

Nails Cutting : ಪ್ರತಿಯೊಂದು ಕ್ರಿಯೆ ಅಥವಾ ಕೆಲಸ ಕಾರ್ಯಗಳನ್ನು ನಿರ್ದಿಷ್ಟ ಸಮಯದಲ್ಲಿ ಮಾಡಬೇಕು ಎಂದು ಶಾಸ್ತ್ರ ಅಥವಾ ಪುರಾಣದಲ್ಲಿ ಹೇಳಲಾಗಿದೆ. ನಂಬಿಕೆಗಳ ಪ್ರಕಾರ ತಪ್ಪಾದ ಸಮಯದಲ್ಲಿ ಉಗುರು ಕತ್ತರಿಸುವುದರಿಂದ ಮನೆಯಲ್ಲಿ ಬಡತನ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ಮಂಗಳವಾರ ಮತ್ತು ಶುಕ್ರವಾರ ಕೂದಲು ಕತ್ತರಿಸಬಾರದು ಎಂದು ಹಿರಿಯರು ಹೇಳುವುದನ್ನು ಸಾಮಾನ್ಯವಾಗಿ ನೀವು ಕೇಳಿರುತ್ತೀರಿ. ಅದೇ ರೀತಿ ಉಗುರುಗಳನ್ನು ಕತ್ತರಿಸುವಾಗಲೂ ಸಮಯವನ್ನು ಯೋಚಿಸಬೇಕು. ಮನಸ್ಸಿಗೆ ಬಂದಾಗ ಕತ್ತರಿಸಬಾರದು. ಒಂದು ವೇಳೆ ಕತ್ತರಿಸಿದ್ದಲ್ಲಿ ಸಮಸ್ಯೆಗಳು ಎದುರಾಗುತ್ತವೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಾದರೆ, ಉಗುರುಗಳನ್ನು ಯಾವ ದಿನ ಕತ್ತರಿಸಬಹುದು? ಎಂಬುದನ್ನು ನಾವೀಗ ತಿಳಿಯೋಣ.
ಅಂದಹಾಗೆ ವಾರದಲ್ಲಿ ಕೆಲವು ದಿನ ಉಗುರುಗಳನ್ನು ಕತ್ತರಿಸಬಾರದು. ಈ ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದರಿಂದ ಜೀವನದಲ್ಲಿ ತೊಂದರೆಗಳು ಮತ್ತು ಸಮಸ್ಯೆಗಳು ಹೆಚ್ಚಾಗುತ್ತವೆ. ಉದಾಹರಣೆಗೆ, ಶನಿವಾರದಂದು ಉಗುರುಗಳನ್ನು ಕತ್ತರಿಸಿದರೆ ಶನಿಯು ಕೋಪಗೊಳ್ಳುತ್ತಾನೆ. ಇದರಿಂದ ದೈಹಿಕ, ಮಾನಸಿಕ ಹಾಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಇನ್ನು ಭಾನುವಾರದಂದು ಉಗುರುಗಳನ್ನು ಕತ್ತರಿಸುವುದು ಜಾತಕದಲ್ಲಿ ಸೂರ್ಯನನ್ನು ದುರ್ಬಲಗೊಳಿಸುತ್ತದೆ. ಇದರಿಂದ ನಿಮ್ಮ ಆತ್ಮ ವಿಶ್ವಾಸ ಕಡಿಮೆಯಾಗುತ್ತದೆ. ಮಂಗಳವಾರ ಕೂಡ ಉಗುರುಗಳನ್ನು ಕತ್ತರಿಸಬಾರದು. ಅದೇ ಸಮಯದಲ್ಲಿ, ಗುರುವಾರವೂ ಆಕಸ್ಮಿಕವಾಗಿ ಉಗುರುಗಳನ್ನು ಕತ್ತರಿಸಬೇಡಿ. ಕತ್ತರಿಸಿದ್ದಲ್ಲಿ ಅದೃಷ್ಟವು ದುರಾದೃಷ್ಟಕ್ಕೆ ತಿರುಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಶಾಸ್ತ್ರಗಳ ಪ್ರಕಾರ, ಬುಧವಾರ ಮತ್ತು ಶುಕ್ರವಾರ ಉಗುರುಗಳನ್ನು ಕತ್ತರಿಸಲು ಉತ್ತಮ ದಿನಗಳೆಂದು ಹೇಳಲಾಗಿದೆ. ಈ ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದರಿಂದ ಸಂಪತ್ತು ವೃದ್ಧಿಯಾಗುತ್ತದೆಯಂತೆ. ಅಲ್ಲದೆ, ಕೆಲಸ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ತರುತ್ತದೆ. ತಾಯಿ ಲಕ್ಷ್ಮಿಯ ಕೃಪೆಯಿಂದ ಸಂಪತ್ತು ಸಮೃದ್ಧಿಯಾಗುತ್ತದೆ. ಸೋಮವಾರವೂ ಉಗುರುಗಳನ್ನು ಕತ್ತರಿಸಬಹುದು. ಹೀಗೆ ಮಾಡುವುದರಿಂದ ಸಣ್ಣಪುಟ್ಟ ಕಾಯಿಲೆಗಳಿಗೆ ಪರಿಹಾರ ಸಿಗುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ. ಹಾಗೆಯೇ ಮೇಲಿನ ನಿಯಮಗಳು ಸಾಂಪ್ರದಾಯಿಕ ಚಿಂತನೆಯನ್ನು ಆಧರಿಸಿವೆ ಹೊರತು ವಿಜ್ಞಾನದಿಂದ ಬೆಂಬಲಿತವಾಗಿಲ್ಲ.