಳೆಯರಂತೆ ಸೀರೆ ಧರಿಸಿ, ಮೇಕಪ್ ಮಾಡಿಕೊಂಡು ಮಂಗಳಮುಖಿಯರಂತೆ ಮಾರುಕಟ್ಟೆಯಲ್ಲಿ ಭಿಕ್ಷೆ ಬೇಡುವಾಗ ಸಿಕ್ಕಿಬಿದ್ದನು. ಬಳಿಕ ಆತ ಗಂಡಸಲ್ಲ ಸತ್ಯ ಬೆಳಕಿಗೆ ಬಂದಿದೆ. ಸತ್ಯ ಗೊತ್ತಾದ ಬೆನ್ನಲ್ಲೇ ಸಂತ್ರಸ್ತ ಮಹಿಳೆ ಗ್ವಾಲಿಯರ್​ ನಗರದ ಮಹಿಳಾ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಘಟನೆಯ ವಿವರಕ್ಕೆ ಬರುವುದಾದರೆ, ದಂಪತಿ 2020ರಲ್ಲಿ ಅದ್ಧೂರಿಯಾಗಿ ವಿವಾಹವಾದರು. ಈ ವೇಳೆ ಮಹಿಳೆಯ ಮನೆಯವರು ವರದಕ್ಷಿಣೆಯಾಗಿ ಲಕ್ಷಾಂತರ ರೂಪಾಯಿ ಮತ್ತು ಗೃಹೋಪಯೋಗಿ ವಸ್ತುಗಳನ್ನು ನೀಡಿದ್ದರು. ಮದುವೆ ಬಳಿಕ ತನ್ನ ಗಂಡನೊಂದಿಗೆ ದೈಹಿಕವಾಗಿ ಬೆರೆಯಲು ಮಹಿಳೆ ಅನೇಕ ಬಾರಿ ಯತ್ನಿಸಿದರೂ ಆತ ವೈದ್ಯಕೀಯ ಸಮಸ್ಯೆಯನ್ನು ಉಲ್ಲೇಖಿಸಿ ಪತ್ನಿಯ ಬೇಡಿಕೆಗಳನ್ನು ನಿರಾಕರಿಸುತ್ತಿದ್ದನು.

ಇದನ್ನೂ ಓದಿ: ಮೈದಾ ಹಿಟ್ಟು ಹೇಗೆ ತಯಾರಿಸುತ್ತಾರೆ ಗೊತ್ತಾ? ತಿಂದ್ರೆ ಯಾವ ಸಮಸ್ಯೆ ಕಾಡುತ್ತೆ? ಮೈದಾ ಬದಲು ಯಾವುದು ಉತ್ತಮ? Maida flour

ದಿನಗಳು ಕಳೆದಂತೆ ಪತಿ ಮತ್ತು ಆತನ ಕುಟುಂಬದ ವರ್ತನೆಗಳು ಬದಲಾದವು. ಕ್ಷುಲ್ಲಕ ವಿಷಯಗಳಿಗೂ ಜಗಳಗಳು ನಡೆಯುತ್ತಿದ್ದವು. ಸಂತ್ರಸ್ತೆಯ ಮೇಲೆ ಆಗಾಗ ಹಲ್ಲೆ ಮಾಡಲಾಗುತ್ತಿತ್ತು ಮತ್ತು ಸಂತ್ರಸ್ತೆಗೆ ಆಹಾರವನ್ನೂ ನಿರಾಕರಿಸುತ್ತಿದ್ದರು. ಆಕೆ ಅನಾರೋಗ್ಯಕ್ಕೆ ಒಳಗಾದಾಗಲೆಲ್ಲ ಅವಳನ್ನು ತಾಯಿಯ ಮನೆಗೆ ಕಳುಹಿಸಲಾಗುತ್ತಿತ್ತು. ಇದಿಷ್ಟೇ ಅಲ್ಲದೆ, ಮತ್ತೆ ವರದಕ್ಷಿಣೆಯಾಗಿ 2 ಲಕ್ಷ ರೂ. ನಗದು ಮತ್ತು ಸ್ಕೂಟರ್​ಗೆ ಬೇಡಿಕೆ ಇಟ್ಟಿದ್ದರು. ಬೇಡಿಕೆಗಳು ಈಡೇರದಿದ್ದಾಗ ಆಕೆಯನ್ನು ಮನೆಯಿಂದ ಹೊರಹಾಕಿ ಮತ್ತೆ ತಾಯಿಯ ಮನೆಗೆ ಕಳುಹಿಸಲಾಗಿತ್ತು.

