

Pakistani Citizen : ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನ ವಿರುದ್ಧ ಭಾರತ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೂ 48 ಗಂಟೆಯೊಳಗೆ ಭಾರತ ಬಿಟ್ಟು ತೊಲಗುವಂತೆ ಖಡಕ್ ಎಚ್ಚರಿಕೆ ನೀಡಿದೆ.
ಈ ಕಠಿಣಕ್ರಮಗಳ ಹಿನ್ನೆಲೆ ಸರ್ಕಾರ ನೀಡಿದ ಗುಡವಿನಲ್ಲಿ ಹಲವು ಪಾಕ್ ಪ್ರಜೆಗಳು ತಮ್ಮ ರಾಷ್ಟ್ರಕ್ಕೆ ಹಿಂತಿರುಗಿದ್ದಾರೆ. ಆದರೆ, ಇನ್ನು ಕೆಲವರು ಭಾರತದಲ್ಲಿಯೇ ಉಳಿದಿದ್ದು, ಸರ್ಕಾರದ ಈ ಕಠಿಣ ನಿರ್ಧಾರದಿಂದ ದಿಕ್ಕು ದೊಚದಂತೆ ಆಗಿದ್ದಾರೆ.
ದೆಹಲಿಯ ಸಮೀಪದಲ್ಲಿರುವ ಬುಲಂದ್‌ಶಹರ್‌ನಲ್ಲಿರುವ ಭಾರತೀಯ ನಾಗರಿಕರನ್ನು ಮದುವೆಯಾಗಿ ದೀರ್ಘಾವಧಿಯ ವೀಸಾದಲ್ಲಿ ವಾಸಿಸುತ್ತಿರುವ 18 ಪಾಕಿಸ್ತಾನಿ ಪ್ರಜೆಗಳ ಜೀವನ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯು ಅವರ ಅನಿಶ್ಚಿತತೆಗೆ ತಳ್ಳಿದೆ. ಈ 18 ಪಾಕ್ ಪ್ರಜೆಗಳಲ್ಲಿ ಒಬ್ಬರಾದ ಮರಿಯಮ್, ಮೂರು ತಿಂಗಳು ಗರ್ಭಿಣಿಯಾಗಿದ್ದು, ತನ್ನ ಅತಂತ್ರದ ಪರಿಸ್ಥಿತಿ ಬಗ್ಗೆ ಆಳಲು ತೊಡಿಕೊಂಡಿದ್ದಾರೆ.
ಯಾರು ಈ ಮರಿಯಮ್..?
ಇಸ್ಲಾಮಾಬಾದ್‌ನವರಾದ ಮರಿಯಮ್, ಜುಲೈ 8, 2022 ರಂದು ಬುಲಂದ್‌ಶಹರ್ ಜಿಲ್ಲೆಯ ಖುರ್ಜಾ ಪಟ್ಟಣದ ನಿವಾಸಿ ಅಮೀರ್ ಅವರನ್ನು ವಿವಾಹವಾದರು.
ಮರಿಯಮ್ ಹೇಳೊದೇನು..?
"ನಾನು ಒಂದು ಕಾಲದಲ್ಲಿ ಪಾಕಿಸ್ತಾನದ ಮಗಳಾಗಿದ್ದೆ. ಆದರೆ, ಇಂದು ನಾನು ಭಾರತದ ಸೊಸೆ. ನಾನು ಇದೀಗ ಮೂರು ತಿಂಗಳ ಗರ್ಭಿಣಿ. ದಯವಿಟ್ಟು ನನಗೆ ಇಲ್ಲಿಯೇ ಇರಲು ಬಿಡಿ. ಪೌರತ್ವಕ್ಕೂ ಅರ್ಜಿ ಸಲ್ಲಿಸಿರುವುದಾಗಿ'' ಮರಿಯಮ್ ಖಾಸಗಿ ಸುದ್ದವಾಹಿನಿಗೆ ತಿಳಿಸಿದ್ದಾರೆ.
ಪತಿ ಅಮೀರ್ ಹೇಳಿದ್ದೇನು..?
"ಸುಮಾರು ಮೂರು ವರ್ಷಗಳ ಕಾಲ, ನಾವು ಪ್ರತ್ಯೇಕವಾಗಿ ವಾಸಿಸುತ್ತಿದ್ದೆವು" ಎಂದು ಅಮೀರ್ ಹೇಳಿದರು. "ವೀಸಾ ಸಮಸ್ಯೆಗಳು, ಕಾಗದಪತ್ರಗಳು... ಎಲ್ಲವೂ ವಿಳಂಬವಾಯಿತು. ಅವಳು ಇಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ನಾನು ಭಾರತವನ್ನು ಬಿಡಲು ಸಾಧ್ಯವಾಗಲಿಲ್ಲ, ನಮಗೆ ಬೇರೆ ದಾರಿಯಿರಲಿಲ್ಲ" ಎಂದು ಅಮೀರ್ ಹೇಳಿದರು.
ಇದೇ ಫೆ.12, 2025 ರಂದು, ಮರಿಯಮ್ ಮೂರು ತಿಂಗಳ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದು ತನ್ನ ಪತಿಯ ಮನೆಯಲ್ಲಿ ನೆಲೆಸಿದಳು. ಆದಾಗ್ಯೂ, ಅವಳ ಸಂತೋಷವು ಅಲ್ಪಕಾಲಿಕವಾಗಿತ್ತು. ಇದೀಗ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯು ಅವಳ ಜೀವನದಲ್ಲಿ ಪ್ರಕ್ಷುಬ್ಧತೆಯನ್ನು ತಂದಿದೆ.(ಏಜೆನ್ಸೀಸ್)