More

  ಉತ್ತರಕಾಶಿ ಸುರಂಗ ಕುಸಿತ: ಅಂತಿಮ ಹಂತ ತಲುಪಿದ ರಕ್ಷಣಾ ಕಾರ್ಯಾಚರಣೆ; 41 ಕಾರ್ಮಿಕರು ಶೀಘ್ರವೇ ಹೊರಗೆ!

  ಉತ್ತರಾಖಂಡ: ನಿರ್ಮಾಣ ಹಂತದದಲ್ಲಿದ್ದ ಉತ್ತರಕಾಶಿ ಸುರಂಗ ದಿಢೀರ್​ ಕುಸಿತ ಕಂಡ ಪರಿಣಾಮ ಅದರ ಅವಶೇಷಗಳಡಿ ಸಿಲುಕಿದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತರಲು ಕಳೆದ 11 ದಿನಗಳಿಂದ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಇದೀಗ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪಿದ್ದು, ಸಿಲುಕಿರುವ 41 ಕಾರ್ಮಿಕರನ್ನು ಶೀಘ್ರವೇ ತಲುಪುವ ಪ್ರಯತ್ನಗಳು ಭರದಿಂದ ಸಾಗುತ್ತಿವೆ ಎಂದು ಇತ್ತೀಚಿನ ವರದಿಯೊಂದು ಮಾಹಿತಿ ನೀಡಿದೆ.

  ಇದನ್ನೂ ಓದಿ: ನಾಯಕಿಯಾದ ಈ ಮೌಂಟ್​ ಕಾರ್ಮೆಲ್​ ಕಾಲೇಜಿನ ಹುಡುಗಿ ; ಹಳ್ಳಿ ಹುಡುಗಿ ಲುಕ್​ನಲ್ಲಿ ಬಿಂದು

  ಈಗಾಗಲೇ ಆಂಬ್ಯುಲೆನ್ಸ್‌ಗಳು ಪ್ರಸ್ತುತ ಸುರಂಗದ ಹೊರಗೆ ಕಾಯುತ್ತಿದ್ದು, ರಕ್ಷಣಾ ಕಾರ್ಯವನ್ನು ವೇಗಗೊಳಿಸಲು ಸಹಾಯ ಮಾಡಲು ದೆಹಲಿಯಿಂದ ಏಳು ತಜ್ಞರ ತಂಡವು ಸ್ಥಳಕ್ಕೆ ತಲುಪಿದೆ. ಈ ಮೂಲಕ ಕಾರ್ಯವನ್ನು ಮತ್ತಷ್ಟು ಸುಗುಮಗೊಳಿಸಲು ಭಾರೀ ಶ್ರಮಿಸುತ್ತಿದೆ.

  ಈ ಕುರಿತು ಪಾರುಗಾಣಿಕಾ ಅಧಿಕಾರಿ ಹರ್ಪಾಲ್ ಸಿಂಗ್ ಬುಧವಾರ ರಾತ್ರಿ ಮಾತನಾಡಿದ್ದು, “ಶಿಲಾಖಂಡ ರಾಶಿಗಳಿಗೆ ಅಡ್ಡಲಾಗಿ ಕೊರೆಯುವ ಮೂಲಕ 44 ಮೀಟರ್‌ಗಳ ಪೈಪ್‌ಗಳನ್ನು ಸೇರಿಸಲಾಗಿದೆ. ಆದರೆ ಎನ್​ಡಿಆರ್​ಎಫ್​ ಸಿಬ್ಬಂದಿ ಅದರೊಳಗೆ ಯಂತ್ರವನ್ನು ಕತ್ತರಿಸಲು ಸಾಧ್ಯವಾಗದ ಉಕ್ಕಿನ ರಾಡ್‌ಗಳನ್ನು ಕಂಡುಕೊಂಡರು” ಎಂದರು.

  ಇದನ್ನೂ ಓದಿ:  ಜಾತಿ ಜೇನುಗೂಡು ಚಿಂತೆಗೀಡು: ರಕ್ಷಣಾತ್ಮಕ ತಂತ್ರಕ್ಕೆ ಸರ್ಕಾರ ಮೊರೆ, ಜಾತಿಗಣತಿ ವರದಿ ಸಾರ ಬಳಕೆಗೆ ಚಿಂತನೆ

  “ಎನ್‌ಡಿಆರ್‌ಎಫ್ ಸಿಬ್ಬಂದಿ ಆ ರಾಡ್‌ಗಳನ್ನು ಕತ್ತರಿಸುತ್ತಾರೆ. ತದನಂತರ ನಾವು ಯಂತ್ರವನ್ನು ಮತ್ತೆ ಬಳಸುತ್ತೇವೆ. ಮುಂದಿನ 5 ಗಂಟೆಗಳಲ್ಲಿ ಎರಡು ಪೈಪ್‌ಗಳು ಹೋಗಲು ದಾರಿ ಮಾಡಿಕೊಡಲು ಒಂದು ಗಂಟೆಯಲ್ಲಿ ರಾಡ್‌ಗಳನ್ನು ಕತ್ತರಿಸಬಹುದು ಎಂಬ ಸಂಪೂರ್ಣ ವಿಶ್ವಾಸವಿದೆ. ರಕ್ಷಣಾ ತಂಡವು ಸಿಲುಕಿರುವ ಕಾರ್ಮಿಕರನ್ನು ಬೆಳಗ್ಗೆ 8:30ರ ಹೊತ್ತಿಗೆ ತಲುಪಬಹುದು” ಎಂದು ಸಿಂಗ್ ಭರವಸೆ ವ್ಯಕ್ತಪಡಿಸಿದರು. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).

  BBKS10: ವರ್ತೂರ್​ ಸಂತೋಷ್ ಪ್ರಕಾರ ಮನೆಯೊಳಗೆ ‘ಕೋಗಿಲೆ-ಕಾಗೆ’ ಯಾರು?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts