ನಾಯಕಿಯಾದ ಈ ಮೌಂಟ್​ ಕಾರ್ಮೆಲ್​ ಕಾಲೇಜಿನ ಹುಡುಗಿ ; ಹಳ್ಳಿ ಹುಡುಗಿ ಲುಕ್​ನಲ್ಲಿ ಬಿಂದು

Kerebete (4)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

‘ಜೋಕಾಲಿ’ ಮತ್ತು ‘ರಾಜಹಂಸ’ ಚಿತ್ರಗಳ ಬಳಿಕ ನಟ ಗೌರಿಶಂಕರ್ ನಾಯಕನಾಗಿರುವ ಚಿತ್ರ ‘ಕೆರೆಬೇಟೆ’. ರಾಜ್‌ಗುರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ನಾಯಕನ ಫಸ್ಟ್ ಲುಕ್ ಈಗಾಗಲೇ ರಿಲೀಸ್ ಆಗಿದ್ದು, ಇತ್ತೀಚೆಗಷ್ಟೆ ನಾಯಕಿ ಮೊದಲ ನೋಟ ಬಿಡುಗಡೆ ಮಾಡಲಾಗಿದೆ. ‘ಕೆರೆಬೇಟೆ’ ಮೂಲಕ ಮೌಂಟ್ ಕಾರ್ಮೆಲ್ ವಿದ್ಯಾರ್ಥಿನಿ ಬಿಂದು, ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಮಲೆನಾಡಿನಲ್ಲಿ ಕೆರೆಗಳಲ್ಲಿ ನೀರು ಕಡಿಮೆಯಾದಾಗ ನಡೆಯುವ ಆಚರಣೆಯ ಸುತ್ತ ಚಿತ್ರದ ಕಥೆ ಸಾಗುತ್ತದೆ. ಹಳ್ಳಿ ಹುಡುಗಿ ಪಾತ್ರದಲ್ಲಿ ಬಿಂದು ನಟಿಸುತ್ತಿದ್ದು, ‘ಕಾಲೇಜು ದಿನಗಳಲ್ಲಿ ರ್ಯಾಂಪ್​ ವಾಕ್, ಫ್ಯಾಷನ್​ ಶೋ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ನಾಟಕಗಳಲ್ಲಿ ಭಾಗವಹಿಸುತ್ತಿದ್ದೆ. ಆಗ ಎಲ್ಲರೂ ನನ್ನ ಅಭಿನಯ ನೋಡಿ ಮೆಚ್ಚುತ್ತಿದ್ದರು. ಆ ದಿನಗಳಲ್ಲೇ ನನಗೆ ಸಿನಿಮಾದಲ್ಲಿ ನಟಿಸುವ ಒಲವು ಮೂಡಿದೆ. ಕ್ರಮೇಣ ಆಡಿಷನ್‌ಗಳಿಗೆ ಹೋಗತೊಡಗಿದೆ. ಅದೇ ರೀತಿ ‘ಕೆರೆಬೇಟೆ’ ಚಿತ್ರಕ್ಕೆ ಆಯ್ಕೆಯಾದೆ. ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದೇನೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.

ವಿಶೇಷ ಅಂದರೆ ಚಿತ್ರತಂಡದವರೇ ನೀನಾಸಂ ತರಬೇತುದಾರರಿಂದ ಬಿಂದುಗೆ ಅಭಿನಯ ತರಬೇತಿ ನೀಡಿದರಂತೆ. ಕೆಲ ದಿನಗಳ ಹಿಂದಷ್ಟೇ ‘ಕೆರೆಬೇಟೆ’ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net