

Chapati : ಚಪಾತಿ ಭಾರತೀಯರ ಫೇವರಿಟ್ ಆಹಾರ ಎನ್ನುವುದರಲ್ಲಿ ಸಂಶಯವೇ ಇಲ್ಲ. ನಿತ್ಯವೂ ಚಪಾತಿ ತಿನ್ನುವವರಿದ್ದಾರೆ. ಹೀಗಾಗಿ ಬಹುತೇಕರ ಮನೆಯಲ್ಲಿ ಸಾಮಾನ್ಯವಾಗಿ ಮಾಡುವ ಆಹಾರಗಳಲ್ಲಿ ಚಪಾತಿ ಪ್ರಮುಖವಾಗಿದೆ. ಕೆಲವರು ತಮ್ಮ ಮನೆಯಲ್ಲಿ ವಾಸವಿರುವ ಸದಸ್ಯರನ್ನು ಎಣಿಸಿ ಚಪಾತಿ ಅಥವಾ ರೊಟ್ಟಿ ಮಾಡುವ ಅಭ್ಯಾಸವಿರುತ್ತದೆ. ಅದೇ ರೀತಿ ಮನೆಯ ಸದಸ್ಯರು ಕೂಡ ರೊಟ್ಟಿಗಳನ್ನು ಎಣಿಸಿದ ನಂತರವೇ ತಿನ್ನುತ್ತಾರೆ. ನಿಮಗೇನಾದರೂ ಚಪಾತಿಯನ್ನು ಎಣಿಸಿ ತಿನ್ನುವ ಅಭ್ಯಾಸವಿದ್ದರೆ ಇಂದೇ ನಿಲ್ಲಿಸಿ. ಏಕೆಂದೆರೆ, ವಾಸ್ತು ಪ್ರಕಾರ ಚಪಾತಿಯನ್ನು ಎಣಿಸುವುದು ಅಶುಭವೆಂದು ಪರಿಗಣಿಸಲಾಗಿದೆ.
ಚಪಾತಿ ಎಣಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಅಲ್ಲದೆ, ಗ್ರಹಗಳ ಮೇಲೂ ಪರಿಣಾಮ ಬೀರುತ್ತದೆಯಂತೆ. ಅದಕ್ಕಾಗಿಯೇ ಮನೆಯಲ್ಲಿ ಚಪಾತಿಯನ್ನು ಎಣಿಸಿ ಎಂದಿಗೂ ಮಾಡಬಾರದು ಮತ್ತು ತಿನ್ನುವಾಗಲೂ ಎಣಿಸಬಾರದು. ನೀವು ತಿಳಿದಿರಲೇಬೇಕಾದ ಚಪಾತಿಗೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ವಿಷಯಗಳು ಇಲ್ಲಿವೆ.
ಗೋಧಿ ಧಾನ್ಯಗಳು ಸೂರ್ಯ ದೇವರಿಗೆ ಸಂಬಂಧಿಸಿದ್ದು, ಚಪಾತಿಗಳನ್ನು ತಯಾರಿಸುವಾಗ ಅದನ್ನು ಎಣಿಸಿದರೆ ಅದು ಸೂರ್ಯ ದೇವರನ್ನು ಅವಮಾನಿಸಿದಂತಾಗುತ್ತದೆ ಮತ್ತು ನಮ್ಮ ಜಾತಕದಲ್ಲಿ ಸೂರ್ಯನನ್ನು ದುರ್ಬಲಗೊಳಿಸುತ್ತದೆ ಎಂದು ನಂಬಲಾಗಿದೆ. ಎಣಿಸುವುದರಿಂದ ಕುಟುಂಬದ ಸಂತೋಷ ಮತ್ತು ಶಾಂತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ.
ಮನೆಯಲ್ಲಿ ಚಪಾತಿ ಎಣಿಸಿದರೆ ಆರ್ಥಿಕ ಸ್ಥಿತಿ ದುರ್ಬಲವಾಗಲಿದೆ ಎಂದು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ಸಲಹೆಗಾರ ಪಂಡಿತ್ ಹಿತೇಂದ್ರ ಕುಮಾರ್ ಶರ್ಮಾ ಹೇಳಿದ್ದಾರೆ.
ಮನೆಯಲ್ಲಿ ಚಪಾತಿ ತಿಂದು ಉಳಿದ ರೊಟ್ಟಿಯನ್ನು ಬಿಸಾಡುವ ಬದಲು ಹಸುವಿಗೆ ತಿನ್ನಿಸಬೇಕು. ಹಸುಗಳಿಗೆ ಚಪಾತಿ ನೀಡುವುದರಿಂದ ಒಳ್ಳೆಯ ಕರ್ಮ ಫಲ ಸಿಗುತ್ತದೆ. ಅಲ್ಲದೆ, ಗ್ರಹಗತಿಯನ್ನು ಬಲಪಡಿಸುತ್ತದೆ. ಮನೆಯಲ್ಲಿನ ಸಮಸ್ಯೆಗಳೂ ದೂರವಾಗುತ್ತವೆ. ಹಾಗೆಯೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾಯಿಗೆ ಚಪಾತಿ ಕೊಟ್ಟರೆ ಪುಣ್ಯ ಹೆಚ್ಚುತ್ತದೆ ಎಂದು ಹಿತೇಂದ್ರ ಕುಮಾರ್ ಶರ್ಮಾ ತಿಳಿಸಿದ್ದಾರೆ.
ಇನ್ನು ಸತ್ತವರ ಮನೆಯಲ್ಲಿ ಚಪಾತಿ, ರೊಟ್ಟಿ ಮಾಡಬಾರದು. ಸತ್ತಾಗ ಮನೆಯಲ್ಲಿ ರೊಟ್ಟಿ ತಯಾರಿಸಿದರೆ ಕುಟುಂಬದವರ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಲ್ಲದೆ, ಮೃತರ ಆತ್ಮಕ್ಕೆ ಶಾಂತಿಯೂ ಸಿಗುವುದಿಲ್ಲ ಎಂಬ ನಂಬಿಕೆ ಇದೆ ಎಂದು ಪಂಡಿತ್ ಹಿದೇಂದ್ರ ಕುಮಾರ್ ಶರ್ಮಾ ಹೇಳಿದ್ದಾರೆ.
ನಾವು ಹಿಂದು ನಂಬಿಕೆಗಳ ಪ್ರಕಾರ ಹೋದರೆ, ಒಬ್ಬರು ಒಂದೇ ತಟ್ಟೆಯಲ್ಲಿ 3 ಚಪಾತಿಗಳನ್ನು ಇಡಬಾರದು. ಏಕೆಂದರೆ, ಒಬ್ಬ ವ್ಯಕ್ತಿಯು ಸತ್ತಾಗ 3 ಚಪಾತಿಗಳನ್ನು ತಯಾರಿಸಲಾಗುತ್ತದೆ ಮತ್ತು 13 ನೇ ದಿನದ ಶೋಕಾಚರಣೆಯಂದು 3 ಚಪಾತಿಗಳನ್ನು ಸತ್ತವರ ಗೌರವಾರ್ಥವಾಗಿ ಮಾಡಲಾಗುತ್ತದೆ. ಹಾಗೂ ತಟ್ಟೆಯಲ್ಲಿ ಮೂರು ಚಪಾತಿಗಳನ್ನು ಇಡಬಾರದು.
ಅತಿಥಿ ದೇವೋ ಭವ ಎಂಬುದು ಭಾರತದಲ್ಲಿನ ಪರಿಕಲ್ಪನೆಯಾಗಿದೆ. ಅತಿಥಿಗಳನ್ನು ದೇವರುಗಳೆಂದು ನಂಬಲಾಗಿದೆ. ಹೀಗಾಗಿ ಅತಿಥಿಗಳನ್ನು ನಿರಾಶೆಗೊಳಿಸುವುದನ್ನು ತಪ್ಪಿಸಬೇಕು. ನೀವು ಚಪಾತಿಗಳನ್ನು ತಯಾರಿಸುವಾಗ, ನಿಮ್ಮ ಮನೆ ಬಾಗಿಲಿಗೆ ಬರಬಹುದಾದ ಅಪರಿಚಿತ ಅತಿಥಿಗಳಿಗಾಗಿ ಯಾವಾಗಲೂ 2 ರಿಂದ 4 ಚಪಾತಿಗಳನ್ನು ಹೆಚ್ಚುವರಿ ಮಾಡಲು ಸಾಂಪ್ರದಾಯಿಕ ಚಿಂತನೆಯು ಹೇಳುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ. ಹಾಗೆಯೇ ಮೇಲಿನ ನಿಯಮಗಳು ಸಾಂಪ್ರದಾಯಿಕ ಚಿಂತನೆಯನ್ನು ಆಧರಿಸಿವೆ ಹೊರತು ವಿಜ್ಞಾನದಿಂದ ಬೆಂಬಲಿತವಾಗಿಲ್ಲ.