ವಂಚನೆ ಪ್ರಕರಣ: ಗೌತಮ್ ಅದಾನಿ ವಿರುದ್ಧ ಅರೆಸ್ಟ್​ ವಾರೆಂಟ್ ಜಾರಿಗೊಳಿಸಿದ ಅಮೆರಿಕ ಕೋರ್ಟ್​ | Arrest Warrant

adani 1
Published on

ಅಮೆರಿಕಾ: 2,237 ಕೋಟಿ ರೂ. ಲಂಚ ಆರೋಪದಡಿ ಗೌತಮ್ ಅದಾನಿ ಸೇರಿ 7 ಜನರ ವಿರುದ್ಧ ಅಮೆರಿಕದ ನ್ಯಾಯಾಲಯ ಅರೆಸ್ಟ್ ವಾರೆಂಟ್ (Arrest Warrant)​ ಜಾರಿಗೊಳಿಸಲಾಗಿದೆ.

2,227 ಕೋಟಿ ರೂ. ಲಂಚದ ಆರೋಪದಲ್ಲಿ ಸಾಗರ್​ ಆರ್​.ಅದಾನಿ, ಗೌತಮ್ ಅದಾನಿ ಮತ್ತು ವಿನೀತ್ ಎಸ್​.ಜೈನ್​ ವಿರುದ್ಧ ಐದು ಅಂಶಗಳ ಕ್ರಿಮಿನಲ್ ಆರೋಪಪಟ್ಟಿಯನ್ನು ನ್ಯೂಯಾರ್ಕ್​ನ ಪೂರ್ವ ಜಿಲ್ಲಾ ನ್ಯಾಯಾಲಯಕ್ಕೆ ಯುಎಸ್​ನ ಪ್ರಾಸಿಕ್ಯೂಟರ್​ ಸಲ್ಲಿಸಿದ್ದರು ಎಂದು ವರದಿ ಉಲ್ಲೇಖಿಸಿದೆ.

ಸೌರ ವಿದ್ಯುತ್​ ಗುತ್ತಿಗೆಗೆ ಸಂಬಂಧಿಸಿದಂತೆ ಬಹುಕೋಟಿ ಡಾಲರ್​ ಲಂಚ ಮತ್ತು ವಂಚನೆ ಕೇಸ್​ನಲ್ಲಿ ಭಾರತದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್​ ವಿರುದ್ಧ ಯುಎಸ್​ ನ್ಯಾಯಾಲಯ ಅರೆಸ್ಟ್​ ವಾರೆಂಟ್​ ಜಾರಿ ಮಾಡಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net