ಬೆಂಗ್ಳೂರಿನ ಮಾರುಕಟ್ಟೆಗಳಲ್ಲಿ ಗಗನಕ್ಕೇರಿದ ತರಕಾರಿ ಬೆಲೆ: ಗ್ಯಾರಂಟಿ ಎಫೆಕ್ಟ್ ಎಂದು ಕಾಂಗ್ರೆಸ್​ ವಿರುದ್ಧ ಜನಾಕ್ರೋಶ

BNG Market
Published on

ಬೆಂಗಳೂರು: ಇತ್ತೀಚಿಗೆ ಸುರಿದ ಮಳೆಯಿಂದ ತರಕಾರಿಗಳು ಕೊಳೆತು ನಾಶವಾಗಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿವೆ. ನಗರದ ಮಾರುಕಟ್ಟೆಗಳಲ್ಲಿ ತರಕಾರಿಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಗ್ರಾಹಕರು ಕಾಂಗ್ರೆಸ್​ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಈ ಕೆಳಕಂಡಂತಿದೆ.

* ಬೀನ್ಸ್ (ಕೆಜಿಗೆ 125 ರೂಪಾಯಿ)

* ಮೂಲಂಗಿ (ಕೆಜಿಗೆ 46 ರೂಪಾಯಿ)

* ಗುಂಡುಬದನೆ (ಕೆಜಿಗೆ 78ರೂಪಾಯಿ)

* ಟೊಮೊಟೋ (ಕೆಜಿಗೆ 46 ರೂಪಾಯಿ)

* ಬಟಾಣಿಗಳು (ಕೆಜಿಗೆ 148 ರೂಪಾಯಿ)

* ಬ್ರೋಕೋಲಿ (ಕೆಜಿಗೆ 200 ರೂಪಾಯಿ)

* ನವಿಲು ಕೋಸು (ಕೆಜಿಗೆ 63 ರೂಪಾಯಿ)

* ನುಗ್ಗೆಕಾಯಿ (ಕೆಜಿಗೆ 80 ರೂಪಾಯಿ)

* ಕೊತ್ತಂಬರಿಸೊಪ್ಪು (ಕೆಜಿಗೆ 106 ರೂಪಾಯಿ)

* ಬೆಂಡೆಕಾಯಿ (ಕೆಜಿಗೆ 54 ರೂಪಾಯಿ)

* ಶುಂಠಿ (ಕೆಜಿಗೆ 230 ರೂಪಾಯಿ)

* ಕ್ಯಾರೆಟ್ (ಕೆಜಿಗೆ 50 ರೂಪಾಯಿ)

ಮುಂದಿನ 2 ತಿಂಗಳ ಕಾಲ ಇದೇ ದರ ಮುಂದುವರಿಯುವ ಸಾಧ್ಯತೆ ಇದೆ. ಕಲಾಸಿಪಾಳ್ಯ, ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ ಹಾಗೂ ಯಶವಂತಪುರ ಮಾರುಕಟ್ಟೆಗಳಲ್ಲಿ ಮಾತ್ರವಲ್ಲ ಹಾಪ್‌ಕಾಮ್ಸ್​ನಲ್ಲೂ ತರಕಾರಿಗಳ ಬೆಲೆ‌ ಏರಿಕೆಯಾಗಿವೆ. ಕಾಂಗ್ರೆಸ್​ ಉಚಿತ ಗ್ಯಾರಂಟಿಗಾಗಿ ಬೆಲೆ ಏರಿಸಿವೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಕಾಂಗ್ರೆಸ್​ ವಿರುದ್ಧ ಆಕ್ರೋಶ

ತರಕಾರಿಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಪ್ರತಿಯೊಂದು ತರಕಾರಿಗಳ ಬೆಲೆ 100 ರೂ. ದಾಟಿದೆ. ಕಾಂಗ್ರೆಸ್​ನವರು ಗ್ಯಾರಂಟಿ ತಂದು ಇಲ್ಲಿ ಜಾಸ್ತಿ ಮಾಡಿದ್ದಾರೆ. ನಮಗೆ ಸರ್ಕಾರದಿಂದ ಯಾವುದೇ ಉಚಿತ ಬೇಕಿಲ್ಲ. ಪ್ರತಿಯೊಂದು ಬೆಲೆ ಜಾಸ್ತಿ ಆದರೆ ಜೀವನ ನಡೆಸಲು ತುಂಬಾ ಕಷ್ಟ ಎಂದು ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ.

ವ್ಯಾಪಾರಿಗಳಿಂದಲೂ ಬೇಸರ

ಕೆ.ಆರ್. ಮಾರುಕಟ್ಟೆಯ ತರಕಾರಿ ವ್ಯಾಪಾರಿ ಸಹ ಹೇಳಿಕೆ ನೀಡಿದ್ದಾರೆ. ಪ್ರತಿಯೊಂದು ತರಕಾರಿಗಳ ಬೆಲೆ ಜಾಸ್ತಿ ಆಗಿದೆ. ವ್ಯಾಪಾರ ಏನು ಇಲ್ಲ. ಗ್ರಾಹಕರು ಸಹ ಬರುತ್ತಿಲ್ಲ. ಬೆಲೆ ಏರಿಕೆಯಿಂದ ಒಂದು ಕೆಜಿ ತೆಗೆದುಕೊಳ್ಳವರು ಅರ್ಧ ಕೆಜೆ ತೆಗೆದುಕೊಳ್ಳುತ್ತಿದ್ದಾರೆ. ಮಳೆಯಿಂದಾಗಿ ಬೆಲೆ ಏರಿಕೆ ಆಗಿದೆ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net