ಕೆಲವು ದಿನಗಳ ನಂತರ, ಸಂತ್ರಸ್ತ ಮಹಿಳೆ ಶಾಪಿಂಗ್ ಮಾಡಲು ಸ್ಥಳೀಯ ಮಾರುಕಟ್ಟೆಗೆ ಹೋದಳು. ಈ ವೇಳೆ ಆಕಸ್ಮಿಕವಾಗಿ ತನ್ನ ಗಂಡ ಎದುರಾದಾಗ ಆತನನ್ನು ನೋಡಿ ಒಂದು ಕ್ಷಣ ಕುಸಿದು ಬಿದ್ದಳು. ಏಕೆಂದರೆ, ತನ್ನ ಗಂಡ ಹೆಣ್ಣಿನ ವೇಷದಲ್ಲಿದ್ದನು. ಕೈ ಬಳೆಗಳು ಮತ್ತು ಆಭರಣಗಳನ್ನು ಧರಿಸಿದ್ದನು. ಮಂಗಳಮುಖಿಯರೊಂದಿಗೆ ಸೇರಿ ಹಣಕ್ಕಾಗಿಯೂ ಭಿಕ್ಷೆ ಬೇಡುತ್ತಿದ್ದನು. ಈ ವೇಳೆ ಆತನನ್ನು ಪ್ರಶ್ನೆ ಮಾಡಿದಾಗ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ, ಕೆಲವೊಮ್ಮೆ ಮಹಿಳೆಯಂತೆ ಡ್ರೆಸ್ ಮಾಡಬೇಕಾಗುತ್ತದೆ ಎಂದು ಸುಳ್ಳು ಹೇಳಿದ್ದನು.

ಆದರೆ, ಅಷ್ಟರಲ್ಲಾಗಲೇ ಗಂಡನ ಅಸಲಿಯತ್ತು ಗೊತ್ತಾಗಿತ್ತು. ಬಳಿಕ ಸಂತ್ರಸ್ತೆ ಗ್ವಾಲಿಯರ್‌ನ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದರು. ಪೊಲೀಸ್ ಅಧಿಕಾರಿಗಳು ಇದನ್ನು ವರದಕ್ಷಿಣೆ ಕಿರುಕುಳ ಮತ್ತು ಭಾವನಾತ್ಮಕ ನಿಂದನೆ ಪ್ರಕರಣವೆಂದು ಪರಿಗಣಿಸಿದ್ದು, ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)

ಲಿವರ್​​ ದಾನ ಮಾಡಿ ಪತಿಗೆ ಮರುಜನ್ಮ ನೀಡಿದ ಪತ್ನಿ! ಅರ್ಧಾಂಗಿ ಪದಕ್ಕೆ ನಿಜವಾದ ಅರ್ಥವೇ ಲಾವಣ್ಯ | Wife Donate Liver

ನೀವು ಇವುಗಳನ್ನು ಕುಡಿಯುತ್ತಿದ್ರೆ ಇಂದೇ ನಿಲ್ಲಿಸಿ ಇಲ್ಲದಿದ್ರೆ ನಿಮ್ಮ ಲಿವರ್​ ಡ್ಯಾಮೇಜ್​ ಆಗೋದು ಗ್ಯಾರಂಟಿ! Liver Health

Share This Article
blank

ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ಇಲ್ಲಿದೆ ಸುಲಭ ಮಾರ್ಗ.. ಒಮ್ಮೆ ಟ್ರೈ ಮಾಡಿ | Lizards

Lizards: ಹಲ್ಲಿಗಳು ಹೆಚ್ಚಾಗಿ ಮನೆಯ ಗೋಡೆಗಳ ಮೇಲೆ ಮತ್ತು ಅಡುಗೆಮನೆಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹಲ್ಲಿಗಳ ಬಗ್ಗೆ…

ಹನಿ-ಹನಿ ಮೂತ್ರ ಬರುತ್ತಿದ್ರೆ ಈ ಅಂಗಕ್ಕೆ ಹಾನಿಯಾಗಿದೆ ಎಂದರ್ಥ!; ಅನಿಯಂತ್ರಿತ ಮೂತ್ರದ ಸಮಸ್ಯೆಗೆ ಕಾರಣ ಏನು? | Urinary

Urinary : ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಮೂತ್ರ ಸಂಬಂಧಿತ ಸಮಸ್ಯೆಗಳು ಭಾಧಿಸುತ್ತವೆ. ಅನೇಕ ಜನರಿಗೆ ಮೂತ್ರ…

blank