ಮೈದಾ ಹಿಟ್ಟು ಹೇಗೆ ತಯಾರಿಸುತ್ತಾರೆ ಗೊತ್ತಾ? ತಿಂದ್ರೆ ಯಾವ ಸಮಸ್ಯೆ ಕಾಡುತ್ತೆ? ಮೈದಾ ಬದಲು ಯಾವುದು ಉತ್ತಮ? Maida flour

Maida flour
Published on

Maida flour : ನಾವು ದಿನನಿತ್ಯ ಬಳಸುವ ಆಹಾರ ಪದಾರ್ಥಗಳಲ್ಲಿ ಅಕ್ಕಿ ಹಿಟ್ಟು, ಗೋಧಿ ಹಿಟ್ಟು ಮತ್ತು ಮೈದಾ ಹಿಟ್ಟುಗಳು ಕೂಡ ಸೇರಿಕೊಂಡಿವೆ. ಕಡಲೆ ಹಿಟ್ಟನ್ನು ಕಡಲೆಕಾಯಿಯಿಂದ ತಯಾರಿಸಲಾಗುತ್ತದೆ. ಹಾಗೆಯೇ ಗೋಧಿಯಿಂದ ಗೋಧಿ ಹಿಟ್ಟು ಮತ್ತು ಅಕ್ಕಿಯಿಂದ ಅಕ್ಕಿ ಹಿಟ್ಟನ್ನು ತಯಾರಿಸಲಾಗುತ್ತದೆ. ಆದರೆ, ಮೈದಾ ಹಿಟ್ಟನ್ನು ಹೇಗೆ ಮಾಡ್ತಾರೆ ಗೊತ್ತಾ? ನಿಮಗೆ ಎಂದಾದರೂ ಈ ಅನುಮಾನ ಬಂದಿದೆಯಾ? ನಾವೀಗ ಮೈದಾ ಹಿಟ್ಟನ್ನು ಹೇಗೆ ತಯಾರಿಸಲಾಗುತ್ತದೆ ಎಂದು ನೋಡೋಣ.

ವಾಸ್ತವವಾಗಿ ಮೈದಾ ಹಿಟ್ಟು ಕೂಡ ಗೋಧಿ ಹಿಟ್ಟಿನಿಂದಲೇ ಬರುತ್ತದೆ. ಗೋಧಿಯನ್ನು ತೊಳೆದು, ಚೆನ್ನಾಗಿ ಒಣಗಿಸಿ ಗಿರಣಿಯಲ್ಲಿ ಚೆನ್ನಾಗಿ ಪಾಲಿಶ್ ಮಾಡಲಾಗುತ್ತದೆ. ಬಳಿಕ ಪಾಲಿಶ್ ಮಾಡಿದ ಗೋಧಿಯನ್ನು ಪುಡಿ ಮಾಡಲಾಗುತ್ತದೆ. ಅದಕ್ಕೆ ಅಜೋಡಿಕಾರ್ಬೊನಮೈಡ್, ಬೆನ್ಝಾಯ್ಲ್ ಪೆರಾಕ್ಸೈಡ್ ಹಾಗೂ ಕ್ಲೋರಿನ್ ಗ್ಯಾಸ್ ಸೇರಿದಂತೆ ಮುಂತಾದ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಇವುಗಳಿಂದ ಮೈದಾ ಹಿಟ್ಟು ಬಿಳಿ ಮತ್ತು ಮೃದುವಾಗುತ್ತದೆ.

ವಾಸ್ತವವಾಗಿ, ಬೆನ್ಝಾಯ್ಲ್ ಪೆರಾಕ್ಸೈಡ್ ಮತ್ತು ಕ್ಲೋರಿನ್ ಅನಿಲದ ಬಳಕೆಯನ್ನು ಚೀನಾ ಮತ್ತು ಯುರೋಪಿಯನ್ ದೇಶಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ, ಈ ಹಿಟ್ಟಿನ ತಯಾರಿಕೆಯಲ್ಲಿ ಅಲೋಕ್ಸಾನ್ ಎಂಬ ರಾಸಾಯನಿಕವನ್ನು ಸಹ ಬಳಸಲಾಗುತ್ತದೆ.

ಇನ್ನು ಅನೇಕ ದೇಶಗಳಲ್ಲಿ ಮೈದಾನವನ್ನು ನಿಷೇಧಿಸಲಾಗಿದೆ. ಆದರೆ, ದಕ್ಷಿಣ ಭಾರತದಲ್ಲಿ ಮೈದಾವನ್ನು ಹೆಚ್ಚಿನ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಮೈದಾ ತೇವವಾದಾಗ ಅದರ ಹಿಟ್ಟು ಜಿಗುಟಾದ ವಸ್ತುವಾಗಿ ಬದಲಾಗುತ್ತದೆ. ಅದಕ್ಕಾಗಿಯೇ ಇದನ್ನು ಸಿಹಿತಿಂಡಿಗಳು ಹಾಗೂ ಬ್ರೆಡ್ ಮುಂತಾದವುಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಬೇಕರಿಯಲ್ಲಿ ಸಿಗುವ ಆಹಾರ, ಬಿಸ್ಕೆಟ್, ಚಿಪ್ಸ್ ಹಾಗೂ ಪರೋಟಾ ಸೇರಿದಂತೆ ಅನೇಕ ವಸ್ತುಗಳಲ್ಲಿ ಮೈದನಾವನ್ನು ಬಳಸಲಾಗುತ್ತದೆ. ಮೈದಾದಿಂದ ಮಾಡಿದ ಖಾದ್ಯಗಳು ರುಚಿಕರವಾಗಿರುವುದರಿಂದ ಅನೇಕ ಜನರು ಇಷ್ಟಪಡುತ್ತಾರೆ. ಆದರೆ, ನಾಣ್ಯದ ಇನ್ನೊಂದು ಬದಿ ಇರುವಂತೆ ಈ ಮೈದಾದಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.

ಮೈದಾ ಹಿಟ್ಟಯನ್ನು ನಿರಂತರವಾಗಿ ತೆಗೆದುಕೊಂಡರೆ ಅಜೀರ್ಣ ಸಂಭವಿಸಬಹುದು. ಮಧುಮೇಹದ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚಿದೆ. ತೂಕವು ಕೂಡ ಹೆಚ್ಚಾಗುತ್ತದೆ. ಉರಿಯೂತದ ಸಮಸ್ಯೆ ಕಾಡುತ್ತದೆ. ಇದಲ್ಲದೇ ಮೈದಾವನ್ನು ಅತಿಯಾಗಿ ಬಳಸುವುದರಿಂದ ಕಿಡ್ನಿ ಸ್ಟೋನ್, ಹೃದ್ರೋಗದಂತಹ ಸಮಸ್ಯೆಗಳೂ ಬರುತ್ತವೆ.

ಅಂದಹಾಗೆ ಮೈದಾ ಹಿಟ್ಟು ಅನೇಕ ಸಂಸ್ಕರಿಸಿದ ಆಹಾರಗಳು ಮತ್ತು ಬೇಯಿಸಿದ ಸರಕುಗಳಲ್ಲಿ ಸಾಮಾನ್ಯ ಅಂಶವಾಗಿದ್ದರೂ, ಅದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ನಿಯಮಿತವಾದ ಮೈದಾ ಸೇವನೆಯು ಪೋಷಕಾಂಶಗಳ ಕೊರತೆ, ಜೀರ್ಣಕಾರಿ ಸಮಸ್ಯೆಗಳು, ತೂಕ ಹೆಚ್ಚಾಗುವುದು ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯಕ್ಕೆ ಕಾರಣವಾಗಬಹುದು. ಬದಲಿಗೆ, ಸಂಪೂರ್ಣ ಗೋಧಿ ಹಿಟ್ಟು, ಬಾದಾಮಿ ಹಿಟ್ಟು, ತೆಂಗಿನ ಹಿಟ್ಟು, ಓಟ್ ಹಿಟ್ಟು ಹಾಗೂ ಹುರುಳಿ ಹಿಟ್ಟು ಮುಂತಾದ ಆರೋಗ್ಯಕರ ಪರ್ಯಾಯಗಳನ್ನು ಆರಿಸಿಕೊಳ್ಳಿ. ಈ ಪರ್ಯಾಯಗಳು ಪೋಷಕಾಂಶಗಳಲ್ಲಿ ಹೆಚ್ಚು, ಗ್ಲೈಸೆಮಿಕ್ ಇಂಡೆಕ್ಸ್‌ನಲ್ಲಿ ಕಡಿಮೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿದೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net