ನಮ್ಮ ರಾಷ್ಟ್ರಕ್ಕಾಗಿ ನಾವು ರಕ್ತ ಹರಿಸುವೆವು; ಬಿಲಾವಲ್ ಭುಟ್ಟೋಗೆ ಪವನ್​ ಕಲ್ಯಾಣ್​ ತಿರುಗೇಟು | Pawan Kalyan

dk - 2025-04-29T165258.519
Published on

Pawan Kalyan : ಸಿಂಧೂ ನೀರು ನಿಲ್ಲಿಸಿದರೆ ನದಿಗಳಲ್ಲಿ ರಕ್ತಹರಿಯುತ್ತದೆ ಎಂದು ಪಾಕಿಸ್ತಾನ ಪಿಪಲ್ಸ್​ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಬೆದರಿಕೆಗೆ ಅಗತ್ಯಬಿದ್ದರೆ ನಮ್ಮ ದೇಶಕ್ಕೆ ನಾವು ರಕ್ತ ಹರಿಸುವೆವು​ ಎಂದು ಆಂಧ್ರಪ್ರದೇಶ ಡಿಸಿಎಂ ಪವನ್​ ಕಲ್ಯಾಣ್ ತಿರುಗೇಟು ಕೊಟ್ಟಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಸ್ಥಗಿತಗೊಳಿಸುವ ಭಾರತದ ನಿರ್ಧಾರಕ್ಕೆ ಬಿಲಾವಲ್ ಭುಟ್ಟೋ-ಜರ್ದಾರಿ ಇತ್ತೀಚೆಗೆ ತೀಕ್ಷ್ಣ ಪ್ರತಿಕ್ರಿಯೆ(ಸಿಂಧೂ ನೀರು ನಿಲ್ಲಿಸಿದರೆ ನದಿಗಳಲ್ಲಿ ರಕ್ತಹರಿಯುತ್ತೆ) ನೀಡಿದ್ದರು.

ಬಿಲಾವಲ್ ಭುಟ್ಟೋ ಹೇಳಿಕೆಗೆ ಪ್ರತಿಕ್ರಿಯಿಸಿದ ಪವನ್ ಕಲ್ಯಾಣ್, "ಅವರು (ಪಾಕಿಸ್ತಾನ) ಕಳೆದ ಮೂರು ಯುದ್ಧಗಳನ್ನು ಹೇಗೆ ಸೋತರು ಎಂಬುದನ್ನು ನೆನಪಿಸಬೇಕು. ನಾವು ಅವರಿಗೆ ದೃಶ್ಯಗಳನ್ನು ಕಳುಹಿಸಬೇಕು. ಸುಮಾರು 70,000 ಸೈನಿಕರನ್ನು ಹೇಗೆ ನಡೆಸಿಕೊಳ್ಳಲಾಯಿತು ಎಂದು ನೆನಪು ಮಾಡಿಕೊಳ್ಳಬೇಕು. ಪಾಕಿಸ್ತಾನಿಗಳು ಮಿತಿಮೀರಲು ಪ್ರಯತ್ನಿಸಿದರೆ, ಪ್ರತಿಯೊಬ್ಬ ಭಾರತೀಯನು ಪಾಕಿಸ್ತಾನಕ್ಕೆ ಬರುತ್ತಾನೆ. ಅಲ್ಲದೆ, ಅಗತ್ಯವಿದ್ದಲ್ಲಿ, ನಾವು ರಾಷ್ಟ್ರಕ್ಕಾಗಿ ನಮ್ಮ ರಕ್ತವನ್ನು ಚೆಲ್ಲುತ್ತೇವೆ. ಅವರಿಗೆ ಅವರ ಹಿಂದಿನದನ್ನು ನೆನಪಿಸಬೇಕು" ಎಂದು ಹೇಳಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